*29 ಸಾವಿರ ಪೆಂಡಿಂಗ್* ಪ್ರಕರಣಗಳು ಲೋಕ ಅದಾಲತನಲ್ಲಿ* *ರಾಜಿ ಮಾಡುವ ಗುರಿ* — *ಬನಸೋಡೆ, ಮಾನ್ಯ ಹಿರಿಯ ನ್ಯಾಯಾಧೀಶರು
ಬೀದರ 20:- ಬೀದರ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಇದುವರೆಗೆ ಒಟ್ಟು 29,327 ಪ್ರಕರಣಗಳು ಪೆಂಡಿಗ್ ಇವೆ. ಇವುಗಳೆಲ್ಲ ಬರುವ ಲೋಕ ಅದಾಲತ ದಿನಾಂಕ 13-9-2025 ರಂದು ರಾಜಿ ಮೂಲಕ ಇತ್ಯರ್ಥಪಡಿಸಲು ಗುರಿ ಹೊಂದಲಾಗಿದೆ ಎಂದು ಬೀದರಿನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರದ ಸದಸ್ಯ ಕಾರ್ಯದರ್ಶಿ ಯಾದ ಮಾನ್ಯ ಶ್ರೀ ಪ್ರಕಾಶ ಅರ್ಜುನ ಬನಸೋಡೆ ಅವರು ತಿಳಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತಿದ್ದರು.
ನ್ಯಾಯಾಲಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಆಸ್ತಿಪಾಲುವಿಭಾಗ, ಜೀವನಾಂಶ, ಚೆಕ್ ಬೌನ್ಸ್, ವಿದ್ಯುತ್ ಪ್ರಕರಣಗಳು, ರಾಜಿ ಮಾಡಿಕೊಳ್ಳುವ ಕಂದಾಯ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲು ಅವಕಾಶ ಇರುತ್ತದೆ ಎಂದು ಮಾನ್ಯ ಶ್ರೀ ಬನಸೋಡೆ ನ್ಯಾಯಾಧೀಶರು ಮುಂದುವರೆದು ಹೇಳಿದರು.
ಈ ರೀತಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವ ಮುಖಾಂತರ ಕಕ್ಷಿದಾರನಿಗೆ ನ್ಯಾಯಾಲಯ ಶುಲ್ಕ ವಾಪಸ ಸಿಗುತ್ತದೆ. ಅಲ್ಲದೇ ಇಬ್ಬರು ಕಕ್ಷಿದಾರರು ದ್ವೇಷ ಮರೆತು ಸುಮಧುರ ಜೀವನ ಸಾಗಿಸಬಹುದು. ಅಲ್ಲದೇ ಯಾವುದೇ ಖರ್ಚು ವೆಚ್ಚಗಳಿಲ್ಲದೇ ಶೀಘ್ರವಾಗಿ ಪ್ರಕರಣಗಳು ಇತ್ಯರ್ಥವಾಗುತ್ತವೆ ಎಂದು ಮಾನ್ಯ ನ್ಯಾಯಾಧೀಶರು ಮುಂದುವರೆದು ಹೇಳಿದರು.
ಜಿಲ್ಲೆಯಾದ್ಯಂತ ಸದರಿ ಲೋಕ ಅದಾಲತದ ಲಾಭ ಹೆಚ್ಚಿನ ಜನ ಪಡೆದುಕೊಳ್ಳಲಿ, ಅದಕ್ಕೆ ಅವರ ತನಕ ಈ ಸುದ್ದಿ ತಲುಪಲಿ ಎಂದು ಅನೇಕ ಉಪಕ್ರಮಗಳು ತೆಗೆದುಕೊಳದಳಲಾಗಿದೆ ಎಂದೂ ಅವರು ವಿವರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಾಧಿಕಾರದ ಸಿಬಂಧಿಗಳಾದ ಶ್ರೀ ಜಗದೀಶ್ವರ ದೊರೆ, ಶ್ರೀ ಆಕಾಶ ಸಜ್ಜನಶಟ್ಟಿ, ಹಾಗೂ ಇತರೆ ಸಿಬಂಧಿವರ್ಗದವರು ಉಪಸ್ಥಿತರಿದ್ದರು.