ಬೀದರ :- ಎಲ್ಲರೂ ಪತ್ರಕರ್ತರೇ ಎಂಬ ವಿಶೇಷ ರೀತಿಯ ಸನ್ಮಾನಕ್ಕೆ ಇತ್ತೀಚಿನ ಒಂದು ಘಟನೆ ನಾಂದಿ ಹಾಡಿತು. ಅತೀ ವೇಗದಿಂದ ಬದಲಾಗುತ್ತಿರುವ ಇಂದಿನ ಸುದ್ದಿ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ತನ್ನ ಅಭಿಪ್ರಾಯ ವ್ಯಕ್ತ ಪಡಿಸಲಿಕ್ಕೆ ಒಂದು ಮಾಧ್ಯಮ ಸಾಮಾಜಿಕ ಜಾಲತಾಣ ಎಂಬ ವಾಟ್ಸ ಆಪ್, ಟ್ವಿಟರ್, ಫೇಸ್‌ಬುಕ್, ಇನ್ಟಾಗ್ರಾಮ್ ಇತ್ಯಾದಿ ವೇದಿಕೆಗಳು ಲಭ್ಯವಿವೆ. ಇದರಿಂದ ಎಲ್ಲರೂ ಪತ್ರಕರ್ತರ ತರಹ ತನ್ನ ವಿಚಾರ ಅಭಿವ್ಯಕ್ತಿ ಪಡಿಸುತಿದ್ದಾರೆ.
ಈ ರೀತಿಯ ವೇದಿಕೆಯಿಂದ ನೂರಾರು ಸಾಮಾನ್ಯ ಜನ ಸೆಲೆಬ್ರಿಟಿ ಆಗಿ ಸಮಾಜದಲ್ಲಿ ಮಾನ ಸನ್ಮಾನ ಪಡೆಯುತಿದ್ದಾರೆ ಎಂದು ಹಿರಿಯ ಪತ್ರಕರ್ತ ಹಾಗೂ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಸಂಘದ ರಾಜ್ಯ ಅಧ್ಯಕ್ಷರು ಶ್ರೀ ಗಂಧರ್ವ ಸೇನಾ ಅವರು ನುಡಿದರು.
ಅವರು ಇತ್ತೀಚಿಗೆ ಬೀದರನಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಸಮೃದ್ಧಿಯ ನೆಲೆ ಪತ್ರಿಕೆ ಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತಿದ್ದರು. ಈ ಸಮಾರಂಭದಲ್ಲಿಯೇ ಶ್ರೀ ಪ್ರಕಾಶ ಬಿ. ಹೊಕರಾಣಾ ಎಂಬ ವರು ತನ್ನ ಮಾತುಗಾರಿಕೆಯ ಕೌಶಲ್ಯ ದಿಂದ ಇಡಿ ರಾಜ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೂ ಪತ್ರಿಕಾ ದಿನಾಚರಣೆ ದಿನ ಸನ್ಮಾನಿಸಲಾಯಿತು.
ಹೀಗೆ ಸುಮ್ಮನೆ ಚಾಟ್ ಮಾಡ್ತಿವೆ ಅನ್ನೋರು ಇನ್ಮುಂದೆ ಜಾಗರೂಕತೆಯಿಂದ ನಡೆಯಬೇಕಿದೆ. ಸರಕಾರ ಪತ್ರಿಕೆ ಗಳಿಗೆ ಇರುವ ತರಹ ಕಾನೂನುಗಳು ಸಾಮಾಜಿಕ ಜಾಲತಾಣಗಳು ಬಳಸುವರ ಸಲುವಾಗಿ ತರುತ್ತಿದೆ ಎಂದು ಶ್ರೀ ಗಂಧರ್ವ ಸೇನಾ ಅವರು ಮುಂದುವರಿದು ಹೇಳಿದರು.