ಬೀದರ ನಗರ ಈಗ ಮಹಾನಗರ, ಅದರಂತೆ ಹೊಸ ಸಮಸ್ಯೆಗಳು ತಲೆ ಎತ್ತುತಿವೆ. ಹಿಂದೆ ಎಂದೂ ಆಗದ ಮಳೆ ನೀರು ತಗ್ಗು ಪ್ರದೇಶಗಳಲ್ಲಿ ನುಗ್ಗುತ್ತಿದೆ. ಮನೆಗಳಲ್ಲಿ ವಾಸಿಸುವುದು ಕಷ್ಟವಾಗುತಿದೆ
ಬೀದರಿನ ಮೈಲೂರಿನ 100 ಅಡಿ ರಸ್ತೆ ಬದಿಯ ಎಲ್ಲಾ ಮನೆಗಳಿಗೆ ಸ್ವಲ್ಪ ಮಳೆ ಆದರೂ ಚರಂಡಿ ನೀರು ಸೇರಿದಂತೆ ಮಳೆ ನೀರು ನುಗ್ಗುತಿದೆ. ಅಂಗಳದಿಂದ ಸಿಟ್ ಔಟ್, ಅಡುಗೆ ಮನೆ, ಬೆಡ್ ರೂಮ್, ಲಿವಿಂಗ್ ರಮ್, ಪೂಜಾ ಮನೆ, ಹೀಗೆ ಮನೆಯ ಮೂಲೆ ಮೂಲೆಗಳಲ್ಲಿ ನೀರು ರಭಸದಿಂದ ಮೊಳಕಾಲದವರೆಗೆ ತುಂಬಿರುತ್ತದೆ.
ಈ ನೀರು ತೆಗೆದು ಹೊರಹಾಕಲೂ ಆಗದೇ ನಿತ್ಯ ಜೀವನ ಬದುಕಲೂ ಆಗದೇ ತುಂಬಾ ಕಷ್ಟ ಅನುಭವಿಸುತಿದ್ದಾರೆ ಇಲ್ಲಿನ ಜನ. ಕಳೆದ 20 ವರ್ಷಗಳಲ್ಲಿ ಪ್ರತಿ ಸಲ ರಸ್ತೆ ನಿರ್ಮಾಣ ಮಾಡುವಾಗ ಅದರ ಎತ್ತರ ಹೆಚ್ಚಾಗುತ್ತ ನಡೆದಿದೆ. ಹಳೆ ಮನೆಗಳು ಸರಿ ಸುಮಾರು ಅರ್ಧದಷ್ಟು ತಗ್ಗಿನಲ್ಲಿ ಮುಳುಗಿವೆ.
ಅಧಿಕಾರಿಗಳು, ಜನ ಪ್ರತಿನಿಧಿಗಳು ಈ ಕುರಿತು ತುರ್ತು ಗಮನ ಹರಿಸಬೇಕಿದೆ.
Samruddiya Nele is a digital magazine, to connect with people with latest updates on every moment news, not only to serve the needy but also to serve the nation.