ವಿಶೇಷ ವರದಿ
ಎಡಿಸಿಯಾಗಿ ಅಧಿಕಾರ ಸ್ವೀಕಾರ
ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಶಿವಾನಂದ ಬಿ.ಕರಾಳ ಅವರಿಗೆ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದ ಸುರೇಖಾ ಅವರು ಹೂಗುಚ್ಛ ನೀಡಿದರು
ಬೀದರ್ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಶಿವಾನಂದ ಬಿ. ಕರಾಳೆ ಅವರು ಸೋಮವಾರ ನಗರದಲ್ಲಿ ಅಧಿಕಾರ ಸ್ವೀಕರಿಸಿದರು. ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ ಅವರು ಶಿವಾನಂದ ಬಿ.ಕರಾಳೆ ಅವರಿಗೆ ಅಧಿಕಾರ ಹಸ್ತಾಂತರಿಸಿದ ರು. ಶಿವಾನಂದ ಬಿ.ಕರಾಳೆ ಅವರು 2010ನೇ ಸಾಲಿನ ಕೆಎಎಸ್ ಅಧಿಕಾ-ರಿಯಾಗಿದ್ದು, ಈ ಹಿಂದೆ ಕಾರವಾರ ಜಿಲ್ಲೆಯ ಉಪವಿಭಾಗಾಧಿಕಾರಿ ಹಾಗೂ ಗದಗ, ಧಾರವಾಡ, ತುಮಕೂರ ಜಿಲ್ಲೆಗಳಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ-ಯಾಗಿ ಸೇವೆ ಸಲ್ಲಿಸಿದ್ದಾರೆ.