# ವಿದ್ಯಾವಂತ ಮೋಸಗಾರರು ಹೆಚ್ಚುತ್ತಿದ್ದಾರೆ – Samruddiya Nele
ವಿಶೇಷ ವರದಿ

ವಿದ್ಯಾವಂತ ಮೋಸಗಾರರು ಹೆಚ್ಚುತ್ತಿದ್ದಾರೆ

ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾದ ಲೋಕಾಯುಕ್ತ ಸಂಸ್ಥೆ 

ಸಮಾಜದಲ್ಲಿ ಸಂಸ್ಕಾರಗಳು ಬೆಳೆಯಲ್ಲಿ : ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ.

ಬೀದರ್, ಜೂನ್ 19, (ಕರ್ನಾಟಕ ವಾರ್ತಾ ) : ಸಮಾಜದಲ್ಲಿ ವಿದ್ಯಾವಂತ ಮೋಸಗಾರರೇ ಹೆಚ್ಚುತ್ತಿದ್ದು ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಸಂಸ್ಥೆ ತಕ್ಕ ಶಿಕ್ಷೆ ನೀಡುತ್ತಿದೆಯೆಂದು ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಅವರು ಅಭಿಪ್ರಾಯಪಟ್ಟರು.

     ಬೀದರ ನಗರದ ಪೂಜ್ಯ ಶ್ರೀ ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಜೂ.19ರ ಶುಕ್ರವಾರ ರಂದು ಬೀದರ ಜಿಲ್ಲೆಯಲ್ಲಿ ದಾಖಲಾಗಿರುವ ದೂರುಗಳ ವಿಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

    ಲೋಕಾಯುಕ್ತ ಸಂಸ್ಥೆ ಇಡೀ ರಾಷ್ಟçದಲ್ಲಿ ಬಲಿಷ್ಠ ಹಾಗೂ ಸ್ವಾಯತ್ತ ಸಂಸ್ಥೆ. ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರನ್ನು ಜೈಲಿಗೆ ಕಳುಹಿಸಿದ ಸಂಸ್ಥೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾದಲ್ಲಿ ಲೋಕಾಯುಕ್ತ ಎದುರು ದೂರು ದಾಖಲಸಿದಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕ ಹಿತಾಸಕ್ತಿ ಇದ್ದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿ ನ್ಯಾಯ ಒದಗಿಸಿದ ಅನೇಕ ಉದಾಹರಣೆಗಳಿವೆ ಎಂದರು.

     ಭ್ರಷ್ಟಚಾರದಲ್ಲಿ ತೊಡಗಿರುವ ಹಾಗೂ ಆದಾಯ ಮೀರಿ ಆಸ್ತಿಗಳಿಸಿರುವ ಅನೇಕ ಅಧಿಕಾರಿಗಳಿಗೆ ಲೋಕಾಯುಕ್ತ ಸಂಸ್ಥೆಯು ದಾಳಿ ನಡೆಸಿದೆ. ಅಧಿಕಾರಿಗಳು ತಮ್ಮ ಕಾರ್ಯಗಳನ್ನು ಜವಾಬ್ದಾರಿಯುತವಾಗಿ ಮಾಡದಿದ್ದಲ್ಲಿ ತಕ್ಕ ಪಾಠ ಕಲಿಸಿದೆಯೆಂದರು.

     ತಾವು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ಈ ವರೆಗೆ ಊರೂರು ಸಂಚರಿಸಿ 1.8 ಕೋಟಿ ಪ್ರಕರಣಗಳನ್ನು ಬಗೆಹರಿಸಲಾಗಿದೆ, ಅಧಿಕಾರಿಗಳು ಹಾಗೂ ಸಾರ್ವಜನಿಕರು ಸರಿಯಾಗಿ ಸ್ಪಂದಿಸಿದರೆ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ ಎಂದರು.

     ಸಾರ್ವಜನಿಕರು ಹಾಗೂ ಅಧಿಕಾರಿಗಳು ತಮ್ಮ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ನಿಭಾಯಿಸಬೇಕು. ಸಾರ್ವಜನಿಕರು ದೂರು ದಾಖಲಿಸಿದ ನಂತರ ಹೆದರದೆ ತಾರ್ಕಿಕ ಅಂತ್ಯದವರೆಗೆ ಸ್ಪಂದಿಸಬೇಕು. ಕೆಲ ದೂರುದಾರರು ಅರ್ಧಕ್ಕೆ ಹಿಂಜರಿಯುತ್ತಾರೆ. ಅನ್ಯಾಯದ ವಿರುದ್ಧ ಸಂಘ ಸಂಸ್ಥೆಗಳು ಹೋರಾಡಬೇಕೆಂದರು. ಅಧಿಕಾರಿಗಳು ಆತ್ಮವಂಚನೆ ಮಾಡಿಕೊಳ್ಳಬಾರದು. ದೇಶದ್ರೋಹಿಗಳು ಹಾಗೂ ವಿದ್ಯಾವಂತ ಮೋಸಗಾರರು ಹೆಚ್ಚುತ್ತಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದರು.

     ಅಧಿಕಾರಿಗಳು ಅಧಿಕಾರ ಬಂದ ನಂತರ ಲಂಚತನಕ್ಕೆ ಪರವಾನಗಿ ಸಿಕ್ಕಂತೆ ವರ್ತಿಸಬಾರದು ಪ್ರಾಮಾಣಿಕ ಅಧಿಕಾರಿಗಳು ಸಹ ಇದ್ದಾರೆ. ಆದರೆ ಭ್ರಷ್ಟ ಅಧಿಕಾರಿಗಳು ಹೆಚ್ಚು ಇದ್ದಾರೆ. ಅವರು ಜೀವಂತವಾಗಿದ್ದರೂ ಸತ್ತಂತೆ ಎಂದರು.

     ನಾವು ಮಾಡಿದ ಅನ್ನವನ್ನು ನಾವು ತಿನ್ನಬೇಕು. ಇತರರ ಅನ್ನ ಕಸಿದು ತಿಂದರೆ ಶ್ರಾಪ ಹತ್ತುತ್ತದೆ. ಪ್ರಮಾಣಿಕ ಅಧಿಕಾರಿಗಳು ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ದುಷ್ಟರಿಗೆ ಶಿಕ್ಷೆ ಆಗಲೇಬೇಕು. ಕೋಟ್ಯಾಂತರ ಆಸ್ತಿಪಾಸ್ತಿ ಮಾಡಿದ ಸಾವಿರಾರು ಅಧಿಕಾರಿಗಳ ಜೀವನದ ನೋವನ್ನು ನಾನು ನೋಡಿರುವೆ. ತೀರ ಆಧೋಗತಿಯ ಜೀವನ ಸಾಗಿಸಿದ್ದಾರೆ. ಪಶ್ಚಾತ್ತಾಪ ಪಡುತ್ತಾರೆ. ಮಕ್ಕಳು ಮಾತು ಕೇಳುವುದಿಲ್ಲ. ಅನ್ಯಾಯದ ಹಣ ಗಳಿಸುವುದು ಪಾಪ ಎಂದರು. 

     ಮಕ್ಕಳಿಗೆ ಸಂಸ್ಕಾರ ಕಲಿಸಬೇಕು, ಸಮಾಜ ಸಂಸ್ಕಾರಯುತವಾದರೆ ಭ್ರಷ್ಟಚಾರವನ್ನು ನಿರ್ಮೂಲನೆ ಮಾಡಬಹುದು. ಈ ಸಮಾಜ ಮಹಾತ್ಮ ಗಾಂಧಿ, ಡಾ.ಅಂಬೇಡ್ಕರ್, ಬಸವೇಶ್ವರ, ಸುಭಾಸ್‌ಚಂದ್ರ ಭೋಸ್ ಅವರನ್ನು ಎಲ್ಲ ಕಾಲದಲ್ಲಿಯೂ ನೆನಪಿಸಿಕೊಳ್ಳುತ್ತದೆ. ಆದರೆ ಹಣ ಗಳಿಸುವ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವುದಿಲ್ಲ ಎಂದರು. 

     ಇತ್ತೀಚಿಗೆ ಸುಳ್ಳು ಕೇಸ್ ದಾಖಲಿಸುವವರ ಸಂಖ್ಯೆ ಹೆಚ್ಚುತ್ತಿದೆ. 40 ಸಾವಿರ ಸುಳ್ಳು ಪ್ರಕರಣಗಳು ಬಾಕಿ ಇವೆ. ಸುಳ್ಳು ಕೇಸ್ ದಾಖಲಿಸುವವರಿಗೆ 3 ವರ್ಷ ಜೈಲುವಾಸ ಹಾಗೂ ದಂಡ ಇದೆಯೆಂದರು. ಕಾರ್ಯಕ್ರಮದಲ್ಲಿ ಒಟ್ಟು 123 ದೂರುಗಳನ್ನು ಬಗೆಹರಿಸಿದರು. 

     ದೂರು ವಿಚಾರಣೆ ವೇಳೆ ಉಪಲೋಕಾಯುಕ್ತರು ಅನೇಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ನಿಗದಿತ ಅವಧಿ ಒಳಗೆ ತಮ್ಮ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. 

     ಈ ಸಂದರ್ಭದಲ್ಲಿ ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಲೋಕಾಯುಕ್ತ ಉಪನಿಭಂದಕರಾದ ಅರವಿಂದ, ನ್ಯಾಯಾಧೀಶರಾದ ರಾಘವೇಂದ್ರ ಉಪಾಧ್ಯೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗೀರಿಶ್ ದಿಲೀಪ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಡಿಎಫ್‌ಓ ಸುಮೀತ್ ಕುಮಾರ ಪಾಟೀಲ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸಿ.ಸಿದ್ದರಾಜು, ವೇದಿಕೆಯಲ್ಲಿ ಉಪಸ್ಥಿತರಿದ್ದರು.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!