# *9 ಕೋಟಿ ರೂಪಾಯಿಗಳ ಜಿ.ಎಸ್.ಟಿ. ವಂಚಕನ ಬಂಧನ* – Samruddiya Nele
ವಾಣಿಜ್ಯ ಮತ್ತು ವ್ಯಾಪಾರವಿಶೇಷ ವರದಿ
Trending

*9 ಕೋಟಿ ರೂಪಾಯಿಗಳ ಜಿ.ಎಸ್.ಟಿ. ವಂಚಕನ ಬಂಧನ*

-ಯಾಸ್ಮೀನ್ ಬೇಗಂ ಜಿ. ವಾಲೇಕರ್ , ಜಂಟಿ ಆಯುಕ್ತ ವಾಣಿಜ್ಯ ಇಲಾಖೆ

Amazon.in/ONLINE SHOPPING
ಬೀದರ 23 : 9 ಕೋಟಿ 25 ಲಕ್ಷ ರೂಪಾಯಿಗಳ ಜಿ.ಎಸ್.ಟಿ. ವಂಚನೆ ಮಾಡಿ ಸರಕಾರದ ಖಜಾನೆಗೆ ಕನ್ನಾ ಹಾಕಿದ ಖದೀಮ ಬೀದರ ನಿವಾಸಿ ರಾಹೂಲ್ ಕುಲಕರ್ಣಿ ಎಂಬವನಿಗೆ ಹೈದರಾಬಾದ್ ನಿಂದ ಬಂಧಿಸಲಾಗಿದೆ ಎಂದು ವಾಣಿಜ್ಯ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ಆಯುಕ್ತೆಯಾದ ಯಾಸ್ಮೀನ್ ಬೇಗಂ ಜಿ. ವಾಲೆಕರ್ ಅವರು ತಿಳಿಸಿದ್ದಾರೆ.
ಅವರು ಇಂದು ಬೀದರಿನ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತಿದ್ದರು.
2020 ರಿಂದ ವ್ಯವಸ್ಥಿತವಾಗಿ ಈ ಕಳ್ಳ ಧಂದೆ ಮಾಡುತ್ತ ಬಂದಿರುತ್ತಾನೆ. ಮೂಲತಃ ಸಿಮೆಂಟ್ ವ್ಯಾಪಾರಕ್ಕಾಗಿ ಜಿ.ಎಸ್.ಟಿ. ನೊಂದಣಿ ಮಾಡಿಕೊಂಡಿರುವ ಈತ ದೊಡ್ಡ ಗಾತ್ರದ ಅವ್ಯವಹಾರ ಮಾಡಿದ ಕಾರಣ ಇಲಾಖೆಯ ರಡಾರ್ ನಲ್ಲಿ ಬಂದಿರುತ್ತಾನೆ. ಇಲಾಖೆಯ ವತಿಯಿಂದ ಸುಮೋಟೋ ಇವನ ನೊಂದಣಿ ರದ್ದು ಪಡಿಸಲಾಗಿತ್ತು. ಆದರೆ ತನ್ನ ತಾಯಿ ಸೇರಿದಂತೆ ಒಟ್ಟು 4 ಬೇರೆ ಜಿ.ಎಸ್.ಟಿ ನೊಂದಣಿ ಮಾಡಿಸಿ ವಂಚನೆ ಮಾಡಿರುತ್ತಾನೆ ಎಂದು ಯಾಸ್ಮೀನ್ ಬೇಗಂ ಅವರು ಮುಂದುವರೆದು ಹೇಳಿದ್ದಾರೆ.
ಇನ್ನೂ ಕೆಲವರು ಈತನ ಜೊತೆ ಸೇರಿರುತ್ತಾರೆ. ಅವರ ಬಗ್ಗೆ ಕೂಡ ತನಿಖೆ ನಡೆಯುತಿದೆ ಎಂದವರು ಹೇಳಿದರು.
ಇದು ಕಲಬುರಗಿ ವಿಭಾಗದಲ್ಲಿಯೇ ಬಂಧನ ಆಗಿರುವ ಮೊದಲ ಪ್ರಕರಣ ಇದಾಗಿದೆ. ಇದಕ್ಕೆ ಕನಿಷ್ಠ 5 ವರ್ಷ ಜೇಲುವಾಸ ಶಿಕ್ಷೆಯನ್ನು ಆಗಬಹುದು ಎಂದು ಯಾಸ್ಮೀನ್ ಬೇಗಂ ಅವರು ಹೇಳಿದ್ದಾರೆ.
ಆದರೆ ಇಲಾಖೆಯ ಒಳಗಿನವರೂ ಕೆಲವರು ಶಾಮಿಲ ಇರಬಹುದೇ ಎಂಬ ಪ್ರಶ್ನೆಗೆ ಉತ್ತರಿಸುತ್ತ ಅಂತಹ ಸಾಧ್ಯತೆ ಇಲ್ಲ ಎಂದು ಯಾಶ್ಮೀನ್ ಬೇಗಂ ಮುಂದುವರೆದು ಹೇಳಿದರು.
ಅವರ ಜೊತೆಗೆ ಇಲಾಖೆಯ ಅಧಿಕಾರಿಗಳು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!