ಬೀದರ:- ಹುಮನಾಬಾದ ನಗರದ ಮರಾಠಿ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ ರೈಸ್ ಶೇಖ್ ಎಂಬ ಶಿಕ್ಷಕ ಅದೇ ಶಾಲೆಯ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ ಬ್ಲಾಕ್ ಮೇಲ್ ಮಾಡಿರುವ ಪ್ರಕರಣದಲ್ಲಿಸಮಗ್ರ ತನಿಖೆ ಆಗಬೇಕು ಹಾಗೂ ಆರೋಪಿಗೆ ಉಗ್ರ ಶಿಕ್ಷೆ ಆಗಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರು ಶ್ರೀ ಸೋಮನಾಥ ಪಾಟೀಲ್ ಅವರು ಆಗ್ರಹಿಸಿದ್ದಾರೆ.

ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತಿದ್ದರು.
ಕಳೆದ 35 ವರ್ಷಗಳ ಹಿಂದೆ ಅಜಮೇರ್ ನಲ್ಲಿ ನಡೆದ ಘಟನೆಯೊಂದಕ್ಕೆ ಇದು ಹೋಲಿಕೆ ಆಗುತ್ತದೆ ಎಂದವರು ಸದರಿ ಘಟನೆಯ ತೀವ್ರತೆಯನ್ನು ಪ್ರತಿಪಾದಿಸಿದರು.
ಈಗಾಗಲೇ ಪೊಕ್ಸೊ ಕಾನೂನಿನ ಅಡಿಯಲ್ಲಿ ಕೇಸ್ ದಾಖಲಾಗಿದೆ. ಹಾಗೂ ಆರೋಪಿಗೆ ಬಂಧಿಸಲಾಗಿದೆ ಎಂದೂ ಅವರು ಪ್ರಶ್ನಯೊಂದಕ್ಕೆ ಉತ್ತರಿಸುತ್ತ ಹೇಳಿದರು.
ನಿಖರವಾಗಿ ಹಿಂದು ಮಕ್ಕಳನ್ನ ಗುರಿಯಾಗಿಸಿ ಅನೇಕರ ಬಲತ್ಕಾರ ಮಾಡಿದ್ದಾನೆ ಆರೋಪಿ ಎಂದವರು ಹೇಳಿ, ಆಡಿಯೋ ಒಂದು ತನ್ನ ಮೊಬೈಲ್ ನಿಂದ ನಡೆಸಿ ಅದು ಆರೋಪಿಯ ಸಂಭಾಷಣೆ , ಅದರಲ್ಲಿ ಅವನೇ ಮೂರು ನಾಲ್ಕು ಹುಡುಗಿಯರನ್ನ ಹೊಟೆಲ್ ವೋಂದಕ್ಕೆ ಕರೆದುಕೊಂಡು ಹೊಗಿರುವುದಾಗಿ ಒಪ್ಪಿದ್ದಾನೆ ಎಂದು ಹೇಳಿದ್ದಾರೆ. ಸಂಭಾಷಣೆ ಮರಾಠಿ ಭಾಷೆಯಲ್ಲಿತ್ತು.
ಸರಕಾರ ಶೀಘ್ರ ಸಂಪೂರ್ಣ ತನಿಖೆ ಮಾಡಿ ಕಠಿಣ ಶಿಕ್ಷೆ ಆರೋಪಿಗೆ ವಿಧಿಸದಿದ್ದಲ್ಲಿ ಬಿಜೆಪಿ ಬೀದಿಗಿಳಿದು ಉಗ್ರ ಹೋರಾಟ ಮಾಡುವುದು ಎಂದು ಶ್ರೀ ಸೋಮನಾಥ ಪಾಟೀಲ್ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹುಮನಾಬಾದ ಶಾಸಕ ಸಿದ್ದು ಪಾಟೀಲ, ಬಸವಕಲ್ಯಾಣ ಶಾಸಕ ಶರಣು ಸಲಗರ ಹಾಗೂ ಬೀದರ ದಕ್ಷಿಣ ಶಾಸಕ ಶೈಲೆಂದ್ರ ಬೆಲ್ದಾಳೆ ಅವರು ಸೇರಿದಂತೆ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು.





