# ಆ.೨, ೩ರಂದು ಪ್ರಸುತಿ ಮತ್ತು ಸ್ತ್ರೀರೋಗ ಬಗ್ಗೆ ಸಮ್ಮೇಳನ : ಡಾ. ಹೇಮಲತಾ ಪಾಟೀಲ – Samruddiya Nele
ವಿಶೇಷ ವರದಿ

ಆ.೨, ೩ರಂದು ಪ್ರಸುತಿ ಮತ್ತು ಸ್ತ್ರೀರೋಗ ಬಗ್ಗೆ ಸಮ್ಮೇಳನ : ಡಾ. ಹೇಮಲತಾ ಪಾಟೀಲ

Amazon.in/ONLINE SHOPPING

 ಆ.೨, ೩ರಂದು ಪ್ರಸುತಿ ಮತ್ತು ಸ್ತ್ರೀ ರೋಗ ಬಗ್ಗೆ ಸಮ್ಮೇಳನ:  ಡಾ. ಹೇಮಲತಾ ಪಾಟೀಲ

ಬೀದರ್: ಆಗಸ್ಟ್ ೨ ಹಾಗೂ ೩ರಂದು ನಗರದ ಬ್ರಿಮ್ಸ್ ಕಾಲೇಜು ಅವರಣದ ಅಡಿಟೊರಿಯಮ್ ಹಾಲ್‌ನಲ್ಲಿ ಪ್ರಸುತಿ ಮತ್ತು ಸ್ತ್ರೀ ರೋಗಗಳ ಬಗ್ಗೆ ಎರಡು ದಿವಸದ ಕಾರ್ಯಾಗಾರ ಹಾಗೂ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಸುತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಸಂಘಟನಾ ಕಾರ್ಯದರ್ಶಿ ಡಾ.ಹೇಮಲತಾ ಪಾಟೀಲ ಹೇಳಿದರು.
ಬುಧವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಸಿಸಿ ಮಾತನಾಡಿರುವ ಅವರು, ಪ್ರಸುತಿ ಮತ್ತು  ಸ್ತ್ರೀ ರೋಗ ತಜ್ಞರ ಸಂಘ, ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೀದರ್ ಮತ್ತು ಕರ್ನಾಟಕ ರಾಜ್ಯ ಪ್ರಸುತಿ ಮತ್ತು ಸ್ತ್ರೀ ರೋಗ ತಜ್ಞರ ಉತ್ತರ ವಲಯ ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಾಗಾರ ಮತ್ತು ಸಮ್ಮೇಳನ ಜರುಗಲಿದೆ. ದೇಶದ ಮೂಲೆ, ಮೂಲೆಗಳಿಂದ ನುರಿತ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳು ಆಗಮಿಸುವರು. ಜಿಲ್ಲೆಯ ಸ್ತ್ರೀ ರೋಗ ತಜ್ಞರು, ಮಕ್ಕಳ ರೋಗ ತಜ್ಞರು ಹಾಗೂ ಅವರಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಈ ತರಬೇತಿ ನೀಡಲಾಗುವುದು. ಬ್ರಿಮ್ಸ್ ನಲ್ಲಿನ ಮಹಿಳೆಯರ ಮತ್ತು ಮಕ್ಕಳ ಬಗ್ಗೆ ಅಧ್ಯಯನ ಮಾಡುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಸಮ್ಮೇಳನದಲ್ಲಿ ಭಾಗವಹಿಸುವರು ಎಂದರು.
