# ರಕ್ಷಾ ಬಂಧನ – Samruddiya Nele
ವಿಶೇಷ ವರದಿ
Trending

ರಕ್ಷಾ ಬಂಧನ

Amazon.in/ONLINE SHOPPING
ರಕ್ಷಾ ಬಂಧನ ಹಬ್ಬವು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿರುವ ಹಬ್ಬವಾಗಿದೆ. ಈ ಹಬ್ಬವನ್ನು ವಿಶೇಷವಾಗಿ ಸಹೋದರ ಸಹೋದರಿಯರ ನಡುವಿನ ಪವಿತ್ರ ಪ್ರೀತಿ ಬಾಂಧವ್ಯದ ಸಂಕೇತವಾಗಿದೆ.
ನಾಡಿನ ಎಲ್ಲಡೆ ಆಚರಿಸುವ ಈ ಹಬ್ಬವು ತುಂಬಾ ಜನಪ್ರಿಯವಾಗಿದ್ದು ಎಲ್ಲಾ ಜಾತಿ ವರ್ಗ ಧರ್ಮ ಬೇಧವೆನ್ನದೆ ಎಲ್ಲಾ ಸಮಾಜದ ವರ್ಗದ ಜನರು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ,
ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ವಿವಿಧ ರಾಜ್ಯಗಳಲ್ಲಿ ರಾಕಿ ಹುಣ್ಣಿಮೆ,ನರಿಯಾಲ ಪೂರ್ಣಿಮಾ, ಕಜರಿ ಪೂರ್ಣಿಮಾ ಎಂದು ಕರೆಯುವ ಪದ್ಧತಿ ಇದೆ.
ರಕ್ಷಾ ಬoಧನ ವಿಶೇಷದ ದಿನದಲ್ಲಿ ಸಹೋದರಿಯರು ಶುಭ್ರವಾದ ಹೊಸ ಉಡುಗೆಗಳನ್ನು ತೊಟ್ಟು ತಮ್ಮ ಅಣ್ಣ-ತಮ್ಮಂದಿರರಿಗೆ ಹಣೆಗೆ ತಿಲಕವಿಟ್ಟು ರಾಖಿ ಅನ್ನುವ ದಾರವನ್ನು ಕಟ್ಟಿ ಆರತಿಯನ್ನು ಮಾಡುವ ಮೂಲಕ ಸಹೋದರರ ಆಯುಷ್ಯ ಆರೋಗ್ಯದ ಭಾಗ್ಯಕ್ಕಾಗಿ, ರಕ್ಷಣೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಾರೆ.ಅಣ್ಣ ತಮ್ಮಂದಿರ ಬದುಕು ಸದಾ ಹಸನಾಗಿರಲೆಂದು ಹರಸುತ್ತಾರೆ.ಪ್ರತಿಯಾಗಿ ಸಹೋದರನು ಕೂಡ ನನ್ನ ಅಕ್ಕ- ತಂಗಿಗೆ ಉಡುಗೊರೆಯನ್ನು ನೀಡಿ ಸಹೋದರಿಯರ ರಕ್ಷಣೆ ನನ್ನ ಜವಾಬ್ದಾರಿ ಎಂದು ಸಂಕಲ್ಪ ತೊಟ್ಟು ತನ್ನ ಅಕ್ಕ-ತಂಗಿಯ ಬದುಕು ಚೆನ್ನಾಗಿರಲೆಂದು ಹಾರೈಸುವ ಪ್ರತೀತಿ ಇದೆ.
ಪ್ರಸ್ತುತ ರಾಖಿ ಹಬ್ಬವು ಸಾಮರಸ್ಯ ಸಂದೇಶ ಸಾರುವ ಹಬ್ಬವಾಗಿದ್ದು ಕೇವಲ ಸಹೋದರ ಸಹೋದರಿ ರಕ್ತ ಸಂಭಂದಗಳಿಗೆ ಸೀಮಿತವಾಗಿರದೆ ಈ ಹಬ್ಬವನ್ನು ಹೆಂಡತಿ ತನ್ನ ಗಂಡನಿಗೆ ಅಥವಾ ಶಿಷ್ಯ ತನ್ನ ಗುರುವಿಗೆ ರಾಖಿ ಕಟ್ಟುವ ಸಂಪ್ರದಾಯವಿದೆ ಅದಲ್ಲದೆ ಹುಡುಗಿ ಹುಡುಗನಿಗೆ ರಾಖಿಯನ್ನು ಕಟ್ಟುವ ಮೂಲಕ ಸಹೋದರನ್ನಾಗಿ ಸ್ವೀಕರಿಸುವದನ್ನು ಇಂದಿನ ದಿನಗಳಲ್ಲಿ ಕಾಣುತ್ತೆವೆ.
