# ಬೀದರ್ ಜಿಲ್ಲೆಯ ಅಭಿವೃದ್ಧಿಗೆ 500 ಕೋಟಿ ರೂ. ಯೋಜನೆ: ಈಶ್ವರ ಖಂಡ್ರೆ, ರಹೀಂಖಾನ್ ಸಭೆ – Samruddiya Nele
ರಾಜಕೀಯ

ಬೀದರ್ ಜಿಲ್ಲೆಯ ಅಭಿವೃದ್ಧಿಗೆ 500 ಕೋಟಿ ರೂ. ಯೋಜನೆ: ಈಶ್ವರ ಖಂಡ್ರೆ, ರಹೀಂಖಾನ್ ಸಭೆ

ಖಸಾಯಿಖಾನೆ, ತರಕಾರಿ ಮಾರುಕಟ್ಟೆಗೆ ಜಾಗ ಗುರುತಿಸಲು ಸೂಚನೆ.

ಬೆಂಗಳೂರು, ಮೇ 2: ಬೀದರ್ ಜಿಲ್ಲೆಯಲ್ಲಿ ಸಗಟು ತರಕಾರಿ ಮಾರುಕಟ್ಟೆ ಮತ್ತು ಖಸಾಯಿ ಖಾನೆ ನಿರ್ಮಾಣಕ್ಕೆ ಜಾಗ ಗುರುತಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿಂದು ಬೀದರ್ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಪೌರಾಡಳಿತ ಸಚಿವ ರಹೀಂಖಾನ್ ಹಾಗೂ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಿದ ಅವರು, ಪೌರಾಡಳಿತ ಇಲಾಖೆಯಿಂದ 500 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ತ್ಯಾಜ್ಯ ಜಲ ಸಂಸ್ಕರಣೆ ಮಾಡಿ ಕಟ್ಟಡ ನಿರ್ಮಾಣ ಇತ್ಯಾದಿಗೆ ಪುನರ್ ಬಳಕೆ ಮಾಡುವ ನಿಟ್ಟಿನಲ್ಲಿಯೂ ಕ್ರಮ ವಹಿಸುವಂತೆ ತಿಳಿಸಿದ ಅವರು, ಅಮೃತ್ ಯೋಜನೆಯಡಿ ಬೀದರ್ ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಿದ್ಧಪಡಿಸುವಂತೆ ನಿರ್ದೇಶನ ನೀಡಿದರು.
ಅರ್ಬನ್ ಚಾಲೆಂಜ್ ಯೋಜನೆ ಅಡಿಯಲ್ಲಿ 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳಬಹುದಾದ ಯೋಜನೆಗಳ ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದು ವಾರದೊಳಗೆ 500 ಕೋಟಿ ರೂ. ಸಮಗ್ರ ವರದಿ ಸಿದ್ಧಪಡಿಸಿ, ಗಡುವಿನೊಳಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆಯೂ ತಿಳಿಸಿದರು.

500 करोड़ रु. परियोजनाः ईश्वर खंडरे और रहीम खान की अधिकारियों के साथ की बैठक। 

ईश्वर खंडरे ने बूचड़खाने, सब्जी बाजार के लिए जगह की पहचान करने का निर्देश दिया

बेंगलुरुः वन, पारिस्थितिकी और पर्यावरण मंत्री और जिला प्रभारी ईश्वर बी खंडरे ने अधिकारियों से बीदर जिले में थोक सब्जी बाजार और खसई खाना के निर्माण के लिए प्रस्तावों की पहचान करने और प्रस्तुत करने को कहा है।

उन्होंने बीदर जिले के सर्वांगीण विकास के संबंध में नगर प्रशासन मंत्री रहीम खान और अधिकारियों के साथ बेंगलुरु में एक संयुक्त बैठक की। उन्होंने उन्हें लागत प्रस्ताव प्रस्तुत करने के लिए कहा।

उन्होंने जिले में अपशिष्ट जल को शोधित करने और भवनों आदि के निर्माण के लिए इसका पुनः उपयोग करने के लिए कदम उठाने के लिए भी कहा और अमृत योजना के तहत बीदर जिले में शुरू की जाने वाली परियोजनाओं के संबंध में एक प्रस्ताव तैयार करने का निर्देश दिया।

शहरी चुनौती योजना के तहत एक लाख से कम आबादी वाले शहरी स्थानीय निकायों में शुरू की जा सकने वाली परियोजनाओं पर वरिष्ठ अधिकारियों के साथ चर्चा की जाएगी और एक सप्ताह के भीतर 500 करोड़ रुपये की राशि जारी की जाएगी। उन्होंने कहा कि एक व्यापक रिपोर्ट तैयार की जाएगी और समय सीमा के भीतर केंद्र सरकार को एक प्रस्ताव प्रस्तुत किया जाएगा।

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!