ಸ೦ಘದ ಉಪಾಧ್ಯಕ್ಷೆ ಡಾ.ಲಲಿತಮ್ಮ ಮಾತನಾಡಿ, ೨೦೧೫ರಲ್ಲಿ ಭಾರತದಲ್ಲಿ ಬಾಣಂತಿಯರ ಮರಣ ಪ್ರಮಾಣ ಸರಾಸರಿ ೧೨೨ ಇದ್ದುದು ೨೦೨೪-೨೫ರಲ್ಲಿ ೮೮ಕ್ಕೆ ಇಳಿದಿದೆ. ಕರ್ನಾಟಕದಲ್ಲಿ ಹೋಲಿಸಿದರೆ ೨೦೧೫ರಲ್ಲಿ ಸರಾಸರಿ ಪ್ರಮಾಣ ೯೭ ಇದ್ದುದು ೨೦೨೪-೨೫ರಲ್ಲಿ ೫೭ಕ್ಕೆ ಬಂದು ತಲುಪಿದೆ. ಇದರ ಪ್ರಮಾಣ ೩೦ಕ್ಕೆ ತರುವ ಗುರಿ ನಮ್ಮದಾಗಿದ್ದು, ಈ ಸಮ್ಮೇಳನದಲ್ಲಿ ನುರಿತ ಸ್ತ್ರೀ ರೋಗ ತಜ್ಞರಿಂದ ತರಬೇತಿ ನೀಡಿ ಹೆರಿಗೆ ಸಂದರ್ಭದಲ್ಲಿ ಆಗುವ ತೊಂದರೆ ನಿವಾರಣೆ ಹಾಗೂ ಸುಳಬ ರೀತಿಯ ಹೆರಿಗೆಗೆ ಅನುಕುಲ ಆಗುವ ನಿಟ್ಟಿನಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಮಾಹಿತಿ ನೀಡಲಾಗುವುದೆಂದರು.
ಕಾರ್ಯಕ್ರಮದ ವಿವರಣೆ ಮೇಲೆ ಬೆಳಕು ಚಲ್ಲಿದ ಡಾ.ಲಲಿತಮ್ಮ ಅವರು, ಆಗಸ್ಟ್ ೨ರಂದು ಸಾಯಂಕಾಲ ೪ ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಶ ಪಾಟೀಲ ಸಮಾರಂಭ ಉದ್ಘಾಟಿಸಲಿದ್ದು, ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹಿಮ್ ಖಾನ್, ಸಂಸದ ಸಾಗರ ಖಂಡ್ರೆ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ.ಸುಜಾತಾ ರಾಠೋಡ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಸಿ.ಇ.ಒ ಗಿರೀಶ ಬದೋಲೆ, ಎಸ್.ಪಿ ಪ್ರದೀಪ ಗುಂಟಿ, ಬ್ರಿಮ್ಸ್ ಮುಖ್ಯ ಅಡಳಿತಾಧಿಕಾರಿ ಕು.ಸುರೇಖಾ, ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ ಶಟಕಾರ, ಕರ್ನಾಟಕ ರಾಜ್ಯ ಪ್ರಸುತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಮಹಾ ಪೋಷಕರಾದ ಡಾ.ಎಮ್.ಜಿ ಹಿರೇಮಠ, ಪೋಷಕರಾದ ಡಾ.ನಾಗೆಆಜ.ಹೆಚ್, ಸಂಘದ ರಾಜ್ಯಾಧ್ಯಕ್ಷ ಡಾ.ದುರ್ಗಾದಾಸ ಅಪ್ಪಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಶೋಭಾ ಗುಡಿ, ಕೆ.ಎಸ್.ಒ.ಜಿ.ಎ ಅಧ್ಯಕ್ಷೆ ಡಾ.ರಾಜಶ್ರೀ ಪಲಾಡಿ, ಖಜಾಂಚಿ ಡಾ.ಶೋಭಾ ಬೆಂಬಳಗಿ, ಕೆ.ಸಿಒ.ಜಿ ಡೀನ್ ಡಾ.ಎಮ್.ಬಿ.ಬೆಲ್ಲದ, ಎಫ್.ಒ.ಜಿ.ಎಸ್.ಐ ಉಪಾಧ್ಯಕ್ಷೆ ಡಾ.ವಿದ್ಯಾ ಥೊಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜ್ಞಾನೇಶ್ವರ ನಿರಗುಡೆ, ಬ್ರಿಮ್ಸ್ ಆಸ್ಪತ್ರೆಯ ಅಧಿಕ್ಷಕ ಡಾ.ಶಿವಯೋಗಿ ಬಾಳಿ, ಜಿಲ್ಲಾ ಶಸ್ತ್ರ ಚಿಕಿತ್ಸೆಕ ಡಾ.ಎಮ್.ಡಿ ಅಹ್ಮದ್ದುದ್ದಿನ್, ಬ್ರಿಮ್ಸ್ ಕಾಲೇಜಿನ ಪ್ರಾಚಾರ್ಯ ಡಾ.ರಾಜೇಶ ಪಾರಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ವಿವರಿಸಿದರು.