ಪೌರಾಣಿಕ ಹಿನ್ನಲೆ :
ರಕ್ಷಾ ಬಂಧನ ಹಬ್ಬವು ಪೌರಾಣಿಕವಾಗಿಯೂ, ಐತಿಹಾಸಿಕವಾಗಿಯೂ ವಿಶೇಷತೆಯನ್ನು ಹೊಂದಿದೆ.

 ಹಬ್ಬದ ಹಿನ್ನೆಲೆ ಮಹತ್ವವನ್ನು ತಿಳಿಯೋಣ ಬನ್ನಿ . 

ಉಲ್ಲೇಖ ೧: ದ್ವಾಪರ ಯುಗದಲ್ಲಿ ಮೊಟ್ಟ ಮೊದಲು ಶ್ರೀ ಕೃಷ್ಣನ ಬೆರಳಿಗೆ ಗಾಯವಾದಾಗ ದ್ರೌಪದಿಯು ತನ್ನ ಸೆರಗನ್ನು ಹರಿದು ಬಟ್ಟೆ ಕಟ್ಟಿದಳು, ಮತ್ತು ಮುಂದೆ ದ್ರೌಪದಿ ವಸ್ತ್ರಾಪಹರಣದ ಸಮಯದಲ್ಲಿ ಶ್ರೀ ಕೃಷ್ಣನ ಅವಳ ಮಾನವನ್ನು ಕಾಪಾಡಿದನು, ಇದೇ ಸಂಪ್ರದಾಯವಾಗಿ ಬೆಳೆದು ಬಂದಿತು ಅಕ್ಕ ತಂಗಿಯರು ಅಣ್ಣತಮ್ಮಂದಿರಿಗೆ ರಕ್ಷೆಯನ್ನು ಕಟ್ಟುವುದು ಕಷ್ಟ ಸಮಯದಲ್ಲಿ ನಮ್ಮನ್ನು ಕಾಪಾಡಿರಿ ಎಂದು ಕೇಳಿಕೊಳ್ಳುವುದು.
ಉಲ್ಲೇಖ ೨:ವೈಶ್ಯ ಸಮುದಾಯದ ಆರಾಧ್ಯ ದೈವ ಚಾಮುಂಡಿಯ ಅಂಶವಾದ ಭಾಷೆಯ ದಿವ್ಯ ಪುರಾಣದಲ್ಲಿ ಹಬ್ಬದ ಉಲ್ಲೇಖವಿದೆ 
ವಾಸವಾಂಬಳ ದಿವ್ಯ ಪುರಾಣವು ಧರ್ಮ, ಶುದ್ಧತೆ, ತ್ಯಾಗ ಮತ್ತು ಶಕ್ತಿ ಹಾಗೂ ನಾರಿ ಸಮತೋಲನದ ಶ್ರೇಷ್ಠ ಸಂಕೇತವಾಗಿದೆ. ಇದನ್ನು “ವಾಸವಿ ಪುರಾಣ” ಎಂಬ ಜನಪದ ಪುಸ್ತಕದಲ್ಲಿ ಉಲ್ಲೇಖಿಸಲಾಗುತ್ತದೆ.
ಬಹುಪಾಲು ಚಾಮುಂಡೇಶ್ವರಿ ವೈಶ್ಯ ಸಮುದಾಯದಲ್ಲಿ ಆವರಿತವಾಗಿದೆ, ಆದರೆ ಅದರ ತತ್ವಗಳು ಎಲ್ಲರಿಗೂ ಸ್ಪಷ್ಟವಾಗುವಂತಹ ಮಹಾತ್ಮ್ಯ ಹೊಂದಿವೆ. ವಾಸವಿ ದೇವಿಯ ಜನ್ಮಸ್ಥಳ – ಪೆಣುಗೊಂಡ (Penugonda), ಆಂಧ್ರ ಪ್ರದೇಶ. ಅಲ್ಲಿ ಚಾಮುಂಡರಾಜ ಮತ್ತು ಆತನ ಪತ್ನಿ ದುರ್ಗಾಂಬಾಳು – ಶಕ್ತಿದೇವಿಯ ಉಪಾಸಕರಾಗಿದ್ದರು.
