ಶ್ರಾವಣ ಎಂದರೆ ಶ್ರವಣ, ಒಳ್ಳೆಯ ವಿಚಾರ ಕೇಳುವ ಮಾಸ ಅದುವೇ ಶ್ರಾವಣ ಮಾಸ
- ಶಿವಶರಣಪ್ಪ ವಾಲಿ

ಶ್ರಾವಣ ಮಾಸದಲ್ಲಿ ಅನೇಕ ಅಧ್ಯಾತ್ಮಿಕ , ನೈತಿಕ ಬಲ ಬರುವ ವಿಚಾರಗಳು ಮಾತ್ರ ಕೇಳಬೇಕು ಅಂದರೆ ಶ್ರವಣ ಮಾಡಬೇಕು ಎಂಬ ಅರ್ಥ ಎಂದು ಹಿರಿಯ ಪತ್ರಕರ್ತರಾದ ಶ್ರೀ ಶಿವಶರಣಪ್ಪ ವಾಲಿ ಅವರು ನುಡಿದರು.
ಅವರು ಇಂದು ಬೀದರಿನ ಸವಿತಾ ಭವನದಲ್ಲಿ ಆಯೋಜಿಸಲಾದ ಶ್ರಾವಣ ಮಾಸ ಸಮಾಪ್ತಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡುತಿದ್ದರು.
ಬೀದರ ಜಿಲ್ಲಾ ಸವಿತಾ (ನಾವಿ) ಸಮಾಜದ ಆಶ್ರಯದಲ್ಲಿ ಕಳೆದ ಒಂದು ತಿಂಗಳ ಕಾಲ ಪ್ರತಿ ಸೋಮವಾರ ಹವನ ಪ್ರವಚನ ಕಾರ್ಯಕ್ರಮ ನಡೆದಿರುತ್ತದೆ. ಇಂದು ಸಮಾಪನ ಕಾರ್ಯಕ್ರಮ ಇತ್ತು. ಇದೇ ಸಂದರ್ಭದಲ್ಲಿ ಸವಿತಾ ಸಮಾಜದ ಚಿಂತಕ ದಿವಂಗತ ಶ್ರೀ ನಾರಾಯಣರಾವ್ ಹಕೀಮ ಅವರು ಬರೆದ ಪುಸ್ತಕ ಬಿಡುಗಡೆ ಮಾಡಲಾಯಿತು. ಈ ಪುಸ್ತಕದ ಸಂಪಾದನೆ ಹಾಗೂ ಮುದ್ರಣ ಮಾಡಿದ ಪಂಡಿತ ಗಂಗಾರಾಮ ಆರ್ಯ ಅವರು ಹಾಗೂ ಯುವ ಪುರೋಹಿತ ಪಂಡಿತ ಶ್ರೀ ಸತೀಶಕುಮಾರ ಬೆಳ್ಳುರು ಅವರನ್ನು ಈ ಸಂದರ್ಭದಲ್ಲಿ ವಿಶೇಷ ಸನ್ಮಾನ ಮಾಡಲಾಯಿತು. ಅದ್ಯಾತ್ಮ ರತ್ನ ಎಂಬ ಪ್ರಶಸ್ತಿ ಪತ್ರ ನೀಡಿ ಇವರನ್ನು ಗೌರವಿಸಲಾಯಿತು.
ಸಮಾಜದ ಹಿರಿಯ ಸಂಗೀತ ತಜ್ಞ ಶ್ರೀ ಕೇಶವರಾವ ಸೂರ್ಯವಂಶಿ ಅವರು ಅತಿಥಿಗಳಾಗಿ ಆಗಮಿಸಿದರು.
ಆರಂಭದಲ್ಲಿ ಸಮಾಜದ ಹಂಗಾಮಿ ಅಧ್ಯಕ್ಷರಾದ ಶ್ರೀ ಗಂಧರ್ವ ಸೇನಾ ಅವರು ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಸಂಜಿವ ಕುಮಾರ ಪುಜಾರಿ ಅವರು ಕಾರ್ಯಕ್ರಮ ನಿರುಪಿಸಿದಲ್ಲಿ ಶ್ರೀ ಪ್ರಕಾಶ ಹೊಕರಾಣಾ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಜಗನ್ನಾಥರಾವ ಚಲವಾ, ದತ್ತಾತ್ರೇಯ ಚೌಧರಿ, ನಾರಾಯಣರಾವ್ ಗೊಂದೆಗಾಂವ, ಶಾಮರಾವ ಮೊರಗಿ, ಉಮೇಶ ಗೊಂದೆಗಾಂವ, ಪ್ರಕಾಶ ಮೊರಗಿ, ರಾಜಕುಮಾರ ಗೊಂದೆಗಾಂವ ಸೇರಿದಂತೆ ಗಣನೀಯ ಸಂಖ್ಯೆಯಲ್ಲಿ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಉಪಸ್ಥಿತರಿದ್ದರು.