ವಿಶೇಷ ವರದಿ
ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ವಸತಿಯಿಂದ ಕಾರ್ಮಿಕರಿಗೆ ಪೇಂಟ ಬಳಸುವ ವಿಧಾನದ ತರಬೇತಿ

ಬೀದರ್ : ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ವಸತಿಯಿಂದ ನಗರದಲ್ಲಿರುವ ವಿವಿಧ ಕಾರ್ಮಿಕರಿಗೆ, ನಿರುದ್ಯೋಗಿಗಳಿಗೆ, ಪೇಂಟಿಂಗ್ ಕೆಲಸದ ಬಗ್ಗೆ ತಿಳುವಳಿಕೆ ನೀಡುವ ಸಲುವಾಗಿ ನಗರದ ಬೌದ್ಧ ಮಂದಿರ, ಅಂಬೇಡ್ಕರ್ ಸರ್ಕಲ್ ಹತ್ತಿರ ಒಂದು ವಾರಕ್ಗಳ ಕಾಲ ಪೇಂಟಿಂಗ್ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು ಕಾರ್ಯಗಾರವನ್ನು ನಡೆಸಲಾಗಿದೆ ಏಷ್ಯನ್ ಪೇಂಟ್ಸ್ನ ತರಬೇತಿ ಇಲಾಖೆಯಿಂದ ಬ್ಯೂಟಿಫುಲ್ ಹೋಮ್ಸ್ ಅಕಾಡೆಮಿಯ ಎಂ. ಸಿ. ಎ. ವೈಟ್ಫೀಲ್ಡ್ ನ ತರಬೇತಿದಾರ ರಾದ ಅನಿಲ್ ಬೋರಯ್ಯ ರವರು ವಿವಿಧ ಕಾರ್ಮಿಕರಿಗೆ ಪೇಂಟ ಬಳಸುವ ವಿಧಾನವನ್ನು ತಿಳಿಸಿ ಕೊಡುವು ದರ ಮೂಲಕ ಆದಾಯದ ಮೂಲವಾಗಿ ಬಳಸಿಕೊಂಡು ಕಾರ್ಮಿಕರು ತಮ್ಮ ಜೀವನವನ್ನು ಸುಲಭವಾಗಿ ಸಾಗಿಸಬಹುದು.

ಬ್ಯೂಟಿಫುಲ್ ಹೋಮ್ಸ್ ಅಕಾಡೆಮಿಯ ಕಾರ್ಮಿಕರಿಗೆ ಪೇಂಟಿಂಗ್ ಕಾರ್ಯಗಾರವನ್ನು ಹಮ್ಮಿ ಕೊಂಡಿರುತ್ತದೆ ಹಲವಾರು ವರ್ಷಗಳಿಂದ ಕಾರ್ಯಗಾರವನ್ನು ಹಮ್ಮಿಕೊಂಡು ಕಾರ್ಮಿಕರನ್ನು ಕೌಶಲ್ಯ ಭರಿತನಾಗಿಸಿ ಉತ್ತಮ ಆದಾಯದ ಮೂಲವನ್ನು ಕಂಡುಕೊಳ್ಳಬಹುದು ಎಂದು ಕಾರ್ಯಗಾರದ ಟ್ರೈಲರ್ ಅನಿಲ್ ಬೋರಯ್ಯ, ಅರುಣ್ ಕುಮಾರ್ ( T. O.), ಸಂತೋಷ್ ಕಿರಾಣಿ ( SSO ), ಪೃಥ್ವಿ ಕನ್ನ ( U. H ), ಹಾಗೂ ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.