ವಿಶೇಷ ವರದಿ
ಮಾಧ್ಯಮ ತರಬೇತಿ ಕಾರ್ಯಾಗಾರ ನಾಳೆ
ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ್ ಸಹಯೋಗದಲ್ಲಿ ಬುಧವಾರ (ಆ.6) ನಗರದ ಮೈಲೂರಿನಲ್ಲಿರುವ ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನ ಗುರು ಭವನ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮಾಧ್ಯಮ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10ಕ್ಕೆ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟಿಸುವರು. ಪೌರಾಡಳಿತ ಸಚಿವ ರಹೀಂ ಖಾನ್ ಅಧ್ಯಕ್ಷತೆ ವಹಿಸುವರು. ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಶಾ | ಖಾನಂ, ಕಾರ್ಯದರ್ಶಿ ಸಹನಾ, ಸದಸ್ಯೆ ರಶ್ಮಿ ಎಸ್. ಉಪಸ್ಥಿತರಿರುವರು. ‘ನ್ಯೂಸ್ ರೂಮ್ ಎ1 ಮತ್ತು ನಾನು’ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಎಸ್. ಕುಮಾರ್, ಗೋಷ್ಠಿ-2ರಲ್ಲಿ “ಸುದ್ದಿಯಲ್ಲಿ ನಿಖರತೆ ಮತ್ತು ಪರಿಣಾಮಕಾರಿ ಸಂವಹನ’ದ ಬಗ್ಗೆ ಮೈಸೂರು ವಿಶ್ವವಿ-ದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರೊ. ಸಪ್ನಾ ಮಾತನಾಡುವರು.