ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ನಡೆದ ರಾಜ್ಯದ ಹಿಂದುಳಿದ ವರ್ಗಗಳ ಪತ್ರಕರ್ತರ ಮಾರ್ಗದರ್ಶಕ ಡಾ.ಎಂ.ಎಸ್.ಮಣಿ ಅವರ ಪುತ್ರಿ ಎಂ.ಎಸ್.ನವ್ಯ ಜೊತೆ ಬಿ.ಆರ್.ಭರತ್ ಗೌಡರವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ವಧು-ವರರಿಗೆ ಆಶೀರ್ವದಿಸಿದರು.
ಹಿರಿಯ ಪತ್ರಕರ್ತರು, ರಾಜ್ಯದ ಹಿಂದುಳಿದ ವರ್ಗಗಳ ಪತ್ರಕರ್ತರ ಮಾರ್ಗದರ್ಶಕರು, ಹೃದಯವಂತರು, ಆತ್ಮೀಯ ಬಂಧುಗಳು, ಅದಮ್ಯ ಧೀಶಕ್ತಿಯಾಗಿರುವ ಡಾ.ಎಂ.ಎಸ್.ಮಣಿ ಅವರ ಪುತ್ರಿ ಎಂ.ಎಸ್.ನವ್ಯ ಜೊತೆ ಬಿ.ಆರ್.ಭರತ್ ಗೌಡರವರ ವಿವಾಹ ಆರತಕ್ಷತೆ ಕಾರ್ಯಕ್ರಮ ಆರ್.ಆರ್.ನಗರದ ಮೀನಾಕ್ಷಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಅದ್ದೂರಿಯಾಗಿ ನಡೆಯಿತು.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎಂ.ರೇವಣ್ಣ, ರಾಜ್ಯ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಸಿದ್ಧರಾಜು, ಸದಾಶಿವ ಶನೈ, ಹಿರಿಯ ಪತ್ರಕರ್ತರಾದ ಗಂಗಾಧರ ಮೊದಲಿಯಾರ್, ಪ್ರಜಾಪ್ರಗತಿ ಪತ್ರಿಕೆ ಸಂಪಾದಕರಾದ ನಾಗಣ್ಣ, ಇಂದು ಸಂಜೆ ಪತ್ರಿಕೆಯ ಸಂಪಾದಕಿ ಡಾ.ಪದ್ಮ ನಾಗರಾಜು, ರಾಜ್ಯ OBC ಪತ್ರಕರ್ತರ ಸಂಘದ ಅಧ್ಯಕ್ಷ ಗಂಧರ್ವಸೇನಾ, ಮಾಜಿ ಅಧ್ಯಕ್ಷ ರಾದ ಡಿ.ವೆಂಕಟ್ ಸಿಂಗ್, ಡಾ.ಕೆ. ಆರ್.ನೀಲಕಂಠ, ಕಾರ್ಯದರ್ಶಿ ವಿರೂಪಾಕ್ಷ, ಶಿವರಾಜ್ ಮೌರ್ಯ, ಸಮತಾ ದೇಶಮಾನೆ, ಪೂರ್ಣಿಮಾಸಿಂಗ್, ಗಡಿ ನಾಗರಾಜು, ಹೆಚ್.ಬಿ. ಮಂಜುನಾಥ್, ಅಪ್ಪನಹಳ್ಳಿ ಅರುಣ್ ಕುಮಾರ್, ಹೆಚ್.ಬಿ.ರಾಜೇಶ್ ಸೇರಿದಂತೆ ಹಲವಾರು ಗಣ್ಯರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ವಧು-ವರನಿಗೆ ಆಶೀರ್ವದಿಸಿ ಶುಭಾಶಯ ಕೋರಿದರು.