# ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾ ಘಟಕದ ಉದ್ಘಾಟನೆ – Samruddiya Nele
ವಿಶೇಷ ವರದಿ

ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾ ಘಟಕದ ಉದ್ಘಾಟನೆ

ಶ್ರೀಮತಿ ಶೈನಿ ಪ್ರದೀಪ್ ಗುಂಟಿ ಸೇರಿ ಮೂವರಿಗೆ ಸನ್ಮಾನ

ಬೀದರ :- ಅಖೀಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಬೀದರ. ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಪದಗ್ರಹಣ ಕಾರ್ಯಕ್ರಮ ದಲ್ಲಿ ಜಿಲ್ಲೆಯ ಪ್ರಮುಖ ಮೂವರು ಮಹಿಳಾ ಸಾಧಕೀಯರನ್ನು ಸನ್ಮಾನಿಸಲಾಗುತಿದೆ.

ಶ್ರೀಮತಿ ಶೈನಿ ಪ್ರದೀಪ್ ಗುಂಟಿ,

ಅಕ್ಕ ಪಡೆಯ ರಾಜ್ಯ ಸಂಯೋಜಕಿ , ಇವರು ಸೇರಿ ಮೂವರಿಗೆ ವಿಶೇಷ ಸನ್ಮಾನ

ಇಡೀ ರಾಜ್ಯಕ್ಕೆ ಬೀದರ ಪೋಲಿಸ್ ಇಲಾಖೆಯ ಅಕ್ಕ ಪಡೆ ಮಾದರಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಈ ಅಕ್ಕ ಪಡೆಯ ರಾಜ್ಯ ಸಂಯೋಜಕರಾದ ಶ್ರೀಮತಿ ಶೈನಿ ಪ್ರದೀಪ್ ಗುಂಟಿ ಹಾಗೂ ಔರಾದ ತಾಲೂಕು ವೈದ್ಯಾಧಿಕಾರಿಗಳಾದ ಡಾ. ಗಾಯತ್ರಿ ವಿಜಯಕುಮಾರ ಹಾಗೂ ಜೂನಿಯರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸೆಕೆಂಡ್ ರನ್ನರ್ ಅಪ್ ಗೆ ಭಾಜನಳಾದ ಕು. ಪೂರ್ವಿ ಸಂಜಯಕುಮಾರ ಬಿರಾದಾರ ಅವರುಗಳನ್ನು ಸನ್ಮಾನ ಮಾಡಲಾಗುತಿದೆ ಎಂದು ಸಂಘದ ಅಧ್ಯಕ್ಷರಾದ ಶ್ರೀಮತಿ. ಬಿ. ಜೆ. ಪಾರ್ವತಿ ವಿ. ಸೋನಾರೆ ಅವರು ತಿಳಿಸಿದ್ದಾರೆ. 
ಅವರು ಇಂದಿಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತಿದ್ದರು.
ದಿನಾಂಕ 23-02-2026 ಸೋಮವಾರದಂದು ಬೆಳಿಗ್ಗೆ 10-30 ಗಂಟೆಗೆ ನಗರದ ಪೂಜ್ಯ ಚನ್ನ ಬಸವ ಪಟ್ಟದೇವರ ರಂಗ ಮಂದಿರನಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀಮತಿ. ಬಿ. ಜೆ. ಪಾರ್ವತಿ ವಿ. ಸೋನಾರೆ ಅವರು ಮುಂದುವರೆದು ತಿಳಿಸಿದರು.
ಹಿರೇಮಠ ಸಂಸ್ಥಾನ ಭಾಲ್ಕಿಯ ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೆವರು ದಿವ್ಯ ಸಾನಿಧ್ಯ ವಹಿಸಲಿರುವ ಸದರಿ ಕಾರ್ಯಕ್ರಮದ ಉದ್ಘಾಟಕರಾಗಿ ರಾಜ್ಯದ ವಿಧಾನ ಪರಿಷತ್ತಿನ ಸಭಾಪತಿಗಳಾದ ಶ್ರೀ ಬಸವರಾಜ ಎಸ್. ಹೊರಟ್ಟಿ ಅವರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಸಚಿವರಾದ ಶ್ರೀ ಈಶ್ವರ ಬಿ. ಖಂಡ್ರೆ ಅವರು ವಹಿಸಲಿದ್ದಾರೆ ಎಂದೂ ಶ್ರೀಮತಿ ಪಾರ್ವತಿ ಸೋನಾರೆ ಅವರು ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ಸಚಿವರು , ಶಾಸಕರು , ಅಧಿಕಾರಗಳು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಘದ ರಾಜ್ಯ ಪದಾಧಿಕಾರಿಗಳೂ ಸದರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಶ್ರೀಮತಿ ಪಾರ್ವತಿ ಸೋನಾರೆ ಹೇಳಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಯಾದ ಗೀತಾ ಗಡ್ಡೆ ಖಜಾಂಚಿಯಾದ ಪದ್ಮ ಮಡಿವಾಳ ಹಾಗೂ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!