# ಹೊಸ ಜಾಹೀರಾತು ನೀತಿಗೆ ಕರ್ನಾಟಕ ಕಾರ್ಯನಿರತ ದಿನಪತ್ರಿ ಗಳ ಸಂಪಾದಕರ ಸಂಘದ ಬೀದರ್ ಘಟಕದಿಂದ ತಕ್ಷಣ ಹಿಂಪಡೆಯಲು ಸರ್ಕಾರಕ್ಕೆ ಆಗ್ರಹ.  – Samruddiya Nele
ವಿಶೇಷ ವರದಿ

ಹೊಸ ಜಾಹೀರಾತು ನೀತಿಗೆ ಕರ್ನಾಟಕ ಕಾರ್ಯನಿರತ ದಿನಪತ್ರಿ ಗಳ ಸಂಪಾದಕರ ಸಂಘದ ಬೀದರ್ ಘಟಕದಿಂದ ತಕ್ಷಣ ಹಿಂಪಡೆಯಲು ಸರ್ಕಾರಕ್ಕೆ ಆಗ್ರಹ. 

ಬೀದರ್ ನಲಿಂದು ಪತ್ರಿಕಾ ಭವನದಲ್ಲಿ ಜರುಗಿದ ಸಂಘದ ಸಭೆಯಲ್ಲಿ ಎಲ್ಲಾ ಸದಸ್ಯರು ಸಂಪಾದಕರುಗಳು ಒಮ್ಮತದಿಂದ ಸರ್ಕಾರದ ಹೊಸ ಜಾಹೀರಾತು ನೀತಿಯನ್ನು ಖಂಡಿಸಿ ತಕ್ಷಣವೇ ತಡೆಹಿಡಿಬೇಕು ಮತ್ತು ವಾಪಾಸ್ ತೆಗೆದುಕೊಳ್ಳಬೇಕೆಂದು ಸರಕಾರಕ್ಕೆ ಆಗ್ರಹಿಸಿದವು.

 ಸಂಘದ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಸಂಘದ ಸಂಪಾದಕರ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಸಂಪಾದಕರು ಸರ್ಕಾರ ಹೊಸ ಜಾಹೀರಾತು ನೀತಿ ತಂದು ಪತ್ರಿಕೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿವೆ ಎಂದು ತಮ್ಮ ತೀವ್ರ ಅಕ್ರೋಶ ಹೊರ ಹಾಕಿದರು.

ರಾಜ್ಯ ಸಂಘ ಬರುವ ಭಾನುವಾರ 22ರಂದು ಗದಗನಲ್ಲಿ ರಾಜ್ಯಸಭೆ ನಡೆಸುತ್ತಿದ್ದು ಅಲ್ಲಿ ಕೈಗೊಳ್ಳುವ ಮುಂದಿನ ಹೋರಾಟಗಳ ಬಗ್ಗೆ ಅಥವಾ ಮನವಿ ಪತ್ರಗಳ ಕೊಡುವ ನಿರ್ಧಾರಗಳ ಬಗ್ಗೆ ನಾವು ಕಾಯುವುದಾಗಿ ಎಲ್ಲ ಸದಸ್ಯರು ಸಭೆಗೆ ತಿಳಿಸಿದರು. 

ನಮ್ಮ ಸಂಘದ ರಾಜ್ಯ ಪ್ರತಿನಿಧಿ ಬೀದರ್ ಜಿಲ್ಲಾ ಕೆ ಡಬ್ಲ್ಯೂ ಅಧ್ಯಕ್ಷ ಅಶೋಕ್ ಕುಮಾರ್ ಕಾರಂಜಿ ಮಾತನಾಡಿ ಗದಗಗಿಂತ ತಕ್ಷಣ ಬೆಂಗಳೂರಿನಲ್ಲಿ ಸಭೆ ನಡೆಸಿದರೆ ಅಲ್ಲಿಗೆ ಎಲ್ಲರೂ ಹೋಗಿ ಬೆಂಬಲವಾಗಿ ನಿಂತು ಅವರ ಎಲ್ಲ ನಿರ್ಧಾರಗಳಿಗೆ ಮತ್ತು ಪ್ರತ್ಯಕ್ಷ ಸರಕಾರಕ್ಕೆ ಮನವಿ ಕೊಡುವ ಮಾಡಬಹುದಾಗಿತ್ತು ಆದರೆ ಗದಗ್ನಲ್ಲಿ ಸಭೆ ನಡೆಯುತ್ತಿದೆ ಅಲ್ಲಿನ ನಿರ್ಣಯಕ್ಕೆ ಕಾಯೋಣ ಎಂದು ಹೇಳಿದರು. ಕಾರ್ಯ ನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮಾಳಪ್ಪ ಅಡಸರೇ ರವರು ಮಾತನಾಡುತ್ತಾ

ತಜ್ಞರ ಸಮಿತಿ ರಚಿಸಿ ಸಂಪಾದಕರುಗಳ ಪತ್ರಿಕೆಗಳ ಬಗ್ಗೆ ಆರ್ಟಿಕಲ್ 371 ವಿಧಿ ಅನ್ವಯ ಕಲ್ಯಾಣ ಕರ್ನಾಟಕದ ಸಂಪಾದಕರುಗಳಿಗೆ ಹಿಂದುಳಿದಿರುವುದರಿಂದ ಅವರಿಗೆ ಹೆಚ್ಚಿನ ಜಾಹೀರಾತು ಮತ್ತು ವಿಶೇಷ ರಿಯಾಯಿತಿ ನೀಡುವಲ್ಲಿ ಆ ತಜ್ಞರ ಸಮಿತಿ ನೀಡುವ ವರದಿ ಆಧರಿಸಿ ಹೊಸ ಜಯರಾತು ನೀತಿ ರೂಪಿಸಿದರೆ ಒಳ್ಳೆಯದು ಇದನ್ನು ಸರ್ಕಾರಕ್ಕೆ ಗಮನಕ್ಕೆ ತರೋಣ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ನೀಡಲು ಜಿಲ್ಲಾ ಸಂಘ ಮುಂದಿನ ದಿನಗಳಲ್ಲಿ ರಾಜ್ಯ ಸಂಘದ ಜೊತೆಯಾಗಲಿ ಮತ್ತು ನಾವೇ ಸಹ ಹೋಗಿ ಮನವಿ ಪತ್ರಗಳನ್ನು ಮಾಡಬೇಕೆಂದು ಸಲಹೆ ನೀಡಿದರು. 

ಇನ್ನೊಬ್ಬ ಹಿರಿಯ ಸಂಪಾದಕರು ಹಾಗೂ ಕೆ ಡಬ್ಲ್ಯೂ ಜೆ ಮಾಜಿ ಅಧ್ಯಕ್ಷರಾದ ಗಂಧರ್ವ ಸೇನಾ ಅವರು ಮಾತನಾಡಿ ಇಂದಿನ ಜಾಹೀರಾತು ನೀತಿ ಜಾರಿಗೆ ಬಂದಿದ್ದರೆ ಯಾವುದೇ ಪತ್ರಿಕೆ ನಡೆಸಲು ಸಾಧ್ಯವಿಲ್ಲ ಸಂಪಾದಕರು ಅಸಾಧ್ಯದ ಮಾತೆಂದು ಹೇಳಿದರು ಎಲ್ಲರೂ ಕೂಡಿ ಒಗ್ಗಟ್ಟಿನಿಂದ ನಿರ್ಣಯ ಮಾಡಿ ಸರ್ಕಾರದ ಗಮನಕ್ಕೆ ತಂದು ಜಾಹೀರಾತು .

ನೀತಿಯಲ್ಲಿರುವ ಮಾರಕ ಅಂಶಗಳನ್ನು ತಿದ್ದುಪಡಿ ಮಾಡುವಂತೆ.

 ಮುಖ್ಯಮಂತ್ರಿಗಳಿಗೆ ತಿಳಿಸಬೇಕಾಗಿದೆ ಎಂದರು. ಹೊಸ ಜಾಹೀರಾತು ನೀತಿಯಲಿನ ತೊಡಕುಗಳು ಮತ್ತು ಸಂಪಾದಕರುಗಳಿಗೆ ಮಾರಕವಾಗಿರುವ ಎಲ್ಲ ನಿಯಮಗಳನ್ನು ಕೈಬಿಡುವಂತೆ ಮಾಡಲು ಸಂಪಾದಕರುಗಳು ಮತ್ತು ಸಂಘ ದಿಟ್ಟ ನಿರ್ಧಾರ ತೆಗೆದುಕೊಂಡು ಎಲ್ಲ ಜನ ನಾಯಕರಿಗೂ ಮನಿಪತ್ರ ಕೊಡಬೇಕು ನೇರವಾಗಿ ದಿಟ್ಟವಾಗಿ ಸಂಪಾದಕರುಗಳು ಕೆಲಸ ಮಾಡಬೇಕು ಯಾವುದೇ ಜನನಾಯಕರಿಗೆ ಹೆದರದೇ ಅವರ ಕೈಗೊಂಬೆಯಾಗದೆ ನಾವುಗಳು ಸಂಘಟನೆ ಬಲಿಷ್ಠ ಮಾಡಿ ನಮ್ಮ ಹಕ್ಕಿನ ಹೋರಾಟ ನ್ಯಾಯಯುತವಾಗಿ ಮಾಡಲು ನಾವೆಲ್ಲರೂ ಕಂಕಣಭದ್ಧರಾಗಬೇಕು ಬೆಂಗಳೂರಿಗೆ ಹೋಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಕೊಡಬೇಕು ರಾಜ್ಯ ಸಂಘ ಹೋರಾಟ ಹಾದಿ ಹಿಡಿದರೆ ನಾವೆಲ್ಲರೂ ಬೆಂಗಳೂರಿಗೆ ಹೋಗಿ ಸಂಘದ ಜೊತೆ ಕೈಜೋಡಿಸಬೇಕಾಗಿದೆ ಎಂದು ಪಿಡಬ್ಲ್ಯೂಎ ಜಿಲ್ಲಾಸಂಘದ ಮಾಜಿ ಸಿದ್ದರಾಮಯ್ಯ ಸ್ವಾಮಿ ಅವರು ಸಂಘದ ಸಭೆಯಲ್ಲಿ ಇಂದು ತಮ್ಮ ನೇರನುಡಿಯಿಂದ ಸಂಪಾದಕರುಗಳಿಗೆ ಹೋರಾಟದ ಬಗ್ಗೆ ಮತ್ತು ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.

ಸಭೆಗೆ ಬಂದ ಸಂಪಾದಕರುಗಳಾದ ಹೈದರಾಬಾದ್ ಕರ್ನಾಟಕ ಕರ್ನಾಟಕದ ಅಬ್ದುಲ್ ಅಲಿ. ಸಂದೇಶ್ ಪತ್ರಿಕೆ ಸಂಪಾದಕ ದೀಕ್ಷಿತ್ ಮಹಾರಾಜ್. ಬೀದರ್ ಜಾಗ್ರತಿ ಯ ಶ್ರೀನಿವಾಸ್ ಚೌದರಿ. ನಮ್ಮ ಸಂಘದ ಮಾಜಿ ಅಧ್ಯಕ್ಷ ವಿರುಪಾಕ್ಷ ಗಾದಗಿ. ಬಾಲ್ಕೀಯ ಚಂದ್ರಕಾಂತ್ ಪಾಟೀಲ್. ಎಲ್ಲದಕ್ಕೂ ಹೆಚ್ಚಾಗಿ ನಮ್ಮ ಸಂಘದ ಉಪಾಧ್ಯಕ್ಷರಾದ ಸೈಯದ್ಲು ಹಸನ್ ಖಾದ್ರಿ ಅವರು ಸಹ ಮಾತನಾಡಿ ಹೆಚ್ಚಾಗಿ ಸಂಘದ ಸದಸ್ಯರಾಗಲು ಮನವಿ ಮಾಡಿದರಲ್ಲದೆ ಸಂಪಾದಕರು ಸಂಘ ಕೆ ಬಲಪಡಿಸಲು ಆಗ್ರಹ ಮಾಡಿದರಲ್ಲದೆ ಇಂಥ ಸಮಸ್ಯೆಗಳು ಬಂದಾಗ ಸಂಪಾದಕರ ಸಂಘದ ಪತ್ರಿಕೆ ಮತ್ತು ಸಂಪಾದಕರ ಬೆನ್ನಿಗೆ ನಿಲ್ಲುತ್ತದೆ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಪಾಟೀಲ್ ಅವರು ಸಹ ಮಾತನಾಡಿ ಜಾಹಿರಾತು ನೀತಿ ಜಾರಿಗೆ ಬರುವ ಮುನ್ನ ಸರ್ಕಾರದ ಗಮನಕ್ಕೆ ಸಚಿವರು ಶಾಸಕರ ಗಮನಕ್ಕೆ ತಂದು ಹಿಂಪಡೆಯಂತೆ ಮಾಡುವಲ್ಲಿ ರಾಜ್ಯ ಸಂಘದ ನಿರ್ಧಾರ ಕಾದು ನೋಡೋಣ ನಮ್ಮ ಸಂಪೂರ್ಣ ಬೆಂಬಲ ಗದಗನಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿರುತ್ತದೆ ಅಲ್ಲಿ ಗಟ್ಟಿಯಾಗಿ ನಿರ್ಧಾರ ತೆಗೆದುಕೊಂಡು ಸರಕಾರಕ್ಕೆ ಮನವಿ ಪತ್ರ ಮತ್ತು ಧರಣಿ ಹೋರಾಟಗಳು ಮಾಡಲಿ ಎಂದು ಸಲಹೆ ನೀಡಿದರು. 

ಸುನಿಲ್ ಕುಲಕರ್ಣಿ ಅವರು ಮಾತನಾಡಿ ತಕ್ಷಣವೇ ಪರಿಹಾರಕ್ಕೆ ಸರ್ಕಾರ ಕೆ ಮನವಿ ಪತ್ರ ಕೊಡಬೇಕು ಎಂದು ಹೇಳಿದರು 

ಸಭೆಯಲ್ಲಿ ಹಾಜರಿದ್ದ ವಿಜಯಕುಮಾರ್ ಸೋನಾರೆ ಮತ್ತು ಕಲ್ಯಾಣ ಕರ್ನಾಟಕ ವಿಭಾಗದ ಎಲ್ಲಾ ಶಾಸಕರು ಸಚಿವರ ಭೇಟಿಯಾಗಿ ಈ ಆರ್ಟಿಕಲ್ 371 ಬಗ್ಗೆ ಅವರಿಗೆ ಮನವರಿಕೆ ಮಾಡಬೇಕೆಂದು

 ಸಂಪಾದಕರಾದ ಪೃಥ್ವಿಯವರು ತಿಳಿಸಿದರು

ಕೊನೆಯಲ್ಲಿ ಮಾತಾಡಿದ ಅಧ್ಯಕ್ಷರಾದ ವಿಜಯಕುಮಾರ್ ಪಾಟೀಲ್ ಅವರು ತಮ್ಮ ಎಲ್ಲಾ ಸಂಪಾದಕರ ಭಾವನೆಗಳನ್ನು ರಾಜ್ಯ ಅಧ್ಯಕ್ಷರಾದ ಸನ್ಮಾನ್ಯ ತಿಪ್ಪೇಸ್ವಾಮಿ ಅವರಿಗೂ ಉಪಾಧ್ಯಕ್ಷರಾದ ಮಂಜುನಾಥ್ ಬಸಪ್ಪ ಅವರಿಗೂ ಹಾಗೂ ಗದಗ್ನಲ್ಲಿ ನಡೆಯಲಿರುವ ಸಭೆಗೆ ಹಾಜರಾಗಿ ತಮ್ಮೆಲ್ಲ ಸಲಹೆ ಸೂಚನೆಗಳನ್ನು ಆ ಸಭೆಯಲ್ಲಿ ತಿಳಿಸುತ್ತೇನೆ ಸಂಘ ಸದಾ ಸಂಪಾದಕರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಸಭೆಗೆ ಭರವಸೆ ನೀಡಿದರು.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!