# ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚನೆ, ನಿಜವಾದ ಕುರಿಗಾಹಿಗಳಿಗೆ ಅನ್ಯಾಯ, ಪಂಡಿತ ಚಿದ್ರಿ ಶಂಕೆ – Samruddiya Nele
ವಿಶೇಷ ವರದಿ

ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚನೆ, ನಿಜವಾದ ಕುರಿಗಾಹಿಗಳಿಗೆ ಅನ್ಯಾಯ, ಪಂಡಿತ ಚಿದ್ರಿ ಶಂಕೆ

ಬೀದರ:- ಕಳೆದ ೫೦ ವರ್ಷಗಳಿಂದ ನಡೆದು ಬಂದಿರುವ ವ್ಯವಸ್ಥೆ ಬದಲಿಸಿ ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಾಜ್ಯ ಸರಕಾರ ರಚಿಸಿದೆ. ಇದರಿಂದ ರಾಜ್ಯಾದ್ಯಂತ ೮೦೦ ಕುರಿ ಉಣ್ಣಿ ಸಹಕಾರ ಸಂಘಗಳ ಮೂಲಕ ನೊಂಯಿಸಿರುವ ಕುರಿಗಾಹಿಗಳಿಗೆ ಸರಕಾರದ ವಿವಿಧ ಯೋಜನೆಗಳ ಲಾಭದಿಂದ ವಂಚಿತರಾಗುವ ಭೀತಿ ಉಂಟಾಗಿದೆ ಎಂದು ಕುರಿ ಮತ್ತು ಉಣ್ಣಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಶ್ರೀ ಪಂಡಿತರಾವ ಚಿದ್ರಿ ಅವರು ಹೇಳಿದ್ದಾರೆ. 

ಅವರು ಇಂದಿಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತಿದ್ದರು. 

ಇದುವರೆಗೆ ಆಯಾ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೇ ಫಲಾನುಭವಿಗಳ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಇರುತಿದ್ದರು. ಲಾಟರಿ ಮೂಲಕ ಸೋಸಾಯಿಟಿಗಳ ಸದಸ್ಯರಾದವರಿಗೆ ಆಯ್ಕೆ ಮಾಡುತಿದ್ದರು. ಆದರೆ ರಾಜ್ಯ ಸರಕಾರ ಇತ್ತೀಚೆಗೆ ಸುತ್ತೋಲೆ ಹೊರಡಿಸಿ ಸದರಿ ಆಯ್ಕೆ ಸಮಿತಿಗಳಿಗೆ ಆಯಾ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರಾಗಿ ನೇಮಕ ಮಾಡಿದೆ. ಇದರಿಂದ ಶಾಸಕರ ಸುತ್ತ ಓಡ್ಯಾಡುವ ಯಾರಿಗೋ ಲಾಭ ಆಗಿ ನಿಜವಾದ ಫಲಾನುಭವಿಗಳಿಗೆ ಅನ್ಯಾಯ ಆಗುವ ಸ್ಥಿತಿ ಉಂಟಾಗಿದೆ ಎಂದು ಶ್ರೀ ಪಂಡಿತರಾವ ಚಿದ್ರಿ ಅವರು ವಿವರಿಸಿದರು. 

ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಗಮನಕ್ಕೆ ಈ ವಿಷಯ ತರಲು ರಾಜ್ಯಾದ್ಯಂತ ಪತ್ರಿಕಾ ಗೋಷ್ಠಿಗಳು ನಡೆಸಿ ಬೆಂಗಳೂರಿನಲ್ಲಿ ಒಂದು ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

ಶಾಸಕರ ಅಧ್ಯಕ್ಷತೆಯ ಆಯ್ಕೆ ಸಮಿತಿ ರದ್ದುಗೊಳಿಸಿ ಹಿಂದಿನ ವ್ಯವಸ್ಥೆ ಮುಂದುವರೆಸಲು ಅವರು ಆಗ್ರಹಿದ್ದಾರೆ. 

ಒಂದು ವೇಳೆ ಇದು ಸಾಧ್ಯ ಆಗದಿದ್ದಲ್ಲಿ ರಾಜ್ಯದಲ್ಲಿ ನೊಂದಾಯಿತ ೮೦೦ ಸೊಸಾಯಿಟಿಗಳ ಸದಸ್ಯ ರಲ್ಲಿಯೇ ಫಲಾನುಭವಿಗಳ ಆಯ್ಕೆ ಸುನಿಶ್ಚಿತಗೊಳಿಸಬೇಕೆಂದು ಶ್ರೀ ಪಂಡಿತರಾವ ಮನವಿ ಮಾಡಿಕೊಂಡಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಉಣ್ಣಿ ಕೈಮಗ್ಗ ಸಹಕಾರ ಮಹಾಮಂಡಳದ ನಿರ್ದೇಶಕರಾದ ಶ್ರೀ ಶಿವರಾಜ ಮಲ್ಲೇಶಿ ಅವರು ಮಾತನಾಡಿ ಪಂಡಿತರಾವ ಚಿದ್ರಿ ಅವರ ಮನವಿಗೆ ಮುಖ್ಯಮಂತ್ರಿ ಸ್ಪಂದಿಸಲಿ ಎಂದು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಕುರಿಗಾಹಿ ಸಮುದಾಯದ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

One Comment

Leave a Reply to Ashokkumar Shetkar Cancel reply

Your email address will not be published. Required fields are marked *

Back to top button
Don`t copy text!