# ಹರ್ ಘರ್ ತಿರಂಗಾ ಅಭಿಯಾನ: 14ರಂದು ಔರಾದನಲ್ಲಿ ಬೈಕ್ ರ‍್ಯಾಲಿ – Samruddiya Nele
ವಿಶೇಷ ವರದಿ

ಹರ್ ಘರ್ ತಿರಂಗಾ ಅಭಿಯಾನ: 14ರಂದು ಔರಾದನಲ್ಲಿ ಬೈಕ್ ರ‍್ಯಾಲಿ

Amazon.in/ONLINE SHOPPING
ಹರ್ ಘರ್ ತಿರಂಗಾ ಅಭಿಯಾನ: 14ರಂದು ಔರಾದನಲ್ಲಿ ಬೈಕ್ ರ‍್ಯಾಲಿ*
ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದಡಿ ಔರಾದ ಪಟ್ಟಣದಲ್ಲಿ ಆಗಸ್ಟ್ 14 ರಂದು ಬೈಕ್ ರ‍್ಯಾಲಿ ಏರ್ಪಡಿಸಲಾಗಿದೆ.
ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಬೆಳಗ್ಗೆ 10 ಗಂಟೆಗೆ ಶಾಸಕರ ಕಛೇರಿ ಆವರಣದಲ್ಲಿ ರ‍್ಯಾಲಿಗೆ ಚಾಲನೆ ನೀಡುವರು. ರ‍್ಯಾಲಿಯು ಶಾಸಕರ ಕಛೇರಿ‌‌‌ ಆವರಣದಿಂದ‌ ಹೊರಟು, ಅಗ್ನಿ ಬಸವಣ್ಣ ದೇವಸ್ಥಾನ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ಎಪಿಎಂಸಿ ವೃತ್ತದ ಮಾರ್ಗವಾಗಿ ಶ್ರೀ ಅಮರೇಶ್ವರ ದೇವಸ್ಥಾನಕ್ಕೆ ತಲುಪಿ ಕೊನೆಗೊಳ್ಳುವುದು.
ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಬೇಕು, ಜನರಲ್ಲಿ ದೇಶಾಭಿಮಾನ ಬೆಳೆಸಬೇಕು. ರಾಷ್ಟ್ರಧ್ವಜದ ಕುರಿತು ಗೌರವ ಭಾವನೆ ಮೂಡಿಸುವ ಉದ್ದೇಶದಿಂದ ದೇಶದ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಯವರು ಕೊಟ್ಟಿರುವ ಕರೆಯಂತೆ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ನಡೆಸಲಾಗುತ್ತಿದೆ.
ಪರಕೀಯರ ಆಳ್ವಿಕೆಯಲ್ಲಿದ್ದ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ಲಕ್ಷಾಂತರ ಹೋರಾಟಗಾರರು ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ. ಅಂತಹ ಮಹನೀಯರ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರಲ್ಲಿಯೂ ದೇಶಪ್ರೇಮ ಜಾಗೃತಗೊಳಿಸುವ ಉದ್ದೇಶದಿಂದ ವೈವಿದ್ಯಮಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. 
ಈ ದಿಶೆಯಲ್ಲಿ ಔರಾದನಲ್ಲಿ ನಡೆಯುವ ತಿರಂಗಾ ಬೈಕ್ ರ‍್ಯಾಲಿಯಲ್ಲಿ ಸ್ಥಳೀಯ ಗಣ್ಯರು, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರು ಹಾಗೂ ಸಾವಿರಾರು ದೇಶಾಭಿಮಾನಿಗಳು ಭಾಗವಹಿಸಲಿದ್ದು, ಮಂಡಲ್ ಅಧ್ಯಕ್ಷರಾದಿಯಾಗಿ ಎಲ್ಲ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಹಾಗೂ ಬೂತ್ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳಬೇಕು.
ಅಲ್ಲದೇ ಆ.13 ರಿಂದ 15ರ ವರೆಗೆ ಎಲ್ಲ ಮನೆ-ಮನೆಯ ಮೇಲೆ, ಕಛೇರಿ, ಅಂಗಡಿಗಳು, ವಾಹನಗಳ ಮೇಲೆ ‌ತ್ರಿವರ್ಣ ಧ್ವಜ ಪ್ರದರ್ಶಿಸಿ, ತ್ರಿವರ್ಣ ಧ್ವಜದೊಂದಿಗೆ‌ ಸೆಲ್ಫಿಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!