# *ನಾಳೆಯಿಂದ 3 ದಿನ ಬಸವ ಜಯಂತಿ ಉತ್ಸವ ಅದ್ದೂರಿ ಆಚರಣೆ: ಡಾ. ರಜನೀಶ ವಾಲಿ*  – Samruddiya Nele
ವಿಶೇಷ ವರದಿ

*ನಾಳೆಯಿಂದ 3 ದಿನ ಬಸವ ಜಯಂತಿ ಉತ್ಸವ ಅದ್ದೂರಿ ಆಚರಣೆ: ಡಾ. ರಜನೀಶ ವಾಲಿ* 

ಬೀದರ್: ನಾಳೆ(ಏ.18)19 ಹಾಗೂ 20 ಶನಿವಾರ, ಭಾನುವಾರ ಹಾಗೂ ಸೋಮವಾರ ಮೂರು ದಿನಗಳ ಕಾಲ ಬಸವ ಜಯಂತಿ ಬುತ್ಸವ ಕಾರ್ಯಕ್ರಮ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಡಾ.ರಜನೀಶ.ಎಸ್.ವಾಲಿ ತಿಳಿಸಿದರು.

ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬಸವ ಜಯಂತಿ ಉತ್ಸವ ಸಮಿತಿಯ ವತಿಯಿಂದ ಆಯೋಜಿಸಲಾದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಬಸವ ಜಯಂತಿ ಉತ್ಸವವನ್ನು ಏಪ್ರಿಲ್ 18ರಿಂದ 20ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ವೈಭವವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ನಾಳೆ(ಏ.18) ಬೆಳಿಗ್ಗೆ 7.00 ರಿಂದ 8.00 ರ ವರೆಗೆ ಡಾ. ಚನ್ನಬಸವ ಪಟ್ಟದ್ದೇವರ ರಂಗ ಮಂದಿರದಲ್ಲಿ ಇಷ್ಟಲಿಂಗ ಪೂಜೆ ನಡೆಯಲಿದೆ. ಶಿವಕುಮಾರ ಪಾಂಬಾಳ ಹಾಗೂ ಸಂಗಡಿಗರಿಂದ ವಚನ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ಬೆಳಿಗ್ಗೆ 9.00 ಕ್ಕೆ ಶ್ರೀ ಸಿದ್ದಾರೂಢ ಮಠದಿಂದ ಪಾಪಪಾರ ಮಂದಿರದ ವರೆಗೆ ಕಾರುಗಳ ಭವ್ಯ ರ್ಯಾಲಿ ನಡೆಯಲಿದೆ.

ಅದೇ ದಿನ ಮಧ್ಯಾಹ್ನ 3.00ಕ್ಕೆ ವಚನ ಸಮೂಹ ನೃತ್ಯ ಸ್ಪರ್ಧೆ ಆಯೋಜಿಸಲಾಗಿದ್ದು, ಪ್ರಥಮ ಬಹುಮಾನ ₹10,000, ದ್ವಿತೀಯ ₹5,000 ಹಾಗೂ ತೃತೀಯ ₹3,000 ನಿಗದಿಪಡಿಸಲಾಗಿದೆ. ಸಂಜೆ 6.30ಕ್ಕೆ ಖ್ಯಾತ ಸಾಹಿತಿ ಡಾ. ವಿ.ಎಸ್. ಹಿರೇಮರ ಅವರ ವಿಶೇಷ ಉಪನ್ಯಾಸ ನಡೆಯಲಿದ್ದು, ಶರಣೆ ಅಕ್ಕಿಸಿ ರಾಜಕುಮಾರ ಹಿರೇಮಠ ಅವರಿಂದ ವಚನ ಗಾಯನ ಕಾರ್ಯಕ್ರಮವೂ ಇರಲಿದೆ.

ಏಪ್ರಿಲ್ 19ರಂದು ಬೆಳಿಗ್ಗೆ 7.00ರಿಂದ ವಚನ ಪಾರಾಯಣ ನಡೆಯಲಿದೆ. ಮಧ್ಯಾಹ್ನ 3.00ಕ್ಕೆ ವಚನ ಭಜನೆ ಸ್ಪರ್ಧೆ ನಡೆಯಲಿದ್ದು, ಅದಕ್ಕೂ ₹10,000, ₹5,000 ಹಾಗೂ ₹3,000 ಬಹುಮಾನಗಳನ್ನು ನಿಗದಿಪಡಿಸಲಾಗಿದೆ. ಸಂಜೆ 6.00ಕ್ಕೆ ಶರಣರ ವೇಷ ಭೂಷಣ ಕಾರ್ಯಕ್ರಮ ನಡೆಯಲಿದ್ದು, 6.30ಕ್ಕೆ ಶರಣ ಶಂಕರ ಶಾನಭೋಗ ಹಾಗೂ ಸಂಗಡಿಗರಿಂದ ವಚನ ಸಂಗೀತೋತ್ಸವ ನಡೆಯಲಿದೆ.

ಏಪ್ರಿಲ್ 20ರಂದು ಬೆಳಿಗ್ಗೆ 11.00ಕ್ಕೆ ಬಸವ ಜಯಂತಿ ಉತ್ಸವದ ಪ್ರಮುಖ ಕಾರ್ಯಕ್ರಮ ನಡೆಯಲಿದ್ದು, ಪೂಜ್ಯ ಶರಣಬಸವ ದೇವರು ಬೆಳವಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಂಜೆ 5.00ಕ್ಕೆ ಬಸವೇಶ್ವರ ವೃತ್ತದಿಂದ ವಿಶ್ವಗುರು ಬಸವಣ್ಣನವರ ಭಾವಚಿತ್ರದ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ ಎಂದರು. 

ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿಧರ ಹೊಸಳ್ಳಿ ಮಾತನಾಡಿ, ಮಹಾನಗರ ಪಾಲಿಕೆಯಿಂದ ಬಸವೇಶ್ವರ ವೃತ್ತದ ಜೀರ್ಣೋದ್ದಾರ ಮಾಡಲಾಗುತ್ತಿದೆ. ಕಳೆದ 10 ವರ್ಷಗಳ ಹಿಂದೆ ಇದನ್ನು ರಿಪೇರಿ ಮಾಡಲಾಗಿತ್ತು. ಅದಾದ ಬಳಿಕ ಈಗ ಅದನ್ನು ಪುನರೂಜ್ಜೀವನಗೊಳಿಸಲಾಗುತ್ತಿದೆ ಎಂದರು.

ಉತ್ಸವ ಸಮಿತಿಯ ಹಿರಿಯ ಸಲಹೆಗಾರರಾದ ಬಾಬುವಾಲಿ ಮಾತನಾಡಿ, ಬಸವ ಭಕ್ತರು ತಮ್ಮ ತಮ್ಮ ಮನೆಗಳ ಮೇಲೆ ಷಟಸ್ಥಲ ಧ್ವಜ, ದೀಪಾಲಂಕಾರ ಮಾಡಬೇಕು. ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕೆಂದು ಕರೆ ನೀಡಿದರು.

ಸಮಿತಿಯ ಪ್ರಮುಖರಾದ ಕುಶಾಲ ಪಾಟೀಲ ಖಾಜಾಪುರ, ಸೋಮಶೇಖರ ಪಾಟೀಲ ಗಾದಗಿ, ಮಹಿಳಾ ಸಮಿತಿ ಅಧ್ಯಕ್ಷೆ ಡಾ. ದೇವಕಿ ನಾಗೂರೆ, ಮೇರವಣಿಗೆ ಸಮಿತಿಯ ಅಧ್ಯಕ್ಷ ಧನರಾಜ ಹಂಗರಗಿ, ಬಸವ ಜಯಂತಿ ಉತ್ಸವ ಸಮಿತಿಯ ನಿಟಪೂರ್ವ ಅಧ್ಯಕ್ಷ ಜಯರಾಜ ಖಂಡ್ರೆ, ಸುರೇಶ ಚನಶೆಟ್ಟಿ, ರಾಜೇಂದ್ರಕುಮಾರ ಗಂದಗೆ, ದೀಪಕ ವಾಲಿ ಮಾತನಾಡಿದರು.

ಉತ್ಸವ ಸಮಿತಿಯ ಖಜಾಂಚಿ ಸಿದ್ರಾಮಯ್ಯ ಸ್ವಾಮಿ, ಇತರೆ ಪ್ರಮುಖರಾದ .ಆಧೀಶ ವಾಲಿ, ವಿಕ್ರಮ ಮುದಾಳೆ, ಸುರೇಶ ಸ್ವಾಮಿ, ದಾನಿ ಬಾಬುರಾವ, ನೀಲಮ್ಮ ರೂಗನ್, ವೀರುಪಾಕ್ಷ ಗಾದಗಿ, ಸಂತೋಷ ಪಾಟೀಲ ಹಾಗೂ ಅನೇಕರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!