ಬೀದರ:- ಇಂದು ದಿನಾಂಕ 15-8-2025 ರಂದು ಬೀದರ ಜಿಲ್ಲಾ ಸವಿತಾ ಸಮಾಜ ಭವನದಲ್ಲಿ ಶ್ರೀ ಶಾಮರಾವ ಮೊರ್ಗಿಕರ ಉಪಾಧ್ಯಕ್ಷರು ಬೀದರ ಜಿಲ್ಲಾ ಸವಿತಾ ಸಮಾಜ ಅಡ್ಯಾಕ್ ಕಮಿಟಿ ರವರ ನೇತೃತ್ವದಲ್ಲಿ ದ್ವಜಾರೋಹಣ ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿಗಳಾಗಿ ಬೀದರ ಜಿಲ್ಲಾ ಸವಿತಾ ಸಮಾಜದ ಮಾಜಿ ಉಪಾಧ್ಯಕ್ಷರು ಆದ ಸ್ವರ್ಗಿಯ ಶ್ರೀ ಶಂಕರರಾವ್ ಬಿರ್ಗಿ ರವರ ಧರ್ಮ ಪತ್ನಿ ರವರು ಶ್ರೀಮತಿ ರತ್ನಮ್ಮ ಸುಮಾರು 95 ವರ್ಷದ ಅತೀ ಹಿರಿಯರಾದ ಇವರು ದ್ವಜಾರೋಹಣ ನೇರವೇರಿಸಿದರು.
ಈ ಸಂಧರ್ಭದಲ್ಲಿ ಸಮಾಜದ ಮುಖಂಡರುಗಳಾದ ಶ್ರೀ ಶಾಮರಾವ್ ಮೊರ್ಗಿಕರ್, ಪ್ರಕಾಶ್ ಹೊಕ್ರಾಣ, ಉಮೇಶ್ ಕುಮಾರ ಗೊಂದೆಗಾವ್, ಪ್ರಕಾಶ್ ಮೊರ್ಗಿಕರ್, ಸಂಜೀವಕುಮಾರ ಮೊರ್ಗಿಕರ್, ರಮೇಶ್ ತೀರ್ಮಾನದಾರ್ ಮಾತನಾಡಿದರು. ಸಮಾಜದ ಅಡ್ಯಾಕ್ ಕಮಿಟಿಯ ಸದಸ್ಯರು ಆದ ಶ್ರೀ ದತ್ತಾತ್ರೇಯ ಚೋದ್ರಿ ಹಾಗೂ ಸಮಾಜದ ಗುರು ಹಿರಿಯರು ಯುವ ನಾಯಕರುಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಸಂಚಾಲನೇ ಶ್ರೀ ಸಂಜೀವಕುಮಾರ ಪೂಜಾರಿ ನೇರವೇರಿಸಿದರು.
ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾದ ಹಿರಿಯರಾದ ಶ್ರೀಮತಿ ರತ್ನಮ್ಮ ಬೀರಗಿ, ಸವಿತಾ ಸಮಾಜ ವಧು ವರರ ವೇದಿಕೆಯ ಮುಖ್ಯಸ್ಥರಾದ ಶ್ರೀ ರಮೇಶ ತಿರಮನದಾರ ಹಾಗೂ ಸಮಾಜ ಸೇವಕ ಶ್ರೀ ಸಂಗಮೇಶ ಯಣಕೂರ ಅವರನ್ನು ಸನ್ಮಾನಿಸಲಾಯಿತು.