ಬೀದರ, ಸೆಪ್ಟೆಂಬರ್.10 (ಕರ್ನಾಟಕ ವಾರ್ತೆ):- ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಂದು ನಗರದ ಅಭಿವೃದ್ಧಿ ದೃಷ್ಠಿಯಿಂದ ಬ್ರಿಮ್ಸ್ ಸರ್ಕಲ್, ರೋಟರಿ ಸರ್ಕಲ್ ನಾಯಕಮಾನ್, ಭಗತ್ ಸಿಂಗ್ ಸರ್ಕಲ್, ಮಹಾವೀರ್ ಸರ್ಕಲಗಳಲ್ಲಿ ಸಂಚರಿಸಿ ನಗರದಲ್ಲಿರುವ ಒಳಚರಂಡಿಗಳ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿದರು. ಹಾಗೂ ನಗರದಲ್ಲಿರುವ ಒಳಚರಂಡಿಗಳ ನಕ್ಷೆ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಬೀದರ ಸಹಾಯಕ ಆಯುಕ್ತ ಮಹ್ಮದ ಶಕೀಲ್, ಬೀದರ ನಗರ ಸಭೆಯ ಪೌರಾಯುಕ್ತ ಶಿವರಾಜ ರಾಢೋಡ ಸೇರಿದಂತೆ ಇತರರು ಉಪಸ್ಥಿತರಿದ್ದರ.