ಪ್ರಸುತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಕಾರ್ಯದರ್ಶಿ ಡಾ.ಸವಿತಾ ಬಡಿಗೇರ ಮಾತನಾಡಿ,
ನಮ್ಮ ಬೀದರ್ ಜಿಲ್ಲೆಯಲ್ಲಿ ಹೆಚ್ಚಿನ ಅಪಾಯದ ಗರ್ಭಧಾರಣೆ ಅಂದರೆ ಮಧುಮೇಹ, ಕಾಮಾಲೆ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆ ಹೊಂದಿರುವ ಗರ್ಭಿಣಿಯರು ಅಂತಹ ಮಹಿಳೆಯರ ಚಿಕಿತ್ಸೆಗೆ ಬೇಕಾಗಿರುವ ಹೆಚ್ಚಿನ ಜ್ಞಾನ ಮತ್ತು ಅದಕ್ಕೆ ಅವಶ್ಯಕತೆ ಇರುವ ತಯಾರಿಗಳನ್ನು ಹೇಗೆ ಇನ್ನು ಹೆಚ್ಚು ಅಭಿವೃದ್ಧಿಪಡಿಸಬೇಕು ಎಂಬುದರ ಕುರಿತು ನಮ್ಮೊಂದಿಗೆ ಚರ್ಚಿಸಲು ನಮ್ಮ ರಾಜ್ಯದ ಹಾಗೂ ಬೇರೆ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ ಹಾಗೂ ಕೇರಳದಿಂದ ಪರಿಣಿತ ವೈದ್ಯರು ಸಂಪನ್ಮೂಲ ವ್ಯಕ್ತಿಗಳಾಗಿ ಬರುತ್ತಿದ್ದಾರೆ. ಇದರಿಂದ ನಮ್ಮ ಜಿಲ್ಲೆಯ ಪ್ರಸೂತಿ ಹಾಗೂ ಸ್ತ್ರೀರೋಗ ವೈದ್ಯರಿಗೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ತುಂಬಾ ಅನುಕೂಲವಾಗಬಹುದು. ಇಂತಹ ಒಂದು ಕಾರ್ಯಗಾರ ಹಾಗೂ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿದೆ ಇದಕ್ಕೆ ಕಾರಣ ನಮ್ಮ ಜಿಲ್ಲೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸಂಘ ಕಾರಣ ಎಂದು ಬಣ್ಣಿಸಿದರು.
ಸಂಘದ ಖಜಾಂಚಿ ಡಾ.ಶಾರದಾ ಗುದಗೆ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ಜಿಲ್ಲೆಯಲ್ಲಿ ಲ್ಯಾಪ್ರಾಸ್ಕೋಪಿ ವತಿಯಿಂದ ಸರಳ ಗರ್ಭಧಾರಣೆ ಹಾಗೂ ಪ್ರಸುತಿಗೆ ಅನುಕುಲ ಆಗುತ್ತಿದ್ದು, ಅದು ಇನ್ನಷ್ಟು ಪರಿಣಾಮಕಾರಿಯಾಗಿ ಹೊರಹೊಮ್ಮಲು ಜಿಲ್ಲೆಯ ಎಲ್ಲ ಸ್ತ್ರೀ ಹಾಗೂ ಮಕ್ಕಳ ರೋಗ ತಜ್ಞರಿಗೆ ಈ ಕಾರ್ಯಾಗಾರ ಅನುಕುಲ ಆಗಲಿದ್ದು, ಜಿಲ್ಲೆಯ ಮೇಲ್ತಿಳಿಸಿದ ವೈದ್ಯರು ಹಾಗೂ ಸಿಬ್ಬಂದಿಗಳು ಇ ಎರಡು ದಿವಸದ ಕಾರ್ಯಾಗಾರ ಮತ್ತು ಸಮ್ಮೇಳನದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!