ದೇವಿಯ ಜನನ,ರಾಜ ದಂಪತಿಗೆ ಕೆಲ ವರ್ಷಗಳ ನಂತರ ದೇವರ ಅನುಗ್ರಹದಿಂದ ಅಷ್ಟಲಕ್ಷಣಗಳೊಂದಿಗೆ ಸುಂದರ ಕನ್ಯೆ ವಾಸವಾಂಬಾಳು ಜನ್ಮತಾಳಿದಳು.:ಜನ್ಮವಾದಾಗಲೇ ಆಕೆ ಶುದ್ಧತೆ, ಧರ್ಮ ಮತ್ತು ತ್ಯಾಗದ ಸಂಕೇತವಾಗಿದ್ದಳು. ಆಕೆ ತನ್ನ ಇಡೀ ಜೀವನದವರೆಗೆ ಬ್ರಹ್ಮಚಾರಿಣಿಯಾಗಿ, ಧ್ಯಾನಸಕ್ತಿ, ವೇದಜ್ಞಾನ ಮತ್ತು ಅಧ್ಯಾತ್ಮದ ದಾರಿಯಲ್ಲಿ ನಡೆದಳು. ಸಮೀಪದ ಸಾಮ್ರಾಟ ಕಲಿಂಗ ರಾಜ ವಾಸವಾಂಬಾಳ ಸೌಂದರ್ಯದಿಂದ ಮಾರುಹೋಗಿ, ಅವಳನ್ನು ಬಲವಂತವಾಗಿ ಮದುವೆಯಾಗಬೇಕೆಂದು ಬಯಸುತ್ತಾನೆ. ಆದರೆ ಅವನು ಧರ್ಮದ್ರೋಹಿ, ದುರಾಶೆಯುಳ್ಳ ರಾಜನಗಿದ್ದಾನು.ಕಲಿಂಗ ರಾಜನು ವಾಸವಿಯ ತಂದೆಗೆ “ನಿಮ್ಮ ಪುತ್ರಿಯನ್ನು ನನಗೆ ವಿವಾಹ ಮಾಡಿ ಕೊಡಿರಿ” ಎಂದು ಸಂದೇಶ ಕಳಿಸುತ್ತಾನೆ. ಆದರೆ ವಾಸವಿ, ತಾನು ಧರ್ಮಪರ, ಶುದ್ಧವಾದ ಮನಸ್ಸುಳ್ಳವಳಾಗಿದ್ದು ದುಷ್ಟನ ಜೊತೆ ಮದುವೆಯಾಗುವುದು ಅಪವಿತ್ರ ಕ್ರಿಯೆ ಎಂದು ಮದುವೆಯಾಗಲು ನಿರಾಕರಿಸುತ್ತಾಳೆ. ಅದರಿಂದ ಕಲಿಂಗರಾಜನು ಕೋಪಗೊಂಡು ಯುದ್ಧಕ್ಕೆ ಆಹ್ವಾನ ನೀಡುತ್ತಾನೆ.
ವಾಸವಾಂಬಳು ತನ್ನ ತಂದೆ-ತಾಯಿಯ ಜೊತೆ ನೊರೆರಡು ಕುಲನಾಯಕರ ಜೊತೆ ಕರೆದುಕೊಂಡು ಅಗ್ನಿಕುಂಡ ನಿರ್ಮಿಸುತ್ತಾಳೆ.
ಧ್ಯಾನದಿಂದ ಇಡೀ ತಾಣ ಶುದ್ಧವಾಗುತ್ತದೆ.
ದೇವತೆಗಳು ವಾಸವಿಯನ್ನು ಶಕ್ತಿಯಾಗಿ ಗುರುತಿಸುತ್ತಾರೆ.
ಆಕೆ ಅಗ್ನಿಕುಂಡ ಪ್ರವೇಶಿಸುವ ಮುನ್ನ ಪ್ರತಿಜ್ಞೆ ಮಾಡುತ್ತಾಳೆ:
“ನಾನು ಇಹಲೋಕದಲ್ಲಿ ಉಳಿಯುವುದಿಲ್ಲ. ಆದರೆ ನನ್ನ ರೂಪ ಶಕ್ತಿ ಹಾಗೂ ಗೌರವದ ರೂಪದಲ್ಲಿ ನನ್ನ ಭಕ್ತರಲ್ಲಿ ಯಾವಾಗಲೂ ಇರುತ್ತದೆ.”
ಅಗ್ನಿಕುಂಡ ಪ್ರವೇಶದಿಂದಲೇ ಆಕೆ ಕನ್ನಿಕಾ ಪರಮೇಶ್ವರಿ ದೇವಿಯಾಗಿ ಪರಿವರ್ತನೆಗೊಳ್ಳುತ್ತಾಳೆ.
