ಪರಿಸರ
‘ಪರಿಸರ ರಕ್ಷಣೆಗೆ ಆದ್ಯತೆ ನೀಡಿ’
‘ನಾವು ಪರಿಸರವನ್ನು ರಕ್ಷಿಸಿದರೆ, ಪರಿಸರ ನಮ್ಮನ್ನು ರಕ್ಷಿಸುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಪರಿಸರ ರಕ್ಷಣೆಗೆ ಆದ್ಯತೆ ನೀಡಬೇಕು’ ಎಂದು ಸೂರ್ಯ ಫೌಂಡೇಶನ್ ದಕ್ಷಿಣ ಭಾರತದ ಸಂಯೋ ಜಕ ಅಜಯ ಖರಸನ್ ಹೇಳಿದರು.
ತಾಲ್ಲೂಕಿನ ರಾಚಪ್ರಾ ಗೌಡಗಾಂವ ಗ್ರಾಮದಲ್ಲಿ ಸೂರ್ಯ ಫೌಂಡೇಶನ್ ವತಿಯಿಂದ ಸಸಿ ವಿತರಿಸಿ, ಸಸಿ ನೆಟ್ಟು ಅವರು ಮಾತನಾಡಿದರು.
‘ಭೂಮಿಯ ಮೇಲಿನ ಜೀವರಾಶಿಗೆ ಅಹಾರದೊಂದಿಗೆ ಶುದ್ಧಗಾಳಿ ಅತ್ಯಗತ್ಯ, ವಾಗಿದೆ. ಮಾನವ ಚಟುವಟಿಕೆಗಳಿಂದ
ಪರಿಸರಕ್ಕೆ ಆಗುವ ಹಾನಿ ತಡೆಗಟ್ಟುವುದು ಮತ್ತು ಭೂಮಿಯನ್ನು ರಕ್ಷಿಸುವುದು ಎಲ್ಲರ ಗುರಿಯಾಗಬೇಕು’ ಎಂದು ಹೇಳಿದರು.
ಸೂರ್ಯ ಫೌಂಡೇಶನ್ ರಾಜ್ಯ ಸಂಯೋಜಕ ಗುರುನಾಥ ರಾಜಗೀರಾ ಮಾತನಾಡಿ, ‘ಸೂರ್ಯ ಫೌಂಡೇಶನ್ ವತಿಯಿಂದ ಜಿಲ್ಲೆಯಾದ್ಯಂತ ಪರಿಸರದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅನೇಕ ಜಾಗೃತಿ ಕಾರ್ಯಕ್ರಮ ಹಾಗೂ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾ ಗುತ್ತಿದೆ’ ಎಂದು ತಿಳಿಸಿದರು.
ಪ್ರಮುಖರಾದ ಬಿರಾದಾರ. ಮಲ್ಲಿಕಾರ್ಜುನ ಪಾಟೀಲ ಹಾಜರಿದ್ದರು. ರಂಗರಾವ