ಹಳ್ಳಿಗಳಿಗೆ ತೆರಳಿ ಕಂಪ್ಯೂಟರ್ ಸಾಕ್ಷರತೆ ತರಬೇತಿ; ಏಕಲ್ ಗ್ರಾಮೋಥಾನ್ ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ
ಇಂದು ದಿನಾಂಕ 3/8/2025 ಬೀದರ್ ತಾಲೂಕಿನ ಮಂದಕನಹಳ್ಳಿ ಗ್ರಾಮದಲ್ಲಿ ಇಲ್ಲಿಯವರೆಗೆ ಕಂಪ್ಯೂಟರ್ ಬೇಸಿಕ್ ಶಿಕ್ಷಣವನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು , ಈ ಕಾರ್ಯಕ್ರಮವನ್ನು EOW ಬೀದರ್ ನ ಬಸ್ ಸಾರಥಿಯಾದ ಗಣೇಶ್ ಜಿ ಸ್ವಾಗತಿಸಿದರು , ವೈಯಕ್ತಿಕ ಗೀತೆಯನ್ನು ಕೇತಕಿ ತಂಡದಿಂದ, ನಂತರ ಬಂದಿರುವ ಎಲ್ಲಾ ಅತಿಥಿಗಳಿಂದ ದೀಪಾ ಪ್ರಜ್ವಲನ ಕಾರ್ಯಕ್ರಮ. EOW 6 ಬ್ಯಾಚ್ನ ನ ಎಲ್ಲಾ ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಸಾಮೂಹಿಕವಾಗಿ ಹೇಳಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊಫೆಸರ್ ಶಿವಶರಣಪ್ಪ ಚಿಟ್ಟ ಸರ್ EOW. ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಶ್ರೀ ಜಗನ್ನಾಥ್ ಭಂಗುರೆ ಸರ್ ಮಾಡಿದರು. ರೋಟರಿ ಕ್ವೆನ್ ಕ್ಲೋಬ್ ನಿಂದ ಆಗಮಿಸಿದ ಡಾ. ಜೈ ಶಾಲಿನಿ, ಡಾ. ಸಂಧ್ಯಾ ರೆಡ್ಡಿ, ಡಾ. ರುಚಿಕಾ ಶಾ. ರವರ ಮುಖಾಂತರ ಸರ್ಟಿಫಿಕೇಟ್ ಅನ್ನು ಕೊಡಲಾಯಿತು ಅದೇ ರೀತಿ ಕಾರ್ಯಕ್ರಮದಲ್ಲಿ ಅಂಚಲ್ ಸಮಿತಿಯಿಂದ ನಿತೀಶ ಬಿರಾದಾರ್, ಸತೀಶ ಸ್ವಾಮಿ, ಅದೇ ರೀತಿ ಮನ್ ದಕನಳ್ಳಿ ಗ್ರಾಮ ಪ್ರಮುಖರಾದ ಅಮೃತ್ ಎಸ್ ಲಕ್ಕಾ , ಅಭ್ಜಿತ್ ಮುಕ್ತಿದಾರ್ ಅಶೋಕ್ ತೆಲಂಗಾಣ ಸೋಮನಾಥ ಸಂತಪುರೆ ತುಕಾರಾಂ ಕುಂಬಾರ್ ನಾಗಪ್ಪ ದೇವಸ್ಥಾನದ ಅರ್ಚಕರಾದ ಪ್ರಭು ಈರಣ್ಣ ನಿಂಗದಳ್ಳಿ ಏಕಲ್ ಕಾರ್ಯಕರ್ತರಾದ ಬೀದರ್ ಅಂಚಲ್ ಪ್ರತಿ ನಿಧಿ ಶ್ರುತಿ ಸ್ವಾಮಿ , ಅಭಿಯಾನ ಪ್ರಮುಖ ಮನೋಹರ್ ಬೀದರ್ ಅಂಚಲ ಕಾರ್ಯಾಲಯ ಪ್ರಮುಖ ಚಿದಾನಂದ ಸಿಂಧೆ ಶ್ರೀ ಹರಿ ಸತ್ಸಂಗದ ಪ್ರಮುಖ ಪ್ರಭು, ಕಂಠಾಣ ಸಂಚ್ ಪ್ರಮುಖ ಅಂಬಿಕಾ. EOW ಟ್ರೈನರ್ ಸುನಿಲ್ ಕುಮಾರ್ ಮತ್ತು ಮಂದಕನಹಳ್ಳಿ ಗ್ರಾಮದ ಏಕಲ್ ವಿದ್ಯಾಲಯದ ಆಚಾರ್ಯ ,ಮಕ್ಕಳು. ಅದೇ ರೀತಿ EOW ನ ಖಾಶಾಂಪುರ್ ಮರ್ಜಪುರ್ ಮಂದಕನಳ್ಳಿ ಕಂಗನಕೋಟ ಗ್ರಾಮಗಳ 06 ಬ್ಯಾಚಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಹಾಗೂ ಬೀದರ್ ಅಂಚಲ್ ಅಧ್ಯಕ್ಷರಾದ ರಾಜಕುಮಾರ್ ಅಳ್ಳೆ ವಂದಿಸಿದರು ಕೊನೆಗೆ EOW ನ ಸಾರಥಿ ಗಣೀಶ್ ಜೀ ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಳಿಸಲಾಯಿತು.
ಜೊತೆಗೆ ಎಲ್ಲ ಕಾರ್ಯಕರ್ತರುಗಳನ್ನು ಸೇರಿಕೊಂಡು ರಕ್ಷಾ ಬಂಧನ ಕಾರ್ಯಕ್ರಮ ಮಾಡಲಾಯಿತು, ನಂತರ ಭೋಜನ ಮಂತ್ರದೊಂದಿಗೆ ಊಟವನ್ನು ಮುಗಿಸಿಕೊಂಡು ಎಲ್ಲಾ ವಿದ್ಯಾರ್ಥಿಗಳು ಮತ್ತು ಬಂದ ಅತಿಥಿಗಳು ತಮ್ಮ ತಮ್ಮ ಮನೆಗಳಿಗೆ ತೆರಳಿದರು.