ಶರಣರ ಲಿಂಗಾಯತಕ್ಕೆ ಹೊಸ ಹೆಸರು ” ಬಸವಶೈವ ” ಎಂದು ಇಟ್ಟಿದ್ದ ಡಾ ಡಿ ಎ ಉಪಾಧ್ಯ ಅವರ ಹೊಸ ಆವಿಷ್ಕಾರ: ಲಿಂಗಾಯತ ಧರ್ಮದ ವಿರೋಧಿಗಳಿಂದ RSS ಹಿಂದೂ ವಾದಿಗಳಿಂದ ಇದು ಹೊಸ ಸಮಸ್ಯೆ,ಈ ಪುಸ್ತಕ ಮುಖಾಂತರ ಬಸವ ತತ್ವ ಸಿದ್ದಾಂತ ಹಾಳು ಮಾಡುವ ತಂತ್ರಗಾರಿಕೆ:
ವೈದಿಕರು ಮನುವಾದಿಗಳು ಭಾರತ ದೇಶದಲ್ಲಿ ಭಾರತೀಯ ಸಂಸ್ಕೃತಿಯ ಹೊಸ ಧರ್ಮಗಳಿಗೆ ವಿರೋಧ ಮಾಡಿ ಅವುಗಳನ್ನು ಮುಗಿಸಿದ್ದು ಇತಿಹಾಸದಲ್ಲಿ ಇದೆ. ಬೌದ್ಧ ಧರ್ಮ, ಜೈನ ಧರ್ಮ ಮುಗಿಸಿದ್ದರು, ಆದರೆ ಬೌದ್ಧ ಧರ್ಮ ಜಗತ್ತಿನ ಹಲವಾರು ದೇಶಗಳಲ್ಲಿ ಬೆಳೆಯಿತು ಮತ್ತೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಧರ್ಮ ಸ್ವೀಕಾರದಿಂದ ಮತ್ತೆ ದೇಶದಲ್ಲಿ ನೆಲೆ ಕಂಡಿತ್ತು. ಸಿಖ್ ಧರ್ಮ ಲಿಂಗಾಯತ ಧರ್ಮದ ಅನುಯಾಯಿಗಳು ವೈದಿಕರ ಮನುವಾದಿಗಳ ಕುತಂತ್ರಕ್ಕೆ ಎದುರಿಸಿ ಧರ್ಮ ಉಳಿಸಲು ನಿರಂತರ ಹೋರಾಡುತ್ತಿದ್ದಾರೆ. ಪುರೋಹಿತಶಾಹಿಗಳು ಇಂದಿಗೂ ಬಸವ ತತ್ವ ಸಿದ್ದಾಂತ ಮುಗಿಸಬೇಕು ಎಂದು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.

ನನಗೆ ಈ ಪುಸ್ತಕ ಓದಿ ಉತ್ತರವಾಗಿ ಪುಸ್ತಕ ಬರೆಯಲು ಡಾ ಶಿವಾನಂದ ಜಾಮದಾರ ಐಎಎಸ್ ನಿವೃತ ಅಧಿಕಾರಿಗಳು, ಹಿರಿಯರು, ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ಕೇಳಿಕೊಂಡಿದ್ದರು. ಆದರೆ ಬೆಂಗಳೂರು, ಮೈಸೂರು, ಧಾರವಾಡ, ಬೆಳಗಾವಿ ಇನ್ನಿತರ ಜಿಲ್ಲೆಗಳಲ್ಲಿ ಕೇಳಿದರು ಪುಸ್ತಕ ಸಿಗಲಿಲ್ಲ. ಸಪ್ನಾ ಪುಸ್ತಕ ಮತ್ತು ವೀರಲೋಕ ಪಬಲೀಷೆರ ಕೇಳಿದ್ದರು ಪುಸ್ತಕ ಸಿಗಲಿಲ್ಲ. ಅಂದರೆ ಇದು ಒಂದು ದ್ವೇಷದ ಕೆಟ್ಟ ಪುಸ್ತಕ ಇರಬಹುದು ಎಂದು ಅನಿಸಿತ್ತು. ಆದರೆ ನನ್ನ ಹಠ ಬಿಡಲಿಲ್ಲ ನಾನು ಪೂಜ್ಯ ಜಗದ್ಗುರು ತೋಟದರ್ಯ ಡಾ ಸಿದ್ಧರಾಮ ಸ್ವಾಮಿಗಳು ಗದಗ ಇವರಿಗೆ ಸಂಪರ್ಕಿಸಿದೆ, ಲೇಖಕ ನಮ್ಮ ಜಿಲ್ಲೆಯವರು ಅಣ್ಣಿಗೇರಿಯವರೂ, ನಾನು ತರಿಸಿ ಕೊಡುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದರು , ಅದರಂತೆ ಇಂದು ಪುಸ್ತಕ ಕೈಸೇರಿತ್ತು. ಧನ್ಯವಾದ ಪೂಜ್ಯರೇ.
ಇಂದು ರಂಜಾನ್ ಹಬ್ಬದ ನಿಮಿತ್ಯ ಗೆಳೆಯರ ಮನೆಗಳಿಗೆ ಭೇಟಿ ಕೊಟ್ಟಿದ್ದು ನಂತರ ಮನೆಗೆ ಬಂದು 50 ಪುಟ ಓದಿದೆ, ಅಭಿಮತ ಶ್ರೀ ಪ್ರಭುದೇವ ಚಿಗಟೇರಿ ಹಿರಿಯ ಉಪಾಧ್ಯಕ್ಷರು ಬಸವ ಸಮಿತಿ ಬೆಂಗಳೂರು ಬರೆದಿದ್ದಾರೆ, ಇದು ಒಂದು ದುರಂತ. ಲಿಂಗೈಕ್ಯ ಶ್ರೀ ಬಿಡಿ ಜತ್ತಿ ದೇಶದ ರಾಷ್ಟ್ರಪತಿ ಆಗಿದ್ದವರು ಸ್ಥಾಪನೆ ಮಾಡಿದ ಸಂಸ್ಥೆ, ಶ್ರೀ ಅರವಿಂದ ಜತ್ತಿಯವರ ಬಸವ ಸಮಿತಿ ಅಧ್ಯಕ್ಷತೆ ಮುಂದಾಳತ್ವದಲ್ಲಿ ಬಸವ ತತ್ವ ಸಿದ್ದಾಂತ ಪ್ರಚಾರದಲ್ಲಿ ದೇಶ ವಿದೇಶದಲ್ಲಿ ಅವಿರತ ಪ್ರಚಾರ ಮಾಡುತ್ತಿದ್ದಾರೆ, ಇಂತಹ ಮಹಾನ ಸಂಸ್ಥೆಯ ಉಪಾಧ್ಯಕ್ಷ ಬಸವ ತತ್ವ ಸಿದ್ದಾಂತ ವಿರೋಧದಲ್ಲಿ ತೊಡಗಿಸಿಕೊಂಡಿದ್ದು ವಿಷಾದನೀಯ. ಇವರು ಶರಣಲಿಂಗಾಯತಕ್ಕೆ ” ಬಸವಶೈವ ” ಹೆಸರಿಟ್ಟು ಹೊಸ ದೃಷ್ಟಿ ಕೊಟ್ಟಿದ್ದಾರೆ ಎಂದು ಹೇಳುತ್ತಾರೆ, ಇದು ಒಂದು ಹೊಸ ಕೊಡುಗೆ ಎಂದು ಕೊಂಡಾಡುತ್ತಾರೆ.
ಬರೆದವನ ಬಿನ್ನಹ ‘ ಓದಿದೆ, ಅಲ್ಲಿ ಲೇಖಕರ ಒಳಮರ್ಮ ಗೊತ್ತಾಯಿತು. ಹಿಂದೂ ಧರ್ಮದ ವಿರೋಧಿಗಳು ಬಸವಾದಿ ಶರಣರನ್ನು ಹೆಚ್ಚಾಗಿ ವಿಜೃಂಭಿಸುತ್ತಿದ್ದಾರೆ ಎನ್ನುವ ಅವರ ವೇದನೆ, ಆದರೆ ಹಿಂದೂ ಧರ್ಮದಲ್ಲಿ ಇದ್ದುದೇ ಬಸವಾದಿ ಶರಣರು ಹೇಳಿದ್ದಾರೆ ಎಂದು ಅವರ ಪ್ರತಿಪಾದನೆ. ವರ್ಷದ ಹಿಂದೆ RSS ಪ್ರೋತ್ಸಾಹಿತ ” ವಚನ ದರ್ಶನ ” ಕಳಪೆ ಪುಸ್ತಕದ ಮುಂದುವರೆದ ಬಸವಾದಿ ಶರಣರ ತತ್ವ ಸಿದ್ದಾಂತ ವಿರೋಧಿ ಪುಸ್ತಕದ ಸರಮಾಲೆಯ ಈ ಒಂದು ಬಸವಶೈವದಲ್ಲಿ ಹಿಂದುತ್ವ ಪುಸ್ತಕ, ಇದರಲ್ಲಿ ಯಾವುದೇ ಸಂಶಯ ಇಲ್ಲ. ಲೇಖಕರು ಹಿಂದೂ ಧರ್ಮದಲ್ಲಿ ಇದ್ದುದೇ ವಚನಗಳಲ್ಲಿ ಇದೆ ಎಂದು ಒತ್ತಿ ಹೇಳುತ್ತಾರೆ, ಆದರೆ ಹಿಂದೂ ಶಬ್ದ ರೂಢಿಗೆ ಬಂದಿದ್ದು 13ನೆ ಶತಮಾನದಲ್ಲಿ, ಲಿಂಗಾಯತ ಧರ್ಮ ಸ್ಥಾಪನೆ ಆಗಿದ್ದು 12ನೆ ಶತಮಾನದಲ್ಲಿ, ಇದಕ್ಕಿಂತ ಮೊದಲು ಸನಾತನ ವೈಧಿಕ ಧರ್ಮ ಇತ್ತು, ಇಲ್ಲಿಯ ಅವರ ಸುಳ್ಳು ಹೊರಹೊಮ್ಮುತ್ತದೆ. ಲೇಖಕರು ಮುಂದೂವರೆದೂ ಬರೆಯುತ್ತಾರೆ, ಅವರು ಒಂದು ಸಿನಿಮಾ ” ಮುಢಾಯಣಾ” ಮಾಡಿದ್ದರಂತೆ , ಅದಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನ್ನಣೆ ಕೊಡಲಿಲ್ಲ ಅಂತೆ , ಇಲ್ಲಿಯವರೆಗೆ ಸಿನಿಮಾಕ್ಕೆ ಸರಕಾರದಿಂದ ಸಹಾಯ ಧನ ಸಿಕ್ಕಿಲ್ಲ ಎನ್ನುವ ಸಿಟ್ಟು ಇದೆ, ಸಿದ್ದರಾಮಯ್ಯ ಮೊದಲ ಮುಖ್ಯಮಂತ್ರಿ ಆದ ಅವಧಿಯಿಂದ ಮತ್ತೆ ಮುಖ್ಯಮಂತ್ರಿ ಆಗುವ ಮಧ್ಯ ಸುಮಾರು ಮೂವರು ಅಂದರೆ ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಹೋಗಿದ್ದಾರೆ, ಅವರು ಏಕೆ ಸಹಾಯಧನ ನೀಡಿಲ್ಲ? ಅದು ಉಲ್ಲೇಖ ಮಾಡಿಲ್ಲ. ಸಿದ್ದರಾಮಯ್ಯ ಅವರು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ಸಿಫಾರಸ್ ಮಾಡಿದ್ದು ತಪ್ಪು ಎಂದು ಹೇಳುತ್ತಾರೆ, ನಾಗಮೋಹನದಾಸ ಕೂಡ ಗಡಬಿಡಿಯಲ್ಲಿ ವರದಿ ಕೊಟ್ಟಿದ್ದಾರೆ ಎಂದು ಆಪಾದನೆ ಮಾಡುತ್ತಾರೆ. ಇವರ ದ್ವೇಷ ಅವರ ಮುನ್ನುಡಿಯಲ್ಲಿ ಲೇಖನದಲ್ಲಿ ಎದ್ದು ಕಾಣುತ್ತದೆ.
ಮುಂದೆ ನಾನು ಈ ಪುಸ್ತಕ ಓದಿ ಉತ್ತರವಾಗಿ ಪುಸ್ತಕ ಬರೆಯಲು ಪ್ರಾರಂಭ ಮಾಡುತ್ತೇನೆ.
ಎಲ್ಲರ ಸಹಕಾರ ಇರಲಿ. ಧನ್ಯವಾದ
ಶ್ರೀಕಾಂತ ಸ್ವಾಮಿ ಬೀದರ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.






