ಪತ್ರಿಕಾ ಸ್ವಾತಂತ್ರ್ಯದ ಮಹತ್ವ ಏನು?
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಪ್ರತಿ ವರ್ಷ ಮೇ 3 ರಂದು ಆಚರಿಸಲಾಗುತ್ತದೆ. ಪತ್ರಿಕಾ ಸ್ವಾತಂತ್ರ್ಯದ ಮೂಲಭೂತ ತತ್ವಗಳನ್ನು ಎತ್ತಿಹಿಡಿಯಲು, ಮಾಧ್ಯಮದ ಸ್ವಾತಂತ್ರ್ಯವನ್ನು ರಕ್ಷಿಸಲು, ಮತ್ತು ವೃತ್ತಿಪರ ಕರ್ತವ್ಯದಲ್ಲಿ ಪ್ರಾಣ ಕಳೆದುಕೊಂಡ ಪತ್ರಕರ್ತರಿಗೆ ಗೌರವ ಸಲ್ಲಿಸಲು ಈ ದಿನವನ್ನು ಆಚರಿಸಲಾಗುತ್ತದೆ. 1993 ರಲ್ಲಿ ವಿಶ್ವಸಂಸ್ಥೆಯು (UN) ಅಧಿಕೃತವಾಗಿ ಈ ದಿನವನ್ನು ಘೋಷಿಸಿತು.
ಪತ್ರಿಕಾ ಸ್ವಾತಂತ್ರ್ಯ ದಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ.?
ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ಭಾರತವು 157ನೇ ಸ್ಥಾನಕ್ಕೆ ಕುಸಿದಿದೆ. 2025ರಲ್ಲಿ ಭಾರತವು 151ನೇ ಸ್ಥಾನದಲ್ಲಿತ್ತು. ಅದು ಈಗಲೂ ‘ಅತ್ಯಂತ ಗಂಭೀರ’ ವರ್ಗದಲ್ಲಿ ಉಳಿದುಕೊಂಡಿದೆ ಎಂದು ರಿಪೋರ್ಟಸ್ ವಿತೌಟ್ ಬಾರ್ಡಸ್ ಎಂದೂ ಕರೆಯಲಾಗುವ ಆರ್ ಎಸ್ಎಫ್ ಹೇಳಿದೆ.ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿಯೂ ಮಾಧ್ಯಮಗಳನ್ನು ಮೌನಗೊಳಿಸಲು ಅಸ್ತ್ರವಾಗಿ ಕಾನೂನು ಚೌಕಟ್ಟುಗಳ ಬಳಕೆಯು ಹೆಚ್ಚುತ್ತಿದೆ ಎಂದು ಆರ್ಎಸ್ಎಫ್ ಕಳವಳ ವ್ಯಕ್ತಪಡಿಸಿದೆ. ಭಾರತದಲ್ಲಿ ಪತ್ರಕರ್ತರನ್ನು ನೇರವಾಗಿ ಗುರಿಯಾಗಿಸಿಕೊಂಡು ಮಾನನಷ್ಟ ಮತ್ತು ರಾಷ್ಟ್ರೀಯ ಭದ್ರತಾ ಕಾನೂನುಗಳಂತಹ ಕ್ರಿಮಿನಲ್ ಶಾಸನಗಳ ಹೆಚ್ಚುತ್ತಿರುವ ಬಳಕೆಯಿಂದಾಗಿ ಸ್ವತಂತ್ರ ಮಾಧ್ಯಮಗಳಿಗೆ ನ್ಯಾಯಾಂಗ ಕಿರುಕುಳ ತೀವ್ರ ಗೊಳ್ಳುತ್ತಿದೆ ಎಂದು ಅದು ಹೇಳಿದೆ.

प्रेस स्वतंत्रता दिवस की शुभकामनाएँ।





