ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಓಡಿಸ್ಸಾ ಮೂಲದ ವಿದ್ಯಾರ್ಥಿನಿಯೊಬ್ಬಳು ತನ್ನ ಹುಟ್ಟು ಹಬ್ಬದ ದಿನದಂದೇ ಆತ್ಮಹತ್ಯೆ(!)
ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಓಡಿಸ್ಸಾ ಮೂಲದ ವಿದ್ಯಾರ್ಥಿನಿಯೊಬ್ಬಳು ತನ್ನ ಹುಟ್ಟು ಹಬ್ಬದ ದಿನದಂದೇ ಆತ್ಮಹತ್ಯೆ(!) ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಯಾಕೆ? ಏನು ಕಾರಣ? ಒಂದು ದಿನ ಮೊದಲು ಸ್ಟುಂಡೆಂಟ್ ವೆಲ್ಫೇರ್ ಅಧಿಕಾರಿಗೆ ಭೇಟಿಯಾಗಿ ಕಣ್ಣೀರುಗರೆಯುತ್ತ ಹೋಗಿದ್ದಾಳೆ. ಏನು ನಡೆಯುತ್ತಿದೆ ಕೇ.ವಿ.ವಿ.ಯಲ್ಲಿ? ಒಂದು ಎರಡು ಆತ್ಮಹತ್ಯೆ ಕೇಸುಗಳು. ಒಂದು ಆತ್ಮಹತ್ಯೆ ಪ್ರಯತ್ನ. ಇನ್ನೊಂದು ಸಾವು. ಆದರೆ ವಿಸಿಗೆ ಇದು ಮುಖ್ಯ ವಿಷಯವಲ್ಲ. ಅವರಿಗೇನಿದ್ದರೂ ಇಡೀ ಕೇವಿವಿಯನ್ನು ಕೋಮುವಾದಿ ಅಡ್ಡೆ ಮಾಡುವುದಷ್ಟೇ ಮುಖ್ಯ.
ಲೈಂಗಿಕ ದೌರ್ಜನ್ಯ ನಡೆದಿದೆಯೆ? ಅವಳು ಖಿನ್ನತೆಯಲ್ಲಿರುವುದು ಗೊತ್ತಾದರೂ ಏನೂ ಕ್ರಮವಹಿಸಲಿಲ್ಲ ಏಕೆ? ವಿವಿಯೇ ದೂರು ಕೊಟ್ಟಿಲ್ಲ ಯಾಕೆ? ಪೋಲಿಸ್ ಬರುವ ಮುನ್ನವೆ ಕಾರಗಪೆಂಟರ್ ಗೆ ಕರೆದು ಬಾಗಿಲು ಮುರಿದಿದ್ದು ಯಾಕೆ? ಒಳಗೆಲ್ಲ ಓಡಾಡಿ ಸಾಕ್ಷಿ ನಾಶ ಮಾಡಲಾಗಿದೆಯೆ? ವಿವಿಯಲ್ಲಿ ಆಪ್ತ ಸಮಾಲೋಚನಾ ಕೇಂದ್ರ ಇದೆಯೆ? ಇದ್ದರೂ ಈ ಪ್ರಕರಣಗಳು ಯಾಕೆ ಘಟಿಸುತ್ತಿವೆ? ದಕಿತ ವಿದ್ಯಾರ್ಥಿನಿಯ ಈ ಸಾವು ವಿಸಿಯವರು ಯಾಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ? ರಾಶಿ ಪ್ರಶ್ನೆಗಳು ಕಾಡುತ್ತಿವೆ. ಉತ್ತರ ಕೊಡುವವರು ಯಾರು?
ಯಾವ ಪ್ರದೇಶದಲ್ಲಿ ಕೋಮುವಾದವು ಮೇಲುಗೈ ಪಡೆಯುವುದೊ ಅಲ್ಲಿ ಮನುಸ್ಮೃತಿಯ ನಿಲುವುಗಳು ಸಹ ಮೇಲುಗೈ ಪಡೆಯುತ್ತವೆ. ಅಲ್ಲಿ ಮಹಿಳೆಯರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಮತ್ತು ಸಾಮಾನ್ಯ ಶ್ರಮಿಕರಿಗೆ ಕಿಂಚಿತ್ ಗೌರವ ಸಮಾನತೆ ಇರುವುದಿಲ್ಲ. ಹಿಂದೊಮ್ಮೆ ಆಂಧ್ರದ ಬಿಜೆಪಿಯ ಕಾರ್ಯಕರ್ತನು ಕ್ಯಾಂಟಿನ್ ನಡೆಸುತ್ತಿದ್ದು ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ ವಿದ್ಯಾರ್ಥಿನಿಯು ದೂರು ಕೊಟ್ಟಿದ್ದಳು. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮವಹಿಸಲಿಲ್ಲ. ಅಂದರೆ ವಿದ್ಯಾರ್ಥಿಗಳಿಗೆ ಅದರಲ್ಲಿಯೂ ವಿದ್ಯಾರ್ಥಿನಿಯರಿಗೆ ಇಲ್ಲಿ ಭದ್ರತೆ, ಸುರಕ್ಷತೆಯ ಗ್ಯಾರಂಟಿ ಏನೂ ಇಲ್ಲ ಎಂದರ್ಥ.
ಈ ಸಾವಿನ ಹಿಂದಿನ ಷಡ್ಯಂತ್ರ ಬಯಲುಗೊಳಬೇಕು.
ತಪ್ಪಿತಸ್ಥರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು.
-ನೀಲಾ ಕೆ.
ರಾಜ್ಯ ಉಪಾಧ್ಯಕ್ಷೆ
ಜನವಾದಿ ಮಹಿಳಾ ಸಂಘಟನೆ