ಬೀದರ :- ಶ್ರೀಮತಿ ಸವಿತಾ ವಿಜಯಕುಮಾರ ಮೊರಗಿ ಅವರನ್ನು ಬೀದರ ನಗರ ಸಭೆಯ ಆಶ್ರಯ ಕಮೇಟಿಯ ಸದಸ್ಯಳನ್ನಾಗಿ ರಾಜ್ಯ ಸರಕಾರ ನೇಮಕ ಮಾಡಿದೆ.
ಸವಿತಾ ಸಮಾಜದ ವಿದ್ಯಾವಂತ ಮಹಿಳೆ ಇವಳು ಬಿ.ಎ. ಬಿ.ಎಡ್. ಪದವಿಧರೆ.
ಇವರ ಪತಿ ವಿಜಯಕುಮಾರ ಮೊರಗಿ ಹಿಂದೆ ಇದೇ ಆಶ್ರಯ ಕಮೇಟಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಹಲವು ದಶಕಗಳಿಂದ ಸೇವೆ ಸಲ್ಲಿಸುತಿದ್ದಾರೆ.
ಶ್ರೀಮತಿ ಸವಿತಾ ಅವರ ಈ ನೇಮಕಕ್ಕೆ ಸವಿತಾ ಸಮಾಜದ ಹಿರಿಯರಾದ ಶ್ರೀ ಪ್ರಕಾಶ ಮೊರಗಿ, ಯುವ ಮುಂಡರಾದ ಶ್ರೀ ರಾಜಕುಮಾರ ಗೊಂದೆಗಾಂವ, ಕಲಬುರಗಿ ಸವಿತಾ ಸಮಾಜ ಮುಖಂಡರಾದ ಶ್ರೀ ಆನಂದ ವಾರಿಕ, ಬೀದರ ಜಿಲ್ಲಾ ಸವಿತಾ ಸಮಾಜದ ಮಾಜಿ ಅಧ್ಯಕ್ಷರಾದ ಶ್ರೀ ಶಾಮರಾವ ಮೊರಗಿ , ಹಿರಿಯರಾದ ಶ್ರೀ ಜಗನ್ನಾಥ ಚಲವಾ ಅವರು ಸೇರಿದಂತೆ ಅನೇಕ ಸವಿತಾ ಸಮಾಜದ ಮುಖಂಡರುಗಳು ಹಾರ್ದಿಕ ಅಭಿನಂದನೆಗಳು ಸಲ್ಲಿಸಿದ್ದಾರೆ.
ಪತ್ರಕರ್ತೆ ಸಮೃದ್ದಿಯ ನೆಲೆ ಕನ್ನಡ ದಿನ ಪತ್ರಿಕೆ ಸಂಪಾದಕಿ ಕೀರ್ತಿ ಸೇನಾ ಅವರು ವಿಶೇಷವಾಗಿ ಅಭಿನಂದಿಸಿ ಹರ್ಷ ವ್ಯಕ್ತ ಪಡಿಸಿದ್ದಾರೆ.
ಸದರಿ ನೇಮಕ ಸಾಧ್ಯವಾಗಲಿಕ್ಕೆ ಮನಸ್ಸು ಮಾಡಿದ ಸಚಿವರಾದ ಶ್ರೀ ಈಶ್ವರ ಖಂಡ್ರೆ, ಶ್ರೀ ರಹೀಮ ಖಾನ್ ಹಾಗೂ ಸಂಸದ ಸದಸ್ಯರಾದ ಶ್ರೀ ಸಾಗರ ಖಂಡ್ರೆ ಅವರಿಗೆ ಶ್ರೀ ವಿಜಯಕುಮಾರ ಮೋರಗಿ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಮಾಣೀಕರಾವ ಫುಲೇಕರ್ ಅವರು ಶಾಸಕರಾಗಿದ್ದಾಗ ಅಂದಿನ ಸವಿತಾ ಸಮಾಜದ ಮುಖಂಡರಾದ ಶ್ರೀ ಘಾಳೆಪ್ಪ ಹಾರೂರಗೇರಿ ಚಲವಾ ಅವರನ್ನು ಬೀದರ ನಗರ ಸಭೆಯ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಿಸಿದನ್ನು ಇಲ್ಲಿ ಸ್ಮರಿಸಬಹುದು.
ಒಟ್ಟು ನಾಲ್ಕು ಜನರನ್ನು ಸದರಿ ಕಮೇಟಿಗೆ ಆಯ್ಕೆ ಮಾಡಲಾಗಿದೆ.
ಸಾಮಾನ್ಯ ವರ್ಗ ದಿಂದ ಶ್ರೀ ರಾಜಕುಮಾರ ಸ್ವಾಮಿ, ಪರಿಶಿಷ್ಟ ಜಾತಿ ವಿಭಾಗದಿಂದ ಶ್ರೀ ದಶರಥ ಮೈಲುರು, ಅಲ್ಪಸಂಖ್ಯಾತ ವಿಭಾಗದಿಂದ ಶ್ರೀ ನಿಸಾರ್ ಅಹ್ಮದ್ ಅವರನ್ನು ಸದರಿ ಆಶ್ರಯ ಕಮೇಟಿಗೆ ನೇಮಕ ಮಾಡಲಾಗಿದೆ.
ಶ್ರೀಮತಿ ಸವಿತಾ ಅವರನ್ನು ಹಿಂದುಳಿದ ವರ್ಗ ಮಹಿಳಾ ಕೋಟಾನಲ್ಲಿ ಆಯ್ಕೆ ಮಾಡಲಾಗಿದೆ.
Samruddiya Nele is a digital magazine, to connect with people with latest updates on every moment news, not only to serve the needy but also to serve the nation.
ನಾವು ದೃಷ್ಟಿ ಹೀನರಾದರೆ ಕಣ್ಣಿರುವ ಕುರುಡರನ್ನು, ಕಿವಿ ಇರುವ ಕಿವುಡರನ್ನು ಸೃಷ್ಟಿಸುತ್ತೇವೆ: ಕೆ.ವಿ.ಪ್ರಭಾಕರ್
July 29, 2025
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 1146 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು
July 30, 2025
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು ವಿಧಾನಸೌಧದಲ್ಲಿ ಬೀದರ್ ಜಿಲ್ಲಾ ಉಸ್ತವಾರಿ ಸಚಿವ ಈಶ್ವರ ಬಿ ಖಂಡ್ರೆ, ಸಚಿವ ರಹೀಂಖಾನ್ ಹಾಗೂ ಶಾಸಕರುಗಳ ಜೊತೆ ಬೀದರ್ ಜಿಲ್ಲೆಯ ಅಭಿವೃದ್ಧಿಯ ಕುರಿತಂತೆ ಸಮಾಲೋಚನೆ ನಡೆಸಿದರು.
July 30, 2025
ಆ.೨, ೩ರಂದು ಪ್ರಸುತಿ ಮತ್ತು ಸ್ತ್ರೀರೋಗ ಬಗ್ಗೆ ಸಮ್ಮೇಳನ : ಡಾ. ಹೇಮಲತಾ ಪಾಟೀಲ
August 1, 2025
ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ವಸತಿಯಿಂದ ಕಾರ್ಮಿಕರಿಗೆ ಪೇಂಟ ಬಳಸುವ ವಿಧಾನದ ತರಬೇತಿ
August 1, 2025
ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ- ಸಚಿವ ಈಶ್ವರ ಬಿ.ಖಂಡ್ರೆ
August 1, 2025
ಪ್ರಿಂಟ್ ಮಿಡಿಯಾದ ಮಹತ್ವ ಸರ್ವಕಾಲಿಕ -ಶ್ರೀಮತಿ ರಾಜಶೀ ಸ್ವಾಮಿ
August 2, 2025
ಪ್ರಕಾಶ ಬಿ. ಹೊಕರಾಣಾ ಅವರಿಗೆ, ಎಲ್ಲರೂ ಪತ್ರಕರ್ತರೇ ಎಂಬ ವಿಶೇಷ ಶ್ರೇಣಿಯ ಸನ್ಮಾನ.
August 3, 2025
ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಓಡಿಸ್ಸಾ ಮೂಲದ ವಿದ್ಯಾರ್ಥಿನಿಯೊಬ್ಬಳು ತನ್ನ ಹುಟ್ಟು ಹಬ್ಬದ ದಿನದಂದೇ ಆತ್ಮಹತ್ಯೆ(!)
August 3, 2025
ಸಚಿವದ್ವಯರಿಗೆ ಪದಾಧಿಕಾರಿಗಳಿಂದ ಮನವಿ ಪತ್ರ ಸಲ್ಲಿಕೆ ಪಾಲಿಕೆ ಮನೆ ಬಾಡಿಗೆ ಭತ್ಯೆಗೆ ನೌಕರರ ಸಂಘ ಆಗ್ರಹ