# ಗುದಗೆ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ಹಾಗೂ ನ್ಯುರೊ ಕೇರ್ ಲಭ್ಯ: ಡಾ.ಗುದಗೆ – Samruddiya Nele
ಆರೋಗ್ಯ ಮತ್ತು ಶಿಕ್ಷಣವಿಶೇಷ ವರದಿ
Trending

ಗುದಗೆ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ಹಾಗೂ ನ್ಯುರೊ ಕೇರ್ ಲಭ್ಯ: ಡಾ.ಗುದಗೆ

ಬೀದರ್: ಅಪಘಾತಕ್ಕೀಡಾಗಿ ತಲೆ ಗಾಯವಾಗಿ ಅಥವಾ ಮೆದುಳಿಗೆ ಪೆಟ್ಟಾದಲ್ಲಿ ನರಗಳು ಕಡಿತವಾಗಿ ರೋಗಿ ತನ್ನ ಸ್ಮರಣೆ ಕಳೆದುಕೊಳ್ಳುತ್ತಾನೆ. ಪ್ರಾಣ ಹಾನಿ ಸಹ ಸಂಭವಿಸುತ್ತದೆ. ಇಂಥ ಸಂದರ್ಭದಿAದ ಪಾರಾಗಲು ಗುದಗೆ ಆಸ್ಪತ್ರೆಯಲ್ಲಿ ದಿನದ ೨೪ ಗಂಟೆಗಳು ಸಹ ನುರಿತ ನರರೋಗ ತಜ್ಞರು ಲಭ್ಯವಿದ್ದು, ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳಬುದಾಗಿದೆ ಎಂದು ಆಸ್ಪತ್ರೆಯ ಮುಖ್ಯಸ್ಥರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಚಂದ್ರಕಾAತ ಗುದಗೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಟಿ ಉದ್ದೇಸಿಸಿ ಮಾತನಾಡಿದ ಅವರು, ಅಪಘಾತ ಸಂಭವಿಸಿದ ಬಳಿಕ ತಲೆಗೆ ಗಾಯವಾಗುವುದು ಸಹಜ. ಹಾಗಾಗಿ ಕೂಡಲೇ ಪ್ರಥಮ ಚಿಕಿತ್ಸೆ, ಶಸ್ತç ಚಿಕಿತ್ಸೆ ಜರೂರಿ ಇದ್ದು, ನಮ್ಮಲ್ಲಿ ಅದಕ್ಕೆ ಸಂಬAಧಿಸಿದ ಎಲ್ಲ ರೀತಿಯ ಚಿಕಿತ್ಸೆ ಲಭ್ಯವಿದೆ. ತಲೆಯಲ್ಲಿ ಗಡ್ಡೆಯಾದರೆ, ಬ್ರೇನ್ ಟ್ಯುಮರ್‌ನಂತಹ ಭಯಾನಕ ಕಾಯಿಲೆ ಸಂಭವಿಸಿದರೂ ನಮ್ಮಲ್ಲಿ ಚಿಕಿತ್ಸೆ ನೀಡಲಾಗುವುದು  ಎಂದರು.
ಬೀದರ್‌ನಲ್ಲಿ ಪಾರ್ಶ್ವವಾಯುವಿಗೆ ಸಂಬAಧಿಸಿದAತೆ ಡಾ.ಪ್ರಶಾಂಥ ಅಲ್ಲೆ ಅವರು ದಿನದ ೨೪ ಗಂಟೆಗಳ ಕಾಲ ನಮ್ಮಲ್ಲಿ ಚಿಕಿತ್ಸೆ ನೀಡುವರು. ಪಾರ್ಶ್ವವಾಯು ಸಂಭವಿಸಿ ನಾಲ್ಕು ಗಂಟೆಗಳನ್ನು ಗೋಲ್ಡನ್ ಪಿರೆಡ್ ಎಂದು ಕರೆಯಲಾಗುತ್ತದೆ. ಆ ಸಮಯದಲ್ಲಿ ಚಿಕಿತ್ಸೆ ಪಡೆದರೆ ಗುಣಮುಖರಾಗುವರು. ಹಾಗಾಗಿ ಜಿಲ್ಲೆಯ ಸಾರ್ವಜನಿಕರು ಇಂಥ ವ್ಯವಸ್ಥೆ ತಮ್ಮದಾಗಿಸಿಕೊಳ್ಳಬಹುದೆಂದು ಕರೆ ನೀಡಿದರು.
ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಸಚೀನ ಗುದಗೆ ಅವರು ಡಾ.ಪ್ರಶಾಂತ ಅಲ್ಲೆ ಅವರ ಪರಿಚಯ ಗೈಯ್ಯುತ್ತ, ಡಾ.ಪ್ರಶಾಂತ ಅಲ್ಲೆ, ಅವರು ಹೊರ ದೇಶಗಳಲ್ಲಿ ವಿಶೇಷವಾಗಿ ಅಮೆರಿಕಾದ ಚಿಕ್ಯಾಗೊ, ನ್ಯುಯಾರ್ಕ್ ಇತ್ಯಾದಿ ಕಡೆ ಸೇವೆ ಮಾಡಿ ಪುಟ್ಟಪರ್ತಿ ಸಾಯಿಬಾಬಾದಲ್ಲಿ ೧೪ ವರ್ಷ ಸೇವೆ ಸಲ್ಲಿಸಿ ಈಗ ನಮ್ಮಲ್ಲಿ ಸೇವೆಗೆ ಸಿದ್ಧರಾಗಿರುವರು. ಇವರ ಜೊತೆಗೆ ತಾನು, ಡಾ.ವೈಭವ ಭದಬದೆ, ಡಾ.ನಾಗಾಜ ಮಿತ್ರಾ, ಡಾ.ಸುಖಾನಂದ ಸೇರಿದಂತೆ ಎಲ್ಲ ತರಹದ ರೋಗಗಳಿಗೆ ನಮ್ಮಲ್ಲಿ ನುರಿತ ತಜ್ಞರು ಲಭ್ಯವಿರುವರು. ನಮ್ಮಲ್ಲಿ ಆಧುನಿಕ ತಂತ್ರಜ್ಞಾನವುಳ್ಳ ಟ್ರಾಮ ಕೇರ್ ಸೆಂಟರ್ ಲಭ್ಯವಿದೆ. ಹಾಗಾಗಿ ಅವರ ಸೇವೆಯನ್ನು ಬೀದರ್ ಜಿಲ್ಲೆ ಜನ ಸದುಪಯೋಗ ಪಡೆದುಕೊಳ್ಳುವರೆಂಬ ವಿಶ್ವಸವಿದೆ ಎಂದರು.

