# ವಾಹನಗಳು ಪರ್ಯಾಯ ರಸ್ತೆಗಳ ಮೂಲಕ ಸಂಚರಿಸುವಂತೆ ಅಪರ ಜಿಲ್ಲಾಧಿಕಾರಿ ಆದೇಶ – Samruddiya Nele
ಸಂಪಾದಕೀಯ

ವಾಹನಗಳು ಪರ್ಯಾಯ ರಸ್ತೆಗಳ ಮೂಲಕ ಸಂಚರಿಸುವಂತೆ ಅಪರ ಜಿಲ್ಲಾಧಿಕಾರಿ ಆದೇಶ

ಬೀದರ, ಮಾರ್ಚ.20 (ಕರ್ನಾಟಕ ವಾರ್ತೆ):- ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರಿಗೆ ಅಖಿಲ ಭಾರತ ವೀರಶೈವ ಮಹಾಸಭಾದ 24ನೇ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕವಾಗಿರುವ ಪ್ರಯುಕ್ತ ವೀರಶೈವ ಲಿಂಗಾಯತ ಮುಖಂಡರು 2026ನೇ ಮಾರ್ಚ್.22 ರಂದು ಸಾಯಂಕಾಲ 4 ಗಂಟೆಗೆ ಬೀದರ ನಗರದ ಕರ್ನಾಟಕ ಫಾರ್ಮಸಿ ಕಾಲೇಜಿನ ಆವರಣದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಪ್ರಯುಕ್ತ ಮಾರ್ಚ್.22 ರಂದು ಸಾಯಂಕಾಲ 3 ರಿಂದ ಅಭಿನಂದಯಾ ಕಾರ್ಯಕ್ರಮ ಮುಗಿಯುವವರೆಗೆ ನಗರದ ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಸಂಚಾರಿ ಮಾರ್ಗಗಳನ್ನು ಬದಲಾಯಿಸಿ ಪಯಾಯ ರಸ್ತೆಗಳ ವ್ಯವಸ್ಥೆಯನ್ನು ಮಾಡಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರು ಆದೇಶಿಸಿದ್ದಾರೆ. 

 ಸಂಚಾರ ಬದಲಾಯಿಸಿದ 

ಮಾರ್ಗಗಳ ವಿವರ: 

(1) ಬೀದರ ನಗರದಿಂದ ಗುಂಪಾ ಕಡೆ ಹೋಗುವ ವಾಹನಗಳು-ಬಸವೇಶ್ವರ ವೃತ್ತ, ಪೊಲೀಸ್ ಚೌಕ, ಶಾಹಪೂರ ಗುಂಪಾ ರಿಂಗ್ ರೋಡ ಮೂಲಕ ಹೋಗುವುದು/ಬರುವುದು. 

(2) ಗುಂಪಾ ಕಡೆಯಿಂದ ಹೊಸ ಬಸ್ ನಿಲ್ದಾಣಕ್ಕೆ ಹೋಗುವ ವಾಹನಗಳು-ಗುಂಪಾ ರಿಂಗ್ ರೋಡ್, ಮೈಲೂರ ರಿಮಗ್ ರೋಡ್, ಚಿದ್ರಿ ರಿಂಗ್ ರೋಡ, ಹಳೆ ಆರ್‌ಟಿಓ ಕಛೇರಿಯ ಹತ್ತಿರದಿಂದ ಹೋಗುವುದು/ಬರುವುದು. 

(3) ಬೀದರ ಹೊಸ ಬಸ್ ನಿಲ್ದಾಣದಿಂದ ಹೈದ್ರಾಬಾದ ಕಡೆಗೆ ಹೋಗುವ ವಾಹನಗಳು-ಮಡಿವಾಳ ವೃತ್ತ, ಸಿದ್ದಾರ್ಥ ಕಾಲೇಜ ಕ್ರಾಸ್, ಚಿಕ್ಕಪೇಟ್ ರಿಂಗ್ ರೋಡ್ ಮೂಲಕವಾಗಿ ದೇವದೇವ ವನದ ಹತ್ತಿರದಿಂದ ಹೊಗುವುದು/ಬರುವುದು.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

2 Comments

Leave a Reply

Your email address will not be published. Required fields are marked *

Back to top button
Don`t copy text!