ಕಲಬುರಗಿ :- ಪ್ರಗತಿಪರ ಸಂಘಟನೆಗಳ ಒಕ್ಕೂಟ ಕಲಬುರಗಿಯ ವತಿಯಿಂದ ಧರ್ಮಸ್ಥಳದಲ್ಲಿ ಸ್ವತಂತ್ರ ಪತ್ರಕರ್ತರ ಮೇಲೆ ಗುಂಡಾಗಳಿಂದ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಲಾಗಿದೆ.
ಈ ಸಂಬಂಧದಲ್ಲಿ ರಾಜ್ಯದ ಮುಖ್ಯಮಂತ್ರಿ ಗಳಿಗೆ ಪತ್ರವೊಂದು ಬರೆದು ಆರೋಪಿಗಳಿಗೆ ಕೂಡಲೇ ಬಂಧಿಸಲು ಆಗ್ರಹಿಸಲಾಗಿದೆ.
ಆರ್.ಕೆ. ಹುಡಗಿ, ಪ್ರಭು ಖಾನಾಪುರೆ, ಮಿನಾಕ್ಷಿ ಬಾಳಿ, ಅರ್ಜುನ ಭದ್ರೆ, ಮರೆಪ್ಪ ಹಳ್ಳಿ, ದತ್ತಾತ್ರೆಯ ಇಕ್ಕಳಕಿ, ಕೆ. ನೀಲಾ, ಮಾರುತಿ ಗೊಖಲೇ, ಮಹೇಶ ರಾಠೋಡ್, ಮೌಲಾ ಮುಲ್ಲಾ, ಪದ್ಮಿನಿ ಕಿರಣಗಿ, ಪದ್ಮಾ ಪಾಟೀಲ್, ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ್, ಶ್ರೀಮಂತ ಬಿರಾದಾರ, ಮೆಹರಾಜ ಪಟೆಲ್, ಮೊಹಮ್ಮದ ಮೊಕದ್ದಮ್, ಪ್ರಮೊದ ಪಾಂಚಾಳ ಮುಂತಾದವರು ಪತ್ರ ಬರೆದಿದ್ದಾರೆ.
ಹಲ್ಲೆಯಲ್ಲಿ ನಾಲ್ವರು ಸ್ವತಂತ್ರ ಪತ್ರಕರ್ತರಿಗೆ ತೀವ್ರ ಗಾಯಗಳಾಗಿವೆ, ಒಬ್ಬ ಪತ್ರಕರ್ತ ಮರಣಾಂಇಕ ದಾಳಿಗೆ ಒಳಗಾಗಿದ್ದಾನೆ ಎನ್ನಲಾಗಿದೆ.
ಇದು ಬರೀ ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯಮಾತ್ರವಲ್ಲದೇ, ಜೀವಹಾನಿಗೆ ಪ್ರಯತ್ನವೆಂದೇ ಹೇಳಬೇಕಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
Chief Editor Keerthi Sena
Samruddiya Nele is a digital magazine, to connect with people with latest updates on every moment news, not only to serve the needy but also to serve the nation.