ಖ್ಯಾತ ನರರೋಗ ತಜ್ಞರಾದ ಡಾ.ಪ್ರಶಾಂತ ಅಲ್ಲೆ ಮಾತನಾಡಿ, ನಾನು ಹುಟ್ಟುರಿನಲ್ಲಿ ಮತ್ತೆ ಸೇವೆ ಮಾಡುವ ಸಮಯ ಬಂದಿದೆ. ಇದು ನನ್ನ ಸೌಭಾಗ್ಯ. ಈ ತಿಂಗಳ ೨೯ರಂದು ಗುದಗೆ ಆಸ್ಪ[ತ್ರೆಯಲ್ಲಿ ವರ್ಲ್ಡ್ ಸ್ಟೋಕ್ ಡೆ ಆಚರಿಸಲಾಗುತ್ತಿದ್ದು, ಅಂದು ಉಚಿತ ತಪಾಸಣೆ ಹಾಗೂ ರಿಯಾಯತಿ ದರದಲ್ಲಿ ಶಸ್ತç ಚಿಕಿತ್ಸೆ, ಎಮ್.ಆರ್.ಐ, ಸಿಟಿ ಸ್ಕಾನ್ ಮಾಡಲಾಗುವುದು. ೮ ಗಂಟೆ ನಿದ್ರೆ, ಸಕ್ಕರೆ ರಹಿತ ಊಟ, ಎಣ್ಣೆ ಪದಾರ್ಥಗಳ ಮಿತ ಬಳಿಕೆ, ಲಘು ವ್ಯಾಯಾಮ, ಒತ್ತಡಮುಕ್ತ ಜೀವನ ಸಾಗಿಸುವುದು, ಮೊಬೈಲ್ ಬಳಿಕೆ ಕಡಿಮೆ, ಯೋಗ ಹಾಗೂ ಧ್ಯಾನ ಮಾಡುವುದು, ವಾಯು ವಿಹಾರ ಇತ್ಯಾದಿ ಗಳನ್ನು ದಿನ ನಿತ್ಯದ ಬದುಕಿನಲ್ಲಿ ನಡೆದಾಗ ಪಾರ್ಶ್ವವಾಯುವಿನಿಂದ ದೂರ ಮುಕ್ತಿ ಪಡೆಯಬಹುದು ಎಂದರು.
ಆಸ್ಪತ್ರೆಯ ನುರಿತ ತಜ್ಞರಾದ ಡಾ.ನಿತಿನ್ ಗುದಗೆ, ಡಾ.ನಾಗರಾಜ ಮಿತ್ರಾ, ಡಾ.ವೈಭವ ಭದಬದೆ, ಡಾ.ಸುಖಾನಂದ, ಡಾ.ಮಹೇಶ ತೊಂಡಾರೆ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.
Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!