ಶುದ್ಧತೆ, ಧರ್ಮನಿಷ್ಠೆ, ತ್ಯಾಗ
ವಿಶೇಷ ಗುಣ – ಕೋಪವಿಲ್ಲದ ಶಕ್ತಿ, ಶಾಂತ ಸ್ವರೂಪ, ಸಹನೆ, ಸತ್ಪ್ರಜ್ಞೆ ಹೊಂದಿರುವ ಪರಿಣಾಮದ ಸಂಕೇತವಾಗಿ 
ಬಾಲ ವಾಸವಾಂಬಳು ತನ್ನ ಶುದ್ಧ ಭಾವದಿಂದ ಬಾಲ ಶ್ರೀಪಾದ ಶ್ರೀವಲ್ಲಭ ದತ್ತಾತ್ರೇಯನಿಗೆ ಅಣ್ಣನೆಂದು ಭಾವಿಸಿ ರಕ್ಷೆ ಕಟ್ಟಿದಳು. ಶ್ರೀವಲ್ಲಭರು ಆಕೆಗೆ “ನಾನು ನಿನ್ನ ರಕ್ಷಕನಾಗಿರುತ್ತೇನೆ” ಎಂದು ಆಶೀರ್ವದಿಸುತ್ತಾರೆ.
*ಕಾರಣ ಇಂದು ವಾಸವಿ ದೇವಿಯ ಚಿತ್ರ ಅಥವಾ ಮೂರ್ತಿ ಸ್ಥಾಪನೆ ಮಾಡಿ ಜಲ ಅಭಿಷೇಕ. ಕುಂಕುಮ, ಹೂವಿನಿಂದ ಅಲಂಕಾರ. ಓಂಕಾರ, ಗಣೇಶ ಸ್ಮರಣೆ ನಂತರ ವಾಸವಿ ಅಷ್ಟೋತ್ತರ ವಾಸವಿ ನಾಮಾವಳಿ (108 ಹೆಸರುಗಳು) ಅಕ್ಷತೆ, ದೀಪಾರಾಧನೆ, ನೈವೇದ್ಯ. ನಂತರ ವಾಸವಿ ದೇವಿಗೆ ರಕ್ಷೆ ಅರ್ಪಣೆ ಮಾಡಿ ತಂಗಿಯು ತಮ್ಮ ಅಣ್ಣನಿಗೆ ರಕ್ಷೆ ಕಟ್ಟುವುದು ಸಂಪ್ರದಾಯವಾಗಿ ಬಂದಿದೆ ಅನ್ನಬಹುದು.

ಐತಿಹಾಸಿಕ ಹಿನ್ನೆಲೆ

ಪಂಜಾಬಿನ ಹಿಂದೂರಾಜ ಪುರುಷೋತ್ತಮನ ಕೈಯಲ್ಲಿ ಅಲೆಕ್ಸಾಂಡರ್ ಸೋತಾಗ ಅಲೆಕ್ಸಾಂಡರ್ ಪತ್ನಿ ತನ್ನ ಪತಿಯನ್ನು ಕೊಲ್ಲದಂತೆ ರಕ್ಷಿಸಲು ಪುರುಷೋತ್ತಮನಿಗೆ ರಾಕಿ ಕಟ್ಟಿದಳು ಎಂದು ಹೇಳಲಾಗುತ್ತದೆ.
ಈ ರೀತಿ ರಾಖಿ ಹುಣ್ಣಿಮೆಯನ್ನು ಆಚರಣೆ ಮಾಡುವದರಿಂದ ಸಹೋದರತ್ವ ಸಹೋದರತೆಯ ಪವಿತ್ರ ಪ್ರೀತಿ ಬಾಂಧವ್ಯದ ಬೆಸುಗೆ ಬಲಪಡಿಸುತ್ತದೆ. ಆಪ್ತರ ಜೊತೆ ನೆರೆಹೊರೆಯವರ ಜೊತೆ ಕೂಡಿಕೊಂಡು ಒಬ್ಬರಿಗೊಬ್ಬರು ರಾಖಿ ಕಟ್ಟಿಕೊಳ್ಳುವ ಮೂಲಕ ಸಾಮರಸ್ಯದ ಸಮಾಜವನ್ನು ಕಟ್ಟಲು ಅಡಿಪಾಯ ಹಾಕೋಣ. “ವಸುದೈವ ಕುಟುಂಬಕಂ” ಅನ್ನುವ ದ್ರಷ್ಟಿಕೋನವನ್ನು ದಡಪಡಿಸುವ ನಿಟ್ಟಿನಲ್ಲಿ ಪವಿತ್ರ ಪ್ರೀತಿ ಬಾಂಧವ್ಯದ ರಕ್ಷಾಬಂಧನದ ಹಬ್ಬವನ್ನು ಆಚರಿಸೋಣ ಸಂಭ್ರಮಿಸೋಣ.
ಓಂಕಾರ ಪಾಟೀಲ್
ಕಾರ್ಯದರ್ಶಿಗಳು:ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ
ಮೋ :೬೩೬೦೪೧೩೯೩೩.
Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!