# ದೇವಸ್ಥಾನದ ಅಭಿವೃದ್ಧಿಗೆ ಬದ್ಧ, ಅಮರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಸಂಸದ ಖಂಡ್ರೆ – Samruddiya Nele
ರಾಜಕೀಯ

ದೇವಸ್ಥಾನದ ಅಭಿವೃದ್ಧಿಗೆ ಬದ್ಧ, ಅಮರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಸಂಸದ ಖಂಡ್ರೆ

Amazon.in/ONLINE SHOPPING

ಅಮರೇಶ್ವರ ದೇವಸ್ಥಾನ ಅಭಿವೃದ್ಧಿಗೆ ಕೋಟಿ ಅನುದಾನ ಘೋಷಿಸಿದ ಖಂಡ್ರೆ 

ಪಟ್ಟಣದ ಉದ್ಭವಲಿಂಗ ಖ್ಯಾತಿಯ ಶ್ರೀ ಅಮರೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಒಂದು ಕೋಟಿ ಅನುದಾನ ನೀಡುವದಾಗಿ ಸಂಸದ ಸಾಗರ ಖಂಡ್ರೆ ಘಷಣೆ ಮಾಡಿದ್ದಾರೆ. ಸೋಮವಾರ ಪಟ್ಟಣದ ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅವರು ಬಳಿಕ ಮಾತನಾಡಿ, ಅಮರೇಶ್ವರ ದೇವಸ್ಥಾನದ ಮಹಾದ್ವಾರ ಸೇರಿದಂತೆ ಜೀರ್ಣೋದ್ಧಾರ ಕಾಮಗಾರಿಗೆ ಸಂಸದರ ಅನುದಾನದಡಿಯಲ್ಲಿ ೧ ಕೋಟಿ ಅನುದಾನ ನೀಡುತ್ತೇನೆ. ಕರ್ನಾಟಕ ಮಾತ್ರವಲ್ಲದೇ ನೆರೆಯ ತೆಲಂಗಾಣ, ಮಹಾರಾಷ್ಟ  ರಾಜ್ಯಗಳಿಂದಲೂ ಪ್ರತಿ ವರ್ಷ ಲಕ್ಷಾಂತರ ಭಕ್ತರು ಅಮರೇಶ್ವರ ದೇವರ ದರ್ಶನ ಪಡೆಯುತ್ತಾರೆ.

ಈ  ದೇವಸ್ಥಾನದ  ಅಭಿವೃದ್ಧಿಯಿಂದ ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗಲಿದೆ ಎಂದರು

ದೇವಸ್ಥಾನದ ಸಮಿತಿಯಲ್ಲಿಯೂ ಅನುದಾನವಿದೆ. ಆದರೆ ಆ ಹಣವನ್ನು ಇಲಾಖೆಯ ಅಧಿಕಾರಿಗಳು ಬೇರೆಯ ಅಭಿವೃದ್ಧಿ ಮಾಡಲಿ. ನಾನು ನನ್ನ ಸಂಸದರ ಅಡಿಯಲ್ಲಿ ಅನುದಾನ ನೀಡುತ್ತೇನೆ. ಇನ್ನೂ ಅವಶ್ಯಕತೆಯಿದ್ದಲ್ಲಿ ಮುಜರಾಯಿ ಇಲಾಖೆ ಅಥವಾ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ದೇವಸ್ಥಾನದ ಮಹಾದ್ವಾರ, ಗೋಪುರ, ಕಲ್ಯಾಣ ಮಂಟಪ, ಭಕ್ತಾದಿಗಳಿಗೆ ವಾಸ್ತವ್ಯದ ವ್ಯವಸ್ಥೆನ ಸೇರಿದಂತೆ ದೇವಸ್ಥಾನವನ್ನು ಇನ್ನಷ್ಟು ಆಕರ್ಷಕವಾಗಿಸಲು ಅಗತ್ಯವಿರುವ ಕಾಮಗಾರಿಯ ಬಗ್ಗೆ ತಹಸೀಲ್ದಾರ ಮಹೇಶ ಪಾಟೀಲ್ ಸೇರಿದಂತೆ ಸಾರ್ವಜನಿಕರೊಂದಿಗೆ ಚರ್ಚಿಸಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್, ತಾಪಂ ಮಾಜಿ ಅಧ್ಯಕ್ಷ ನೆಹೆರು ಪಾಟೀಲ್, ಭಾಲ್ಕಿ ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸೋನು ದೇಶಮುಖ, ಬಸವರಾಜ ದೇಶಮುಖ, ಪಪಂ ಸದಸ್ಯ ಸುನಿಲಕುಮಾರ ದೇಶಮುಖ, ಶಿವರಾಜ ದೇಶಮುಖ, ರಾಮಣ್ಣ ವಡಿಯಾರ್, ಅನಿಲ ನಿರ್ಮಳೆ, , ಶರಣಪ್ಪ ಪಾಟೀಲ್, ರಾಜಕುಆರ ಎಡವೆ, ಶಂಕು ನಿಶ್ಪತೆ, ಧನರಾಜ ಮುಸ್ತಾಪುರ, ಸತೀಶ ವಗ್ಗೆ, ಸೂರ್ಯಕಾಂತ ಮಾಲೆ, ರತ್ನಾದೀಪ ಕಸ್ತೂರೆ ಸೇರಿದಂತೆ ಅನೇಕರಿದ್ದರು.

ಅಭಿಮಾನಿಯ ಹರಿಕೆ ತೀರಿಸಿದ ಖಂಡ್ರೆ

ಸಾಗರ ಖಂಡ್ರೆ ಅವರ ಸಂಸದನಾದರೇ ಅವರಿಂದ ವಿಶೇ ಪೂಜೆ ಸಲ್ಲಿಸುವ ಮೂಲಕ ೧೦೧ ಟೆಂಗಿನಕಾಯಿ ಒಡೆಯುವದಾಗಿ ಸಂಸದ ಸಾಗರ ಖಂಡ್ರೆ ಅವರ ಅಭಿಯಾನಿ ಅನಿಲ ನಿರ್ಮಳೆ ಅಮರೇಶ್ವರ ದೇವರ ಮೇಲೆ ಹರಿಕೆ ಮಾಡಿದರು. ಆದ್ದರಿಂದ ಸಾಗರ ಖಂಡ್ರೆ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಟೆಂಗಿನಕಾಯಿ ಎರಡು ಟೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಉಳಿದ ೯೯ ಟೆಂಗಿನಕಾಯಿಯನ್ನು ಸಂಸದ ಸಾಗರ ಖಂಡ್ರೆ ಅವರ ಹೆಸರಿನ ಮೇಲೆ ಅನಿಲ ನಿರ್ಮಳೆ ಒಡೆದು ಸಾರ್ವಜನಿಕರಿಗೆ ಸಿಹಿ ತಿನ್ನಿಸಿ ಹರಿಕೆ ತೀರಿಸಿರುವುದು ಎಲ್ಲರ ಗಮನ ಸೆಳೆಯಿತು.

ಖಂಡ್ರೆಗೆ ಬಾಜಾ ಭಜಂತ್ರಿಯೊAದಿಗೆ ಅದ್ಧೂರಿ ಸ್ವಾಗತ

ಡೋಂಗರಗಾoವ ಗ್ರಾಮಕ್ಕೆ ಸಂಸದ ಸಾಗರ ಖಂಡ್ರೆ ಭೇಟಿ ನೀಡುತ್ತಿದಂತೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಬಾಜಾ ಭಜಂತ್ರಿಯೊ೦ದಿಗೆ ಮುಖ್ಯರಸ್ತೆಯಲ್ಲಿ ಅದ್ಧೂರಿ ಮೆರವಣಿಗೆ ನಡೆಸಿದರು. ನಂತರ ಸಂಸದ ಸಾಗರ ಖಂಡ್ರೆ ಅವರಿಗೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಈ ವೇಳೆ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ. ಅಲ್ಲದೇ ಗ್ರಾಮದಲ್ಲಿ ನೀರಿನ ಸಮಸ್ಯೆಯಿದೆ ಎಂದು ಸಮಸ್ಯೆ ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಖಂಡ್ರೆ ತಾಪಂ ಇಒ ಶಿವಕುಮಾರ ಘಾಟೆ ಅವರಿಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ತಿಳಿಸಿದರು. ಜೆಜೆಎಂ ಕಾಮಗಾರಿಯ ಬಗ್ಗೆ ಅಧಿಕಾರಿಗಳಿಗೆ ಮಾತನಾಡಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸುವದಾಗಿ ಭರವಸೆ ನೀಡಿದರು. ಕೊಳ್ಳುರ್ ಗ್ರಾಮದಲ್ಲಿಯೂ ಖಂಡ್ರೆ ಅವರಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಅಲೆಮಾರಿ ಜನರ ಸಮಸ್ಯೆ ಆಲಿಸಿದ ಖಂಡ್ರೆ

ಔರಾದ್ ಪಟ್ಟಣದ ಅಲೆಮಾರಿ ಜನಾಂಗ ವಾಸಿಸುವ ಗುಡಿಸಲು ಮನೆಗಳಿಗೆ ಭೇಟಿ ನೀಡಿದ ಸಂಸದ ಸಾಗರ ಖಂಡ್ರೆ ಅವರ ಸಮಸ್ಯೆ ಆಲಿಸಿದರು. ಈ ವೇಳೆ ಮಾತನಾಡಿದ ಅವರು ಈಗಾಗಲೇ ೨ ಎಕರೆ ಜಮೀನು ಮಂಜುರಾತಿಯಾಗಿದೆ. ಇನ್ನೂ ೨ ಎಕರೆ ಜಮೀನು ಮಂಜುರಾತಿ ಮಾಡಲಾಗುತ್ತದೆ. ಮನೆಗಳಿಗಾಗಿ ತಾವುಗಳು ಅರ್ಜಿ ಸಲ್ಲಿಸುವಂತೆ ಎಲ್ಲ ಜನರಿಗೆ ಮನವರಿಕೆ ಮಾಡಿದರು. ನಾವುಗಳು ೪೦ ವರ್ಷದಿಂದ ಇಲ್ಲಿಯೇ ವಾಸವಾಗಿದ್ದೇವೆ. ಆದರೆ ಇಲ್ಲಿಯವರಗೆ ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಕುಡಲೇ ತಾವುಗಳು ನಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎಂದು ಗೊಳು ತೋಡಿಕೊಂಡರು.

 

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!