ಬೀದರ :- ದುರ್ಗುಣ, ದುಶ್ಚಟ್, ಅಹಂಕಾರ, ಅಸೂಯೇ ತ್ಯಜಿಸಿ ಸುಗುಣಿ, ಸಚ್ಚಾರಿತ್ರ್ಯ, ಸತ್ಯವಚನಿ, ಸಾತ್ವಿಕ ವ್ಯಕ್ತಿತ್ವ ಬೆಳೆಸಿಕೊಳ್ಳುವುದೇ ಈ ಪವಿತ್ರ ಶ್ರಾವಣ ಮಾಸಾಚರಣೆಯ ಗುರಿಯಾಗಬೇಕು ಎಂದು ಪಂಡಿತ ವೇದಪ್ರಕಾಶ ಆರ್ಯ ಅವರು ನುಡಿದರು.
ಅವರು ದಿನಾಂಕ 9ನೇ ಆಗಷ್ಟ ರಂದು ಸವಿತಾ ಭವನ ಬೀದರನಲ್ಲಿ ನಡೆದ ರಕ್ಷಾ ಬಂಧನ ನಿಮಿತ್ಯ ಹವನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತಿದ್ದರು.
ಕೆಲ ಸಂಸ್ಕ್ರತ ಮಂತ್ರಗಳ ಅರ್ಥ ಕನ್ನಡದಲ್ಲಿ ವಿವರಿಸಿ ತನ್ನ ಪ್ರವಚನದಲ್ಲಿ ಹೇಳಿದರು.
ಹವನ ಕಾರ್ಯಕ್ರಮದ ಪೌರೋಹಿತ್ಯವನ್ನು ಪಂಡಿತ ಸತೀಶ ಬೆಳ್ಳುರ ಅವರು ವಹಿಸಿದ್ದರು.
ಶಾಮರಾವ ಮೊರಗಿ, ದತ್ತಾತ್ರೇಯ ಚೌಧರಿ ಹಾಗೂ ನರಸಿಮಲು ಅವರು ಹವನ ಕಾರ್ಯಕ್ರಮದ ಯಜಮಾನರಾಗಿ ಭಾಗವಿಸಿದರು.
ಗಂಧರ್ವ ಸೇನಾ , ಜಗನ್ನಾಥರಾವ ಚಲವಾ, ವಸಂತ ತಿರಮನದಾರ, ರಾಕೇಶ್ ಚಲವಾ, ಕಿಶೋರ್ ನಾಗೂರ ಮುಂತಾದವರು ಉಪಸ್ಥಿತರಿದ್ದರು.
Samruddiya Nele is a digital magazine, to connect with people with latest updates on every moment news, not only to serve the needy but also to serve the nation.