# ಮುಂದಿನ ಮಾರ್ಚ ಒಳಗಾಗಿ ಅನುಭವ ಮಂಟಪ ಲೋಕಾರ್ಪಣೆ-ಸಚಿವ ಈಶ್ವರ ಬಿ.ಖಂಡ್ರೆ – Samruddiya Nele
ರಾಜಕೀಯವಿಶೇಷ ವರದಿ

ಮುಂದಿನ ಮಾರ್ಚ ಒಳಗಾಗಿ ಅನುಭವ ಮಂಟಪ ಲೋಕಾರ್ಪಣೆ-ಸಚಿವ ಈಶ್ವರ ಬಿ.ಖಂಡ್ರೆ

ಬೀದರ, ಮೇ.04 (ಕರ್ನಾಟಕ ವಾರ್ತೆ):- ಅರಣ್ಯ, ಜೀವಿಶಾಸ್ತ್ರಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಸೋಮವಾರ ಬಸವಕಲ್ಯಾಣದ ಅನುಭವ ಮಂಟಪದ ಕಾಮಗಾರಿಯನ್ನು ಪರಿಶೀಲಿಸಿ ನಂತರ ಮುಂದಿನ ಮಾರ್ಚ ಒಳಗಾಗಿ ಅನುಭವ ಮಂಟಪ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು. 

ಬಸವಾದಿ ಶರಣರು ಈ ಜಗತ್ತಿನ ಸರ್ವಶ್ರೇಷ್ಟ ದಾರ್ಶನಿಕರು, ಮಹಾ ಮಾನವತಾವಾದಿಗಳು, ಕಾಯಕವೇ ಕೈಲಾಸವನ್ನು ಅಳವಡಿಸಿಕೊಂಡು ಜಗತ್ತಿಗೆ ಪ್ರಥಮ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದರು. 770 ಕಂಬಗಳ ಮೇಲೆ 770 ಶರಣರ ವಚನಗಳನ್ನು ಕೆತ್ತಲಾಗುತ್ತಿದೆ. ವೈಜ್ಞಾನಿಕವಾಗಿ ನೆಮ್ಮದಿ ನೀಡುವಂಥ ಇಷ್ಟಲಿಂಗ ತರಬೇತಿ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ಬದುಕನ್ನು ಹಸನಗೊಳಿಸಿಕೊಳ್ಳಲು ವೈಚಾರಿಕ ವಚನಗಳು ಸಹ ಆಧುನಿಕ ವಿಜ್ಞಾನ ತಂತ್ರಜ್ಞಾನ ಮೂಲಕ ಐಐಟಿ ವಿಜ್ಞಾನಿಗಳ ಮೂಲಕವಾಗಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

 ಕಾಯಕವೇ ಕೈಲಾಸ ಎಂದು ಹೇಳಿರುವ ಶರಣರ ಜೀವನವನ್ನು ಬಿಂಭಿಸುವ ಶರಣ ಗ್ರಾಮ ನಿರ್ಮಾಣಗೊಳ್ಳುತ್ತಿದೆ. ಈಗಿನ ಯುವಕರಿಗೆ ಅಗತ್ಯವಾದ ಕೌಶಲ್ಯ ತರಬೇತಿ ನೀಡುವ ಕೇಂದ್ರ ಆರಂಭಿಸಲಾಗುವುದು. ವೃತ್ತಿಯಲ್ಲಿ ಯಾವುದು ಮೇಲಿಲ್ಲ ಕೀಳಿಲ್ಲ ಎಂದು ಸಚಿವರು ತಿಳಿಸಿದರು.

 ಅನುಭವ ಮಂಟಪಕ್ಕೆ ಹಣದ ಕೊರತೆ ಇಲ್ಲ, ಈವರೆಗೆ 480 ಕೋರಿ ರೂ. ಖರ್ಚಾಗಿದೆ. ನಮ್ಮ ಮುಖ್ಯಮಂತ್ರಿಗಳು ಈ ಪೈಕಿ 280 ಕೋಟಿ ರೂ. ಅನುದಾನ ನೀಡಿದ್ದಾರೆ. ಉಳಿದ ಹಣವನ್ನು ಸಹ ಶೀಘ್ರವೇ ಬಿಡುಗಡೆ ಮಾಡಲಿದ್ದಾರೆ. ಕಾಲಮಿತಿಯಲ್ಲಿ ಕಾಮಗಾತಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.

 ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಅನುಭವ ಮಂಟಪದ ಸಂಯೋಜಕರಾದ ಡಾ.ಬಾಬಾಸಾಹೇಬ್ ಗಡ್ಡೆ ಸೇರಿದಂತೆ ಗಣ್ಯ ಮಾನ್ಯರು ಉಪಸ್ಥಿತರಿದ್ದರು.

अगले मार्च तक अनुभव मंटप का लोकार्पण – मंत्री ईश्वर बी. खंड्रे 

बिदर, मई 04 (कर्नाटक वार्ता):- वन, जीव विज्ञान तथा पर्यावरण और बिदर जिला प्रभारी मंत्री ईश्वर बी. खंड्रे ने सोमवार को बसवकल्याण के अनुभव मंटप के निर्माण कार्य का निरीक्षण करने के बाद बताया कि अगले मार्च तक अनुभव मंटप का लोकार्पण किया जाएगा।  

बसव आदि शरण इस विश्व के सर्वश्रेष्ठ दार्शनिक, महान मानवतावादी थे, जिन्होंने “कायक  वे  कैलास” को अपनाते हुए दुनिया को प्रथम लोकतंत्र की अवधारणा दी। 770 स्तंभों पर 770 शरणों के वचनों को उकेरा जा रहा है। वैज्ञानिक रूप से शांति प्रदान करने वाले इष्टलिंग प्रशिक्षण केंद्र का निर्माण किया जा रहा है। जीवन को बेहतर बनाने के लिए वैचारिक वचनों के माध्यम से आधुनिक विज्ञान और तकनीक का उपयोग कर आईआईटी वैज्ञानिकों के जरिए आम लोगों में जागरूकता पैदा करने का कार्यक्रम आयोजित किया जाएगा, ऐसा उन्होंने कहा।  

“कायक वे कैलास” कहने वाले शरणों के जीवन को दर्शाने वाला शरण ग्राम बनाया जा रहा है। वर्तमान युवाओं के लिए आवश्यक कौशल प्रशिक्षण प्रदान करने वाला केंद्र शुरू किया जाएगा। किसी भी पेशे में ऊंच-नीच नहीं होती, ऐसा मंत्री ने बताया।  

अनुभव मंटप के लिए धन की कोई कमी नहीं है, अब तक 480 करोड़ रुपये खर्च किए जा चुके हैं। हमारे मुख्यमंत्री ने इसमें से 280 करोड़ रुपये का अनुदान दिया है। शेष राशि भी जल्द ही जारी की जाएगी। कार्य को समय सीमा में पूरा करने के लिए ठेकेदारों को निर्देश दिए गए हैं, ऐसा उन्होंने कहा।  

इस अवसर पर जिलाधिकारी शिल्पा शर्मा, अनुभव मंटप के समन्वयक डॉ. बाबासाहेब गड्डे सहित कई गणमान्य व्यक्ति उपस्थित थे।

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!