# ಬೀದರ ಜಿಲ್ಲೆಗೆ ಡ್ರಗ್ ಫ್ರೀ ಮಾಡೋಣ ಬನ್ನಿ – ಡಾ. ಅಬ್ದುಲ್ ಖದೀರ್ – Samruddiya Nele
ವಿಶೇಷ ವರದಿ

ಬೀದರ ಜಿಲ್ಲೆಗೆ ಡ್ರಗ್ ಫ್ರೀ ಮಾಡೋಣ ಬನ್ನಿ – ಡಾ. ಅಬ್ದುಲ್ ಖದೀರ್

ಬೀದರ ಜಿಲ್ಲೆಗೆ ಡ್ರಗ್ಸ್ ಫ್ರೀ ಮಾಡೋಣ ಬನ್ನೀರಿ ಎಂಬ ಕರೆಯನ್ನು ಶಾಹಿನ್ ಶಿಕ್ಷಣ ಸಮೂಹದ ಅಧ್ಯಕ್ಷರು ಹಾಗೂ ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯ ಟ್ರಸ್ಟ್ ಅಧ್ಯಕ್ಷರಾದ ಡಾ. ಅಬ್ದುಲ್ ಖದೀರ್ ಅವರು ನೀಡಿದರು. 

ಅವರು ಇಂದು ಕನ್ನಡ ಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು.

ಸಾರಾಯಿ, ಬೀಡಿ, ಸಿಗರೇಟ್, ಗುಟ್ಕಾ, ಸೇವಿಸುವುದು ಬಿಡುವುದು. ಅಧಿಕ ಮೊಬೈಲ್ ಬಳಸುವುದು ಪ್ರಾಣಕ್ಕೆ ಅಪಾಯವಿದೆ. ಈ ದುಶ್ಚಟಗಳಿಂದ ದೂರವಿದ್ದು ಬಾಳು ಸುಂದರ ಮಾಡಿಕೊಳ್ಳಿ ಎಂಬ ಸಂದೇಶ ಮನೆ ಮನೆಗೆ ತಲುಪಬೇಕು ಎಂದೂ ಡಾ. ಅಬ್ದುಲ್ ಖದೀರ್ ಸಾಬ್ ಅವರು ಮುಂದುವರೆದು ಹೇಳಿದರು. 

ಮದುವೆಗಳೂ ಸರಳವಾಗಿ ಮಾಡಬೇಕು ಸಾಲ ಮಾಡಿ ಆರ್ಥಿಕ ಸಂಕಟದಲ್ಲಿ ಕುಟುಂಬಕ್ಕೆ ಸಿಲುಕಿಸಬಾರದು ಎಂದೂ ಅವರು ಕರೆ ನೀಡಿದರು. 

ಕಾರ್ಯಕ್ರಮದ ಆರಂಭದಲ್ಲಿ ಬಸವರಾಜ ಮಾಳಗೆ ಅವರು ಪ್ರಾಸ್ತಾವಿಕ ಮಾತನಾಡಿದರು. ಈ ಹೊಸ ಟ್ರಸ್ಟ್ ನಲ್ಲಿ ಅನೇಕ ಜನ ಬುದ್ದಿಜೀವಿಗಳು, ಹೋರಾಟಗಾರರು ಸೇರಿದ್ದಾರೆ ಎಂದರು.

ವೇದೀಕೆಯ ಮೇಲೆ ಕಸಾಪ ಅಧ್ಯಕ್ಷರು ಸುರೇಶ ಚನಶೆಟ್ಟಿ, ಅಬ್ದುಲ್ ಮನ್ನಾನ ಸೇಠ್, ಡಾ. ಶಿವಶಂಕರ ಟೋಕರೆ, ಶರಣಪ್ಪ ಮಿಟಾರೆ, ಡಾ. ರಾಜಶೇಖರ್ ಸೇಡಂಕರ್ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯದಲ್ಲಿ ಅನೇಕ ಹಿರಿಯರು, ನಿವೃತ್ತ ಅಧಿಕಾರಿಗಳು, ಸಾಮಾಜಿಕ ಹೋರಾಟಗಾರರು ತನ್ನ ಸಲಹೆಗಳು ನೀಡಿದರು. ಮುಂಬರುವ ದಿನಗಳಲ್ಲಿ ಈ ಅಭಿಯಾನ ಮನೆ ಮನೆಗೆ ತಲುಪಿಸಲು ಯೋಜನೆ ರೂಪಿಸಿ ಕಾರ್ಯ ಮಾಡಬೇಕೆಂದು ಸಲಹೆಗಳು ನೀಡಿದರು.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!