ಪ್ರಿಂಟ್ ಮಿಡಿಯಾದ ಮಹತ್ವ ಸರ್ವಕಾಲಿಕ -ಶ್ರೀಮತಿ ರಾಜಶೀ ಸ್ವಾಮಿ
ಸಮೃದ್ಧಿಯ ನೆಲೆ ಎಂಬ ಹೊಸ ಪತ್ರಿಕೆಯನ್ನು ಬಿಡುಗಡೆ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮ
ಇಲೆಕ್ರಾನಿಕ್ ಮಿಡಿಯ, ಡಿಜಿಟಲ್ ಮಿಡಿಯಾ ಎಷ್ಟೇ ಸದ್ದು ಮಾಡಿದರೂ ಪ್ರಿಂಟ್ ಮೀಡಿಯಾಗೆ ಇರುವ ಶಾಸ್ವತ ದಾಖಲೆ ಯಾಗಿ ಉಳಿಯುವ ಸೌಲಭ್ಯ ಮತ್ತೊಂದು ಕಡೆ ಇರುವುದಿಲ್ಲ ಎಂದು ಕೆ.ಪಿ.ಸಿ.ಸಿ. ನೂತನ ಉಪಾಧ್ಯಕ್ಷೆ ಹಾಗೂ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ರಾಜಶ್ರೀ ಸ್ವಾಮಿ ಅವರು ನುಡಿದರು.
ಅವರು ದಿ.31 ಜುಲೈ ರಂದು ಬೀದರನಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತಿದ್ದರು.ಪ್ರಿಂಟ್ ಮಿಡಿಯಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದು ದಾಖಲೆಯಾಗಿ ದಸ್ತಾವೆಜು ತರಹ ಉಳಿಯುತ್ತದೆ. ಎಷ್ಟು ವರ್ಷಗಳಾದರೂ ಮತ್ತೆ ತೆಗೆದು ನೊಡಬಹುದು. ಇತಿಹಾಸವಾಗಿ ಜೀವನದಲ್ಲಿ ಉಳಿಯುತ್ತದೆ ಎಂದು ಶ್ರೀಮತಿ ರಾಜಶ್ರೀ ಸ್ವಾಮಿ ಅವರು ಮುಂದುವರೆದು ಹೇಳಿದರು.
ಸಮೃದ್ಧಿಯ ನೆಲೆ ಎಂಬ ಹೊಸ ಪತ್ರಿಕೆಯನ್ನು ಬಿಡುಗಡೆ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡುತಿದ್ದರು.
ಬಸವ ತತ್ವ ಚಿಂತಕರು ಆದ ಶ್ರೀಕಾಂತ ಸ್ವಾಮಿ ಅವರು ಸಮೃದ್ಧಿಯ ನೆಲೆ ಪತ್ರಿಕೆಯ ವೆಬ್ ಸೈಟ್ ಲೊಕಾರಗಪಣೆ ಮಾಡಿದರು.
ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಶ್ರೀ ಮಾಳಪ್ಪ ಅಡಸಾರೆ, ಜನವಾದಿ ಮಹಿಳಾ ಸಂಘಟನೆಯ ಕಾಂ. ಲೀಲಾ ಸಂಗ್ರಾಮ ಮುಖ್ಯ ಅತಿಥಿಗಳಾಗಿ ಭಾಗವಹಿದರು.
ಈ ಸಂದರ್ಭದಲ್ಲಿ ಈ ಕೆಳಕಂಡ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಶೈಲೆಂದ್ರ ಕಾವಡಿ ಹುಮನಾಬಾದ, ಸಂತೋಷ ಹಡಪದ ಭಾಲ್ಕಿ, ಅಂಕಣಕಾರ ರಾಜಶೇಖರ ಪಾಟೀಲ ಅಸ್ಟುರ, ಮಹ್ಮದ್ ಯೂಸುಫ್ ರಹೀಮ್ ಬಿದ್ರಿ,
ನಾಗಶೆಟ್ಟಿ ಧರಂಪುರ, ರವಿಂದ್ರ ಕಾಂಬಳೆ, ಮುದ್ರಣಕಾರ ಭೀಮರಾವ ಬೀದರಕರ, ಸಂಧ್ಯಾರಾಣಿ, ಸುಶ್ಮೀತಾ ಮೊರೆ, ಪತ್ರಿಕಾ ವಿತರಕರಾದ ಸದಾನಂದ ಹಮೀಲಪುರೆ, ರಾಮಚಂದ್ರ ಕೊಂಡಾ, ಪ್ರಕಾಶ ಬಿ. ಹೊಕರಾಣಾ, ಎಲ್ಲರೂ ಪತ್ರಕರ್ತರೇ ಎಂಬ ವಿಶೇಷ ರೀತಿಯ ಸನ್ಮಾನಕ್ಕೆ ಆಗಿದ್ದರು.
ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಹಾಗೂ ವರದಿಗಾರರ ಸಂಘದ ಆಶ್ರಯ ದಲ್ಲಿ ಬೀದರ ಸವಿತಾ ಭವನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಘದ ಅಧ್ಯಕ್ಷರು ಹಿರಿಯ ಪತ್ರಕರ್ತರಾದ ಗಂಧರ್ವ ಸೇನಾ ಅವರು ಅಧ್ಯಕ್ಷತೆ ವಹಿಸಿದರು. ಸಮೃದ್ಧಿಯ ನೆಲೆ ನೂತತನ ಪತ್ರಿಕೆಯ ಸಂಪಾದಕಿ ಕೀರ್ತಿ ಸೇನಾ ಅವರು ಕೊನೆಯಲ್ಲಿ ವಂದಿಸಿದರು.