# ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಪ್ರಭಾರ ವಹಿಸಿಕೊಂಡ ಡಾ.ಜಿ.ಸುರೇಶ – Samruddiya Nele
ವಿಶೇಷ ವರದಿ

ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಪ್ರಭಾರ ವಹಿಸಿಕೊಂಡ ಡಾ.ಜಿ.ಸುರೇಶ

ಬೀದರ, ಮಾರ್ಚ.9 (ಕರ್ನಾಟಕ ವಾರ್ತೆ):- ಬೀದರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಪ್ರಭಾರ ವಹಿಸಿಕೊಂಡ ಹಾಗೂ ಹಿರಿಯ ಸಹಾಯಕ ನಿರ್ದೇಶಕರಾಗಿ ಪದೋನ್ನತಿ ಹೊಂದಿದ ಹಿನ್ನೆಲೆಯಲ್ಲಿ ಸೋಮವಾರ ಡಾ. ಸುರೇಶ .ಜಿ ರವರಿಗೆ ಬೀದರ ವಾರ್ತಾ ಇಲಾಖೆಯ ಸಿಬ್ಬಂದಿ ವರ್ಗದವರಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸರ್ವ ಸಿಬ್ಬಂದಿಗಳು ಸೇರಿ ಸುರೇಶ ರವರಿಗೆ ಪೇಟ ತೊಡಿಸಿ, ಶಾಲು ಹೊದಿಸಿ, ಹೂವಿನ ಮಾಲೆ ಹಾಕಿ ಸಿಹಿ ತಿನಿಸಿ “ಹೊಸ ಜವಾಬ್ದಾರಿಯೊಂದಿಗೆ ಅವರ ವೃತ್ತಿಜೀವನ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ” ಎಂದು ಶುಭಕೋರಿದರು.

ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಪ್ರಥಮ ದರ್ಜೆ ಸಹಾಯಕ ನರೇಶಕುಮಾರ್, ಗ್ರಂಥಪಾಲಕ ತನ್ವಿರ ಇಕ್ಬಾಲ್, ಬೆರಳಚ್ಚುಗಾರ ವಿಶ್ವನಾಥ ಸೇಡಂಕರ್, ಸಿನಿ ಚಾಲಕ ವಿಜಯಕೃಷ್ಣ ಸೋಲಪುರ, ಆಶೀಷ್ ಹಜಾರೆ, ನಾಗಶೆಟ್ಟಿ ತಾದಲಾಪುರ, ಬಿಂದುಸಾರ ಪನಶೆಟ್ಟಿ ಧನ್ನೂರ್, ವಾಹನ ಚೊಕ್ಕಟಗಾರ್ತಿ ಗೀತಾಬಾಯಿ, ಅವಿನಾಶ್ ಸೇರಿದಂತೆ ಪತ್ರಿಕೆಯ ಸಂಪಾದಕರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.

ಸಮೃದ್ದಿಯ ನೆಲೆ ಕನ್ನಡ ದಿನ ಪತ್ರಿಕೆಯ ಸಂಪಾದಕಿ ಕೀರ್ತಿ ಸೇನಾ ಹಾಗೂ ಪಬ್ಲಿಕ್‌ ಕನ್ನಡ ದಿನ ಪತ್ರಿಕೆಯ ಸಂಪಾದಕ ಗಂಧರ್ವ ಸೇನಾ ಅವರು ಈ ಸಂದರ್ಭದಲ್ಲಿ ಬೀದರಿನ ವಾರ್ತಾ ಇಲಾಖೆಯ ನೂತನ ಪ್ರಭಾರಿ ಸಹಾಯಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಡಾ. ಜಿ. ಸುರೇಶ ಅವರಿಗೆ ಸನ್ಮಾನಿಸಿ ಸ್ವಾಗತಿಸಿದರು.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!