# ಹೊಸ ಜಾಹೀರಾತು ನೀತಿ ಮರು ಪರಿಶೀಲನೆಗೆ ಒತ್ತಾಯಿಸಲು ಆಗ್ರಹ – Samruddiya Nele
ವಿಶೇಷ ವರದಿ

ಹೊಸ ಜಾಹೀರಾತು ನೀತಿ ಮರು ಪರಿಶೀಲನೆಗೆ ಒತ್ತಾಯಿಸಲು ಆಗ್ರಹ

ಬೀದರ್‌ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಅಡ್ಡಿ ಪಡಿಸಲು ನಿರ್ಧಾರ

ಬೀದರ್: ರಾಜ್ಯ ಸರ್ಕಾರ ವಾರ್ತಾ ಇಲಾಖೆಯ ಮೂಲಕ ಅನುಷ್ಠಾನ ಮಾಡಲು ಮುಂದಾಗಿರುವ ಹೊಸ ಜಾಹೀರಾತು ನೀತಿ ಅವೈಜ್ಞಾನಿಕವಾಗಿದೆ. ಹೊಸ ಜಾಹೀರಾತು ನೀತಿ ಮರು ಪರಿಶೀಲನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಸರ್ಕಾರವನ್ನು ಒತ್ತಾಯಿಸಬೇಕು.

ಇಲ್ಲವಾದಲ್ಲಿ ಬೀದರ್‌ನಲ್ಲಿ ಏಪ್ರಿಲ್ ೧೦ ಮತ್ತು ೧೨ರಂದು ನಡೆಸಲು ಉದ್ದೇಶಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನಕ್ಕೆ ಅಡ್ಡಿ ಪಡಿಸಲು ವಿರ್ಧರಿಸಲಾಗಿದೆ ಎಂದು ಕರ್ನಾಟಕ ಕಾರ್ಯ ನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ತಿಳಿಸಿದೆ.

ಈ ಬಗ್ಗೆ ಸಂಪಾದಕರ ಸಂಘದ ಬೀದರ್ ಜಿಲ್ಲಾ ಘಟಕದ ಪ್ರತಿನಿಧಿಗಳು ಪತ್ರಿಕಾ ಭವನದಲ್ಲಿ ಜಿಲ್ಲಾಧ್ಯಕ್ಷ ವಿಜಯಕುಮಾರ ನೇತೃತ್ವದಲ್ಲಿ ಶುಕ್ರವಾರ ಸಭೆ ಸೇರಿ ಚರ್ಚಿಸಿದರು. ಸರ್ಕಾರದ ಮೇಲೆ ಒತ್ತಡ ಹೇರಲು ಕಾನಿಪ ಸಂಘ ಪ್ರಮಾಣಿಕ ಮುತುವರ್ಜಿ ವಹಿಸುತ್ತಿಲ್ಲ ಎಂಬ ಆರೋಪ ಸದಸ್ಯರಿಂದ ವ್ಯಕ್ತವಾಯಿತು.

ಬಳಿಕ ಮಾತನಾಡಿದ ವಿಜಯಕುಮಾರ್, ಕಾನಿಪ ಸಂಘದ ರಾಜ್ಯ ಘಟಕದಲ್ಲಿ ಸ್ಥಳೀಯ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳನ್ನು ಪ್ರತಿನಿಧಿಸುವ ಪತ್ರರ್ತರ ಸಂಖ್ಯೆಯೇ ಹತ್ತು ಸಾವಿರಕ್ಕೂ ಅಧಿಕವಿದೆ. ಆದರೆ ಕಾನಿಪ ಸಂಘವು ಸಂಪಾದಕರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ.

ಬದಲಿಗೆ ಸ್ಥಳೀಯ ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ, ದಿನಪತ್ರಿಕೆಗಳನ್ನು ಹತ್ತಿಕ್ಕುವ ಕೆಲಸ ಮಾಡುವ ಸಂಚು ಮಾಡುತ್ತಿರುವ ಆರೋಪ ಕೇಳಿ ಬಂದಿವೆ. ವಾರ್ತಾ ಇಲಾಖೆ ಪತ್ರಕರ್ತರಿಗೆ ಬಸ್ ಪಾಸ್

 ನೀಡುವ ಸಂದರ್ಭದಲ್ಲೂ ರಾಜ್ಯಮಟ್ಟದ ದೈನಿಕಗಳ ಪತ್ರಕರ್ತರನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ನಿಯಮ ರೂಪಿಸಲಾಗಿತ್ತು.

ಇದನ್ನು ಖಂಡಿಸಿದ ಬೇಕಿದ್ದ ಕಾನಿಪ ಸ್ವಾಗತಿಸಿತ್ತು. ಇದೀಗ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳಿಗೆ ಮರಣ ಶಾಸನದಂತಿರುವ ಜಾಹೀರಾತು ನೀತಿ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ. ಇದನ್ನೂ ಕಾನಿಪ ಆರಂಭದಲ್ಲಿ ಸ್ವಾಗತಿಸಿತ್ತು. ಸರ್ಕಾರದ ಈ ನಿರ್ಧಾರ ಖಂಡಿಸಿ ರಾಜ್ಯದಾದ್ಯಂತ ಸಂಪಾದಕರು ಪ್ರತಿಭಟನೆ ಮಾಡಿ ವಿರೋಧ ವ್ಯಕ್ತಪಡಿಸಿದರು.

ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ ಕಾನಿಪ ಕಾಟಾಚಾರಕ್ಕೆ ಎಂಬಂತೆ ಸರ್ಕಾರಕ್ಕೆ ಮನವಿ ಮಾಡಿದೆ. ಈ ಹಿನ್ನೆಲೆ ಹೊಸ ಜಾಹೀರಾತು ನೀತಿ ಮರುಪರಿಶೀಲನೆ ಆಗದೆ ಇದ್ದಲ್ಲಿ ಬೀದರ್‌ನಲ್ಲಿ ನಡೆಯುವ ಸಮ್ಮೇಳ ನಕ್ಕ ಅಡ್ಡಿ ಪಡಿಸುವ ಮತ್ತು ಬಹಿಷ್ಕಾರ ಹಾಕುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಸಂಪಾದಕರ ಹಲವಾರು ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದೇವೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮನ್ನು (ಸಂಪಾದಕರು) ಬೆಂಬಲಿಸಬೇಕಿದ್ದ ಕಾನಿಪ, ಈ ನಿಟ್ಟಿನಲ್ಲಿ ಪ್ರಮಾಣಿಕ ಯತ್ನ ಮಾಡುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಸಂಪಾದಕರು ಹೊಸ ಜಾಹೀರಾತು ನೀತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಈ ಸಮಸ್ಯೆ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದ್ದ ಕಾನಿಪ ಏಪ್ರಿಲ್ ೧೧ ಮತ್ತು ೧೨ರಂದು ರಾಜ್ಯ ಸಮ್ಮೇಳನ ಮಾಡಲು ಹೊರಟಿದೆ. ಜಾಹೀರಾತು ಪ್ರೀತಿಯ ಬಗ್ಗೆ ಸಿಎಂ ಅವರಿಂದ ಸ್ಪಷ್ಟ ನಿಲುವು ವ್ಯಕ್ತವಾಗುವವರೆಗೂ ಸಂಪಾದಕರಿಗೆ ನೆಮ್ಮದಿ ಇಲ್ಲದಂತಾಗಿದೆ ಎಂದರು.

ಈ ಸಭೆಯಲ್ಲಿ ಸಂಪಾದಕರ ಸಂಘದ ರಾಜ್ಯ ಪ್ರತಿನಿಧಿ ಅಶೋಕ ಕಾರಂಜಿ, ಜಿಲ್ಲಾ ಕಾರ್ಯದರ್ಶಿ ಶಶಿಕುಮಾರ ಪಾಟೀಲ, ಉಪಾದ್ಯಕ್ಷ ಸೈಯದ್ ಹಸನ್‌ಖಾದ್ರಿ, ಕಾನಿಪದ ಮಾಜಿ ಜಿಲ್ಲಾಧ್ಯಕ್ಷ ಮಾಳಪ್ಪ ಅಡಸಾರೆ, ಡಿಕೆ ಗಣ ಪತಿ, ಸಂಘದ ರಾಜ್ಯ ಪತ್ರಿವಿಧಿ ಅಜಯ ಭೋಸ್ಟ್, ಶ್ರೀನಿವಾಸ ಚೌಧರಿ, ಪ್ರಥ್ವಿರಾಜ, ಜಯಕುಮಾರ ಇದ್ದರು.

ಸಂಪಾದಕರ ಸಂಘದ ಈ ನಿರ್ಣಯಕ್ಕೆ ಬೂಡಾದ ಮಾಜಿ ಅಧ್ಯಕ್ಷ ಬಾಬುವಾಲಿ, ಕಾಜಿ ಅಲಿಯೋದ್ದೀನ್ (ಆಲಿಬಾಬಾ), ಚಂದ್ರಕಾಂತ ಪಾಟೀಲ, ರಮೇಶ ರಡ್ಡಿ, ಅಬ್ದುಲ್ ಖಾದೀರ್ ಸೇರಿದಂತೆ ಅನೇಕ ಸಂಪಾದಕರು ಬೆಂಬಲ ಸೂಚಿಸಿದ್ದಾರೆ.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!