# ಪತ್ರಕರ್ತರ ರಾಜ್ಯ ಸಮ್ಮೇಳನ ನಿಮಿತ್ತ ಬೀದರ್‍ನಲ್ಲಿ ನಡೆದ ನೋಂದಣಿ ಹಾಗೂ ಕಿಟ್ ವಿತರಣೆ ಸಮಿತಿ ಸಭೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದೇವಪ್ಪ ಮಾತನಾಡಿದರು – Samruddiya Nele
ವಿಶೇಷ ವರದಿ

ಪತ್ರಕರ್ತರ ರಾಜ್ಯ ಸಮ್ಮೇಳನ ನಿಮಿತ್ತ ಬೀದರ್‍ನಲ್ಲಿ ನಡೆದ ನೋಂದಣಿ ಹಾಗೂ ಕಿಟ್ ವಿತರಣೆ ಸಮಿತಿ ಸಭೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದೇವಪ್ಪ ಮಾತನಾಡಿದರು

ಪತ್ರಕರ್ತರ ರಾಜ್ಯ ಸಮ್ಮೇಳನ: ನೋಂದಣಿ, ಮಹಿಳಾ ಸಮಿತಿ ಸಭೆ ಎರಡು ಜಿಲ್ಲೆಗೊಂದು ನೋಂದಣಿ ಮಳಿಗೆ

ಬೀದರ್: ನಗರದಲ್ಲಿ ಏಪ್ರಿಲ್ 11 ಮತ್ತು 12 ರಂದು   ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಪತ್ರಕರ್ತರ ಹೆಸರು ನೋಂದಣಿಗೆ ಎರಡು ಜಿಲ್ಲೆಗೊಂದು ನೋಂದಣಿ ಮಳಿಗೆ ಇರಲಿದೆ.

ಸಮ್ಮೇಳನದ ನಿಮಿತ್ತ ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ನೋಂದಣಿ ಹಾಗೂ ಕಿಟ್ ವಿತರಣಾ ಸಮಿತಿಯ ಸಭೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದೇವಪ್ಪ ಈ ಮಾಹಿತಿ ನೀಡಿದರು.

ನಗರದ ಝೀರಾ ಕನ್ವೆನ್ಶನ್ ಹಾಲ್‍ನಲ್ಲಿ ಒಟ್ಟು 30 ನೋಂದಣಿ ಮಳಿಗೆಗಳು ಇರಲಿವೆ ಎಂದು ತಿಳಿಸಿದರು.

ಜಿಲ್ಲಾವಾರು ಅಚ್ಚುಕಟ್ಟಾಗಿ ನೋಂದಣಿ ಮಾಡಿಕೊಳ್ಳಬೇಕು. ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಎಲ್ಲ ಪತ್ರಕರ್ತರಿಗೂ ಕಿಟ್ ವಿತರಿಸಬೇಕು ಎಂದು ಹೇಳಿದರು.

ಬೀದರ್ ಜಿಲ್ಲೆಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹೆಸರು ನೋಂದಣಿ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಹೀಗಾಗಿ ಬೀದರ್ ಜಿಲ್ಲೆಗೆ ನೋಂದಣಿ ಮಳಿಗೆ ಇರುವುದಿಲ್ಲ. ಜಿಲ್ಲೆಯ ಸದಸ್ಯರಿಗೆ ಸಮ್ಮೇಳನದ ನಂತರ ನಡೆಸಲಾಗುವ ಔತಣಕೂಟ ಸಮಾರಂಭದಲ್ಲಿ ಕಿಟ್ ವಿತರಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಮಹಿಳಾ ಸಮಿತಿಯ ಸಭೆಯನ್ನೂ ನಡೆಸಲಾಯಿತು. ಸಭೆಯಲ್ಲಿ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ರಾಜ್ಯದ ವಿವಿಧೆಡೆಯ ಪತ್ರಕರ್ತೆಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆನಂದ ದೇವಪ್ಪ ತಿಳಿಸಿದರು.

ಸಾರಿಗೆ, ವಸತಿ ಮೊದಲಾದ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಡಾಕ್ ಸಮಿತಿ ಸದಸ್ಯ ಅಪ್ಪಾರಾವ್ ಸೌದಿ, ನೋಂದಣಿ ಹಾಗೂ ಕಿಟ್ ವಿತರಣೆ ಸಮಿತಿಯ ಪ್ರಧಾನ ಸಂಚಾಲಕ ಗುರುನಾಥ ಗಡ್ಡೆ, ಸಂಚಾಲಕ ಬಸವರಾಜ ಪವಾರ್, ಸಹ ಸಂಚಾಲಕ ಸ್ವಾಮಿದಾಸ್ ನಾಗೂರೆ, ಮಹಿಳಾ ಸಮಿತಿಯ ಕೀರ್ತಿ ಸೇನಾ, ಸುಷ್ಮಿತಾ, ಸುಧಾರಾಣಿ ಮತ್ತಿತರರು ಇದ್ದರು

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

शेअर करा.

Chief Editor Keerthi Sena

Samruddiya Nele is a digital magazine, to connect with people with latest updates on every moment news, not only to serve the needy but also to serve the nation.

Related Articles

Leave a Reply

Your email address will not be published. Required fields are marked *

Back to top button
Don`